ನಟ ವಿಜಯರಾಘವೇಂದ್ರ ಪತ್ನಿಗೆ ವಿದೇಶದಲ್ಲಿ ಹೃದಯಾಘಾತ; ವಿಧಿವಶ…

soand
Published on

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ವಿದೇಶದಲ್ಲಿ ಇಂದು ಹೃದಯಾಘಾತದಿಂಧ ನಿಧನರಾಗಿದ್ದಾರೆ.

ಹೃದಯಾಘಾತದಿಂದ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ! - themangaloremirror.in

ಅವರು ತಮ್ಮ ಪತಿ ವಿಜಯ್ ಜತೆಗೆ ಬ್ಯಾಂಕಾಕ್‍ಗೆ ತೆರಳಿದ್ದರು. ಈ ವೇಳೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಜತೆಗೆ ಲೋ ಬಿಪಿ ಕೂಡ ಇದ್ದು ಅದೂ ಸಾವಿಗೆ ಕಾರಣ ಎನ್ನಲಾಗಿದೆ.

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾದಿಂದ ನಿಧನ - News Karkala

ಅವರ ಸಾವು ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. ವಿಜಯರಾಘವೇಂದ್ರ- ಸ್ಪಂದನ ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನೂ ಇದ್ದಾನೆ. ನಟಿ ಸ್ಪಂದನಾ, 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಅವರು ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿದ್ದು ವಿಜಯರಾಘವೇಂದ್ರ ಅವರನ್ನು 2007, ಆಗಸ್ಟ್ 26 ರಂದು ಮದುವೆಯಾಗಿದ್ದರು. ವಿಜಯರಾಘವೇಂದ್ರ ಹಾಗೂ ಸ್ಪಂದನಾರದ್ದು ಪ್ರೇಮವಿವಾಹವಾಗಿತ್ತು. ದಂಪತಿಯ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇದ್ದಾಗ ಈ ದುರಂತ ನಡೆದಿದ್ದು ದುಃಖಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net