

ನವದೆಹಲಿ: ಉತ್ತರ ಪ್ರದೇಶದ ಭಡೋಹಿ ಪೋಲಿಸರು, ಭಾನುವಾರ ಉದ್ಯಮಿಯೂ ಆಗಿರುವ 35 ವರ್ಷದ ವಾಟ್ಸಾಪ್ ಗುಂಪಿನ ಎಡ್ಮಿನ್‍ಅನ್ನು ಬಂಧಿಸಿದ್ದಾರೆ. ಈ ಗುಂಪಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ವಿರುದ್ಧ ‘ಅವಹೇಳನಕಾರಿ’ ಕಾಮೆಂಟ್ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಪೊಲೀಸರು, “ಈ ಪ್ರಕರಣದಲ್ಲಿ ಎಡ್ಮಿನ್‍ಅನ್ನು ಬಂಧಿಸಿದ್ದು ಏಕೆಂದರೆ ನಿರ್ವಾಹಕರಾಗಿ ಅವರು ಕಾಮೆಂಟ್ ಪೋಸ್ಟ್ ಮಾಡಿದ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದು ತಿಳಿಸಿದ್ದಾರೆ.
ಬಂಧಿತ ಗ್ರೂಪ್ ಎಡ್ಮಿನ್‍ರನ್ನು ಭಡೋಹಿಯಲ್ಲಿನ ಥ್ರೆಡ್ ವ್ಯವಹಾರವನ್ನು ಹೊಂದಿರುವ ಸಹಬುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಜಯ್ ಕುಮಾರ್ ಸೇಥ್ ಹೇಳಿದ್ದಾರೆ. “ಆ ಸಂದೇಶವನ್ನು ಅಳಿಸುವ ಬದಲು ಹಾಗೂ ಪೋಸ್ಟ್ ಮಾಡಿದ ಸದಸ್ಯರನ್ನು ಗುಂಪಿನಿಂದ ತೆಗೆದುಹಾಕುವ ಬದಲು ಅವರು ಮೌನವಾಗಿದ್ದರು. ಆದಾಗ್ಯೂ, ಗುಂಪಿನ ಹಲವಾರು ಸದಸ್ಯರು ಇದಕ್ಕೆ ಆಕ್ಷೇಪಣೆಯನ್ನು ಎತ್ತಿದರು” ಎಂದು ಸೇಥ್ ಹೇಳಿದರು.
ಇದನ್ನೂ ಓದಿ: ಜನೋಪಯೋಗಿ ಕೆಲಸ ಮಾಡಲು ಸಲಹೆ
ಪೊಲೀಸರ ಪ್ರಕಾರ, ಕಾಮೆಂಟ್ ಮಾಡಿದ ವಾಟ್ಸಾಪ್ ಗುಂಪಿನ ಹೆಸರು, ‘ನಗರ್ ಪಾಲಿಕಾ ಪ್ಯಾರಿಷ್ ಭಡೋಹಿ’. ಜನರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಇದನ್ನು ಬಳಸುತ್ತಾರೆ. ಈ ಗುಂಪಿನಲ್ಲಿ ನಗರ ಪಾಲಿಕೆಯ ನೌಕರರು ಸೇರಿದಂತೆ ಸ್ಥಳೀಯ ನಿವಾಸಿಗಳು ಸೇರಿದಂತೆ 418 ಸದಸ್ಯರು ಇದ್ದಾರೆ.
ಪೊಲೀಸರು ಈಗ ಆರೋಪಿ ಅನ್ಸರಿಯನ್ನು ಹುಡುಕುತ್ತಿದ್ದು ಭಡೋಹಿಯಿಂದ ಬಂದ ಅನ್ಸಾರಿ ನೇಪಾಳದಲ್ಲಿ ವ್ಯವಹಾರವನ್ನು ನಡೆಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. “ನಾವು ಭಡೋಹಿಯಲ್ಲಿರುವ ಅನ್ಸಾರಿ ಮನೆಯಲ್ಲಿ ದಾಳಿ ನಡೆಸಿದ್ದೇವೆ. ಹೆಂಡತಿ ಮತ್ತು ಮಕ್ಕಳು ಸೇರಿದಂತೆ ಅವರ ಕುಟುಂಬ ಸದಸ್ಯರು ಅವರು ( ಅನ್ಸಾರಿ ) ನೇಪಾಳದಲ್ಲಿದ್ದಾರೆ ಮತ್ತು ಕಳೆದ ಮೂರು ತಿಂಗಳಿನಿಂದ ಮನೆಗೆ ಮರಳಿಲ್ಲ ಎಂದು ಹೇಳಿದರು. ಅವನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ, ” ಸೇಥ್ ಹೇಳಿದರು.
ಪೊಲೀಸರ ಪ್ರಕಾರ, ವಾಟ್ಸ್ಆ‍್ಯಪ್ ಗುಂಪಿನಲ್ಲಿ ಆಕ್ಷೇಪಾರ್ಹ ಕಾಮೆಂಟ್ ನ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡುವ ಮೂಲಕ ಮಾಹಿತಿದಾರರು ಆಗಸ್ಟ್ 4 ರಂದು ಆರಂಭಿಕ ಟ್ವಿಟರ್ ಮೂಲಕ ದೂರು ನೀಡಿದರು. ಅವರು ಸೈಬರ್ ಸೆಲ್ ಸಹಾಯದಿಂದ ವಿಚಾರಣೆಯನ್ನು ಪ್ರಾರಂಭಿಸಿದ್ದು ದೂರು ನಿಜವೆಂದು ಕಂಡುಕೊಂಡರು. ವಿಚಾರಣೆಯ ಸಮಯದಲ್ಲಿ, ಇತರ ವಾಟ್ಸಾಪ್ ಗುಂಪುಗಳಲ್ಲಿಯೂ ಈ ಕಾಮೆಂಟ್ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು FIRನಲ್ಲಿ ಐಪಿಸಿ ವಿಭಾಗಗಳು (500 ಮಾನಹಾನಿ), 504 (ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ), 505 ( 2 ) ಮತ್ತು 506 ( ಕ್ರಿಮಿನಲ್ ಬೆದರಿಕೆ ) ಹಾಗೂ ಸಮುದಾಯಗಳ ನಡುವಿನ ದ್ವೇಷ, ಅಥವಾ ಕೆಟ್ಟ ಇಚ್ಛೆಯನ್ನು ರಚಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಇವು ಕ್ರಿಮಿನಲ್ ಕಾನೂನು ( ತಿದ್ದುಪಡಿ ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಆಹ್ವಾನಿಸಿದರು. (ಏಜೆನ್ಸೀಸ್)