

ಪ್ರಯಾಗರಾಜ್: ಕೆಲವು ತಿಂಗಳಿನ ಹಿಂದೆ ಗುಂಡಿನ ದಾಳಿನಲ್ಲಿ ಮೃತಪಟ್ಟ ಗ್ಯಾಂಗ್ಸ್ಟರ್-ರಾಜಕಾರಣಿ ಅತಿಕ್ ಅಹ್ಮದ್ನಿಂದ ವಶಪಡಿಸಿಕೊಂಡ ಜಮೀನಿನಲ್ಲಿ ನಿರ್ಮಿಸಲಾದ 76 ಫ್ಲ್ಯಾಟ್‌ಗಳನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಬಡವರಿಗೆ ಹಸ್ತಾಂತರಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಈ 76 ಫ್ಲ್ಯಾಟ್‌ಗಳನ್ನು ಪರಿಶೀಲಿಸಿ ಸಿಎಂ, ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಡಾ. ಸುಧಾಕರ್!
ಈ ಸಮಾರಂಭದಲ್ಲಿ ಮಾತನಾಡಿದ ಸಿಎಂ, 2017ರ ಮೊದಲು ಉತ್ತರಪ್ರದೇಶದಲ್ಲಿ ಮಾಫಿಯಾ ಬಡವರ, ಉದ್ಯಮಿಗಳ ಅಥವಾ ಸರ್ಕಾರಿ ಸಂಸ್ಥೆಗಳ ಭೂಮಿಯನ್ನು ಕಬಳಿಸುತ್ತಿತ್ತು. ಆಗ ಬಡವರು ಅಸಹಾಯಕರಾಗಿ ನೋಡುತ್ತಿದ್ದರು. ಈಗ ನಾವು ಅದೇ ಭೂಮಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದೇವೆ. ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು, ಪ್ರತಿ ಫ್ಲಾಟ್ 41 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು. ಎರಡು ಕೊಠಡಿ ಜತೆಗೆ ಒಂದು ಅಡುಗೆಮನೆ ಮತ್ತು ಶೌಚಾಲಯವನ್ನು ಹೊಂದಿದೆ. ಫ್ಲಾಟ್‌ಗಳಿಗಾಗಿ 6000ಕ್ಕೂ ಹೆಚ್ಚು ಜನರು ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕೇವಲ 1590 ಜನರು ಹಂಚಿಕೆ ಲಾಟರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು. ಕೊನೆಗೆ ಈ ಫ್ಲ್ಯಾಟ್‌ಗಳನ್ನು ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.(ಏಜೆನ್ಸೀಸ್)