More

    ಅಯೋಧ್ಯೆಯ ಶ್ರೀರಾಮನಿಗಾಗಿ 400 ಕೆಜಿ ತೂಕದ 10 ಅಡಿ ಎತ್ತರದ ಬೀಗ ತಯಾರಿಸಿದ ವೃದ್ಧ!

    ಅಲಿಗಢ: ಕೈಯಿಂದ ತಯಾರಿಸಿದ ಬೀಗಗಳಿಗೆ ಹೆಸರುವಾಸಿಯಾದ ಅಲಿಗಢದ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ರಾಮ ಮಂದಿರಕ್ಕಾಗಿ 400 ಕೆಜಿ ತೂಕದ ಬೀಗವನ್ನು ತಯಾರಿಸಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ಮುಂದಿನ ವರ್ಷದ ಜನವರಿಯಲ್ಲಿ ಭಕ್ತರಿಗೆ ತೆರೆಯುವ ನಿರೀಕ್ಷೆಯಿದೆ.

    ಶ್ರೀ ರಾಮನ ಕಟ್ಟಾ ಭಕ್ತರಾದ ಸತ್ಯ ಪ್ರಕಾಶ್ ಶರ್ಮಾ ಅವರು ಈ ವರ್ಷದ ಕೊನೆಯಲ್ಲಿ ರಾಮ ದೇವಾಲಯದಕ್ಕೆ ಉಡುಗೊರೆಯಾಗಿ ನೀಡಲು ಯೋಜಿಸಿರುವ “ವಿಶ್ವದ ಅತಿದೊಡ್ಡ ಬೀಗ”ವನ್ನು ತಯಾರಿಸಲು ತಿಂಗಳುಗಳ ಕಾಲ ಶ್ರಮಿಸಿದ್ದಾರೆ.

    ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು “ನಾವು ಹಲವಾರು ಭಕ್ತರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದು ಬೀಗವನ್ನು ಎಲ್ಲಿ ಬಳಸಬಹುದು ಎಂಬುದನ್ನು ನೋಡಬೇಕಾಗಿದೆ” ಎಂದು ಹೇಳಿದರು.

    ಇದನ್ನೂ ಓದಿ: ಕಡಿಮೆ ವೆಚ್ಚದಲ್ಲಿ ಕಾಶಿ, ಅಯೋಧ್ಯೆ, ಪ್ರಯಾಗರಾಜ್‌ ದರ್ಶನಕ್ಕೆ ಅವಕಾಶ!; ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ

    ತಮ್ಮ ಕುಟುಂಬವು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಕೈಗಳಿಂದಲೇ ಬೀಗಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿದೆ. ಆದರೆ ಅವರು 45 ವರ್ಷಗಳಿಂದ ‘ತಾಲಾ ನಗರಿ’ ಅಥವಾ ಬೀಗಗಳ ನಾಡು ಎಂದೂ ಕರೆಯಲ್ಪಡುವ ಅಲಿಗಢದಲ್ಲಿ ಬೀಗಗಳನ್ನು ತಯಾರಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಾಗಿ ಎಂದು ಶರ್ಮಾ ಹೇಳಿದರು.

    ರಾಮ ಮಂದಿರವನ್ನು ಗಮನದಲ್ಲಿಟ್ಟುಕೊಂಡು ಅವರು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಿರುವ ದೈತ್ಯ ಬೀಗವನ್ನು ತಯಾರಿಸಿದ್ದು ಅದಕ್ಕೆ ನಾಲ್ಕು ಅಡಿಯಷ್ಟು ದೊಡ್ಡ ಕೀಲಿಕೈ ಕೂಡ ನಿರ್ಮಿಸಿದ್ದಾರೆ ಎಂದು ಶರ್ಮಾ ಹೇಳಿದರು.

    ಈ ವರ್ಷದ ಆರಂಭದಲ್ಲಿ ನಡೆದ ವಾರ್ಷಿಕ ಅಲಿಗಢ ವಸ್ತುಪ್ರದರ್ಶನದಲ್ಲಿ ಲಾಕ್ ಅನ್ನು ಪ್ರದರ್ಶಿಸಲಾಗಿದ್ದು ಸಣ್ಣ ಮಾರ್ಪಾಡುಗಳನ್ನು ಮಾಡುವಲ್ಲಿ ಮತ್ತು ತನ್ನ ಸೃಷ್ಟಿಗೆ ಅಲಂಕಾರಗಳನ್ನು ಸೇರಿಸುವಲ್ಲಿ ನಿರತರಾಗಿರುವ ಶ್ರೀ ಶರ್ಮಾ, ಇದು ಪರಿಪೂರ್ಣವಾಗಿರಬೇಕು ಎಂದು ಬಯಸುತ್ತಾರೆ ಎಂದು ಹೇಳಿದರು.

    “ಈ ಹಿಂದೆ ನಾವು 6 ಅಡಿ ಎತ್ತರದ 3 ಅಡಿ ಅಗಲದ ಬೀಗವನ್ನು ತಯಾರಿಸಿದ್ದೇವೆ. ಆದರೆ ಕೆಲವರು ಇನ್ನಷ್ಟು ದೊಡ್ಡ ಬೀಗವನ್ನು ಮಾಡಲು ಸಲಹೆ ನೀಡಿದರು, ಆದ್ದರಿಂದ ನಾವು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ” ಎಂದು ರುಕ್ಮಿಣಿ ಹೇಳಿದರು.

    ಶರ್ಮಾ ಅವರ ಪ್ರಕಾರ, ಬೀಗವನ್ನು ತಯಾರಿಸಲು ಅವರಿಗೆ ಸುಮಾರು 2 ಲಕ್ಷ ರೂ.ಗಳು ಖರ್ಚಾಗಿದ್ದು ಅವರು ತಮ್ಮ ಕನಸಿನ ಯೋಜನೆಯನ್ನು ನನಸಾಗಿಸಲು ತಮ್ಮ ಜೀವನದ ಉಳಿತಾಯವನ್ನು ಸ್ವಇಚ್ಛೆಯಿಂದ ಇದಕ್ಕಾಗಿ ಸುರಿದಿದ್ದಾರೆ.

    “ನಾನು ದಶಕಗಳಿಂದ ಬೀಗ ತಯಾರಿಸುವ ವ್ಯವಹಾರದಲ್ಲಿದ್ದೇನೆ. ಅದಲ್ಲದೇ ನಮ್ಮ ನಗರವು ಬೀಗಗಳಿಗೆ ಹೆಸರುವಾಸಿಕೂಡ ಹೌದು. ಹೀಗಾಗಿ ರಾಮ ಮಂದಿರದ ದೇವಾಲಯಕ್ಕೆ ದೈತ್ಯ ಬೀಗವನ್ನು ಮಾಡಲು ನಾನು ಯೋಚಿಸಿದೆ. ಈ ಹಿಂದೆ ಯಾರೂ ಈ ರೀತಿ ಮಾಡಿಲ್ಲ” ಎಂದು ಅವರು ಹೇಳಿದರು.

    ಏತನ್ಮಧ್ಯೆ, ದೇವಾಲಯದ ಟ್ರಸ್ಟ್ ಮುಂದಿನ ವರ್ಷ ಜನವರಿ 21, 22 ಮತ್ತು 23 ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನಾ ಸಮಾರಂಭವನ್ನು ನಡೆಸಲಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನವನ್ನು ಕಳುಹಿಸಲಾಗುವುದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಶುಕ್ರವಾರ ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts