More

    2014ರಲ್ಲಿ 300 ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್​ಅಪ್​: ಕೇಂದ್ರ ಸರ್ಕಾರವನ್ನು ಕೊಂಡಾಡಿದ ಟೆಕ್ನಿಕಲ್​ ಗುರೂಜಿ!

    ನವದೆಹಲಿ: ಡಿಜಿಟಲ್​ ಆರ್ಥಿಕತೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗದುಕೊಂಡಿರುವ ಕ್ರಮಗಳನ್ನು ಟೆಕ್ನಿಕಲ್​ ಗುರೂಜಿ ಎಂದೇ ಖ್ಯಾತಿಯಾಗಿರುವ ಯೂಟ್ಯೂಬರ್​ ಗೌರವ್​ ಚೌಧರಿ ಅವರು ಕೊಂಡಾಡಿದರು. 2014ರಲ್ಲಿ ಕೇವಲ 300 ಸ್ಟಾರ್ಟ್​ಅಪ್​ಗಳಿದ್ದವು ಇಂದು 1 ಲಕ್ಷಕ್ಕೂ ಅಧಿಕ ಸ್ಟಾರ್ಟ್​ಅಪ್​ಗಳು ಇವೆ ಎಂದು ಹೇಳಿದರು.

    ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ ಅವರು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ “ವಿಶೇಷ ಸಂಪರ್ಕ ಅಭಿಯಾನ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌರವ್​ ಚೌಧರಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಕೇಂದ್ರ ಸರ್ಕಾರವನ್ನು ಮನಸಾರೆ ಹೊಗಳಿದರು.

    ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಕೇಂದ್ರ ಸರ್ಕಾರದ ಯೋಜನೆಗಳು ಒಟ್ಟಾರೆಯಾಗಿ ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಿರುವುದನ್ನು ನಾವು ಇಷ್ಟು ವರ್ಷಗಳಲ್ಲಿ ನೋಡಿದ್ದೇವೆ. ವ್ಯಾಪಾರದ ಬಗ್ಗೆ ಮಾತನಾಡುವುದಾದರೆ, ಅವುಗಳಿಗೆ ಲಾಭವೂ ಸಿಕ್ಕಿದೆ. ಹೀಗಾಗಿಯೇ ಭಾರತವು ವಿಶ್ವದಕ್ಕೇ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿದೆ. ಕೇಂದ್ರ ಸರ್ಕಾರದ ಈ ಕ್ರಮಗಳು ಡಿಜಿಟಲ್ ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡಲಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದು ಟೆಕ್ನಿಕಲ್ ಗುರೂಜಿ ಹೇಳಿದರು.

    ಇನ್ನು ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಸರ್ಕಾರದ ಯೋಜನೆಗಳು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸುವುದಲ್ಲದೆ ವ್ಯವಹಾರಗಳಿಗೆ ಗಣನೀಯ ಪ್ರಯೋಜನಗಳನ್ನು ಸಹ ಒದಗಿಸಿವೆ ಎಂದರು. ಇದರೊಂದಿಗೆ ಡಿಜಿಟಲ್ ಪಾವತಿಗಳ ಪಾತ್ರ ಮತ್ತು ಆರ್ಥಿಕ ದಕ್ಷತೆ ಹಾಗೂ ದೇಶದ ಬೆಳವಣಿಗೆಗೆ ಅದರ ಕೊಡುಗೆಯನ್ನು ಒತ್ತಿ ಹೇಳಿದರು. ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಗೌರವ್​, ಡಿಜಿಟಲ್ ವಲಯವು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದರು.

    ಅಂದಹಾಗೆ ಮೇ 20 ರಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ನಿವಾಸದಲ್ಲಿ ‘ವಿಶೇಷ ಸಂಪರ್ಕ ಅಭಿಯಾನ’ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಡಿಜಿಟಲ್ ರೂಪಾಂತರ ಮತ್ತು ಭವಿಷ್ಯದ ಸಾಮರ್ಥ್ಯದ ಕುರಿತು ಚರ್ಚಿಸಲು ಪ್ರಮುಖ ಐಟಿ ವೃತ್ತಿಪರರು, ನವೋದ್ಯಮಿಗಳು, ಸ್ಟಾರ್ಟಪ್ ನಾಯಕರು ಮತ್ತು ಬುದ್ಧಿಜೀವಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಾಯಿತು.

    ಈ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತ ಮಾಡಿರುವ ಮಹತ್ವದ ದಾಪುಗಾಲುಗಳು ಮತ್ತು ವಿವಿಧ ಕ್ಷೇತ್ರಗಳ ಮೇಲೆ ಅದರ ಪ್ರಭಾವದ ಕುರಿತು ಚರ್ಚೆಗಳನ್ನು ನಡೆಸಲಾಯಿತು. ಸರ್ಕಾರದ ಉಪಕ್ರಮಗಳು ಡಿಜಿಟಲ್ ಕ್ರಾಂತಿಯನ್ನು ಹೇಗೆ ವೇಗಗೊಳಿಸಿವೆ? ಆರ್ಥಿಕ ಬೆಳವಣಿಗೆಗೆ ಹೇಗೆ ಕೊಡುಗೆ ನೀಡುತ್ತವೆ ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಹೇಗೆ ಸುಧಾರಿಸುತ್ತದೆ? ಎಂಬುದನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ವಿವರಿಸಿದರು. (ಏಜೆನ್ಸೀಸ್)

    ಶೇ. 42ರ ಬೆಳವಣಿಯೊಂದಿಗೆ ಸ್ಮಾರ್ಟ್​ಫೋನ್​ಗಳು ಇದೀಗ ಭಾರತದ ನಾಲ್ಕನೇ ಅತಿದೊಡ್ಡ ರಫ್ತು ವಸ್ತು!

    ‘ಪ್ರಧಾನಿ ಮೋದಿಗೆ ಗೆಲುವು ಖಚಿತ…’ ಬಿಜೆಪಿಗೆ 295-315 ಸ್ಥಾನ ಪಕ್ಕಾ; ಭವಿಷ್ಯ ನುಡಿದ ಇಯಾನ್ ಬ್ರೆಮ್ಮರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts