More

    ಮನ್ ಕಿ ಬಾತ್ | ಚಾಮರಾಜನಗರ ವ್ಯಕ್ತಿಗೆ ಲಾಲಿಹಾಡು ವಿಭಾಗದಲ್ಲಿ ಮೊದಲ ಪ್ರಶಸ್ತಿ ಘೋಷಿಸಿದ ಪ್ರಧಾನಿ ಮೋದಿ

    ನವದೆಹಲಿ: ಚಾಮರಾಜನಗರ ಜಿಲ್ಲೆಯ ವಿ.ಎಂ ಮಂಜುನಾಥ್ ಎಂಬುವವರು ಲಾಲಿಹಾಡು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್​ ಕಿ ಬಾತ್​ನಲ್ಲಿ ಘೋಷಿಸಿದ್ದಾರೆ. ಮಲಗು ಕಂದಾ ಹಾಡಿನ ಕೆಲ ಸಾಲುಗಳನ್ನು ಮನ್​ಕಿ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಳಿಸಿಕೊಂಡಿದ್ದರು. ಗೀತೆ ಹಾಗೂ ಲಾಲಿ ಹಾಡಿನಂತೆಯೇ ರಂಗೋಲಿ ಸ್ಪರ್ಧೆಯು ಕೂಡ ನಡೆದಿತ್ತು, ಇದೇ ವೇಳೆ ಮೋದಿ ಭಾರತದ ಆಟಿಕೆಗಳು ಹಾಗೂ ಕಥೆ ಹೇಳುವ ರೂಪಗಳ ಬಗ್ಗೆ ಮಾತನಾಡಿದರು.

    ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದ 98 ನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡಿದರು. ಯುಪಿಐ ವ್ಯವಸ್ಥೆ ಮತ್ತು ಇ-ಸಂಜೀವಿನಿ ಆ್ಯಪ್ ಡಿಜಿಟಲ್ ಇಂಡಿಯಾ ಶಕ್ತಿಗೆ ಪ್ರಬಲ ಉದಾಹರಣೆಗಳಾಗಿವೆ. ಅನೇಕ ರಾಷ್ಟ್ರಗಳು ಇಂದು ದೇಶದ ಯುಪಿಐ ವ್ಯವಸ್ಥೆಗೆ ಆಕರ್ಷಿತವಾಗಿದ್ದು, ಕೆಲ ದಿನಗಳ ಹಿಂದೆ ಭಾರತ ಮತ್ತು ಸಿಂಗಾಪುರದ ನಡುವೆ UPI-PayNow ಆರಂಭಿಸಲಾಗಿದೆ. ಇ-ಸಂಜೀವಿನಿ ಆ್ಯಪ್ ಮುಖಾಂತರ ವೀಡಿಯೊ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ಸಲಹೆ ಪಡೆಯಬಹುದು ಎಂದು ಹೇಳಿದರು.

    ಇದನ್ನೂ ಓದಿ: ನಾಳೆ ಬೆಳಗಾವಿಗೆ ಪ್ರಧಾನಿ ಮೋದಿ; ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಂದೂಡಿಕೆ

    ಮನ್​ ಕಿ ಬಾತ್​ನಲ್ಲಿ ಕಲೆ ಸಂಸ್ಕೃತಿಗಳ ಬಗ್ಗೆ ಪ್ರಧಾನಿ ಮಾತನಾಡುತ್ತಾ, ನಮ್ಮ ದೇಶದಲ್ಲಿ ಶ್ರೀಮಂತವಾದ ಅನೇಕ ಸಂಸ್ಕೃತಿಗಳಿವೆ. ಇದು ಕಣ್ಮರೆಯಾಗಬಾರದು. ಹೀಗಾಗಿ ಸಾರ್ವಜನಿಕ ಸಹಕಾರದೊಂದಿಗೆ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

    ಇದನ್ನೂ ಓದಿ: ಅಕ್ವೇರಿಯಂನಲ್ಲಿದ್ದ ಮೀನು ಸತ್ತಿದ್ದಕ್ಕೆ ತಾನೂ ಜೀವ ಬಿಟ್ಟ 8ನೇ ತರಗತಿ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts