More

    ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಆ್ಯಂಕರ್ ಮೇಲೆ ಗುಂಡಿನ ದಾಳಿ; ಪ್ರಾಣಾಪಾಯದಿಂದ ಪಾರು

    ಲಾಹೋರ್‌: ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಆ್ಯಂಕರ್ ಮಾರ್ವಿಯಾ ಮಲಿಕ್ ಮೇಲೆ ಬಂಧೂಕುಧಾರಿಯೊಬ್ಬ ದಾಳಿ ಮಾಡಿದ ಘಟನೆ ಲಾಹೋರ್​ನಲ್ಲಿ ನಡೆದಿದೆ. ಅದೃಷ್ಟವಶಾತ್​ ನಿರೂಪಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

    ನಿರೂಪಕಿ ಮಾರ್ವಿಯಾ ಮಲಿಕ್ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿ ಬಂದೂಕಿನಿಂದ ದಾಳಿ ಮಾಡಿದ್ದಾನೆ. ಈ ಬಗ್ಗೆ ಮಲಿಕ್ ಠಾಣೆಗೆ ತೆರಳಿ ಪೊಲೀಸ್ ದೂರು ನೀಡಿದ್ದಾಳೆ. ಈ ವೇಳೆ ತೃತೀಯ ಲಿಂಗಿಗಳ ಪರ ಧ್ವನಿ ಎತ್ತಿದ್ದಕ್ಕಾಗಿ ನನಗೆ ಕೆಲ ಸಮಯದಿಂದ ನಿತ್ಯ ಬೆದರಿಕೆ ಕರೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಕಲ್ಲು ಹೊಡೆದ ದುಷ್ಕರ್ಮಿಗಳು; ಕಿಟಕಿ ಗಾಜುಗಳಿಗೆ ಹಾನಿ

    ಸದ್ಯ ಜೀವಭಯದಿಂದ ಮಾರ್ವಿಯಾ ಮಲಿಕ್ ಲಾಹೋರ್ ತೊರೆದು ಇಸ್ಲಾಮಾಬಾದ್​ಗೆ ಸ್ಥಳಾಂತರಗೊಂಡಿದ್ದಾಳೆ. ಮಲಿಕ್ ಶಸ್ತ್ರಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಲಾಹೋರ್‌ಗೆ ಬಂದಿದ್ದಳು ಎಂದು ಪಾಕಿಸ್ತಾನಿ ಮಾಧ್ಯಮವಾದ ದಿ ಡಾನ್ ವರದಿ ಮಾಡಿದೆ.

    ಮಾರ್ವಿಯಾ ಮಲಿಕ್ ತನ್ನ ಕುಟುಂಬದಿಂದ ನಿರಾಕರಣೆಗೆ ಒಳಪಟ್ಟ ನಂತರ 2018 ರಲ್ಲಿ ಸುದ್ದಿ ನಿರೂಪಕಿಯಾಗುವ ಮೂಲಕ ಮೊದಲ ತೃತೀಯ ಲಿಂಗಿ ಸುದ್ದಿ ನಿರೂಪಕಿ ಎಂದು ಗುರುತಿಸಿಕೊಂಡಿದ್ದಳು. 21ನೇ ವಯಸ್ಸಿನಲ್ಲಿ ಈ ನಿರೂಪಕಿಯಾಗಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡಾಗ ಜನರು ಪ್ರೋತ್ಸಾಹಕ ಪ್ರತಿಕ್ರಿಯೆ ನೀಡಿದ್ದರು. (ಏಜೆನ್ಸೀಸ್)

    ಇದನ್ನೂ ಓದಿ: ಮದುವೆಯ ದಿನ ಮೊಬೈಲ್​ ಸ್ವಿಚ್​ ಆಫ್ ಮಾಡಿ ಬಚ್ಚಿಟ್ಟುಕೊಂಡ ವರ​: ನಂತರ ನಡೆದಿದ್ದು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts