More

    ಮ್ಯಾನ್​ಹೋಲ್ ಸ್ವಚ್ಛತೆಗೆ ರೋಬಾಟ್: ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಬಳಕೆ

    ಗುರುವಾಯೂರು: ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಯಾಂತ್ರಿಕ ಜಲಗಾರವನ್ನು (ರೋಬಾಟಿಕ್ ಸ್ಕ್ಯಾವೆಂಜರ್ಸ್) ಬಳಸಿದ ದೇಶದ ಮೊದಲ ರಾಜ್ಯವೆಂಬ ಖ್ಯಾತಿಗೆ ಕೇರಳ ಭಾಜನವಾಗಿದೆ.

    ಒಳಚರಂಡಿ ಹಾಗೂ ಮಲದ ಗುಂಡಿಗಳನ್ನು ಮಾನವರು ಸ್ವಚ್ಛಗೊಳಿಸುವ ಅಪಾಯಕಾರಿ ಹಾಗೂ ಮಾನವ ಘನತೆಗೆ ಮಾರಕವಾದ ಪದ್ಧತಿಯನ್ನು ನಿವಾರಿಸುವಲ್ಲಿ ಈ ರೋಬಾಟಿಕ್ ಸ್ಕಾ್ಯವೆಂಜರ್ ಮಹತ್ವದ ಪಾತ್ರ ವಹಿಸಬಹುದೆಂದು ನಿರೀಕ್ಷಿಸಲಾಗಿದೆ.

    ಇದನ್ನೂ ಓದಿ: ವಿಜಯಪುರದಲ್ಲಿ ತಡರಾತ್ರಿ ಗುಡಿಸಲಿಗೆ ಆಕಸ್ಮಿಕ ಬೆಂಕಿ: ಮಲಗಿದ್ದಲ್ಲೇ ವೃದ್ಧ ದಂಪತಿ ಸಜೀವ ದಹನ

    ಕೇರಳ ಮೂಲದ ಜನ್​ರೋಬಾಟಿಕ್ಸ್ ಅಭಿವೃದ್ಧಿ ಪಡಿಸಿರುವ ’ಬಂಡಿಕೂಟ್’ ಎಂಬ ಈ ಯಂತ್ರವನ್ನು ದೇವಸ್ಥಾನಗಳ ನಗರ ಗುರುವಾಯೂರಿನಲ್ಲಿ ಬಂಡಿಕೂಟ್​ಗೆ ಶುಕ್ರವಾವಾರ ಚಾಲನೆ ನೀಡುವ ಮೂಲಕ ಇದನ್ನು ಬಳಕೆ ಮಾಡಿದ ಮೊದಲ ರಾಜ್ಯವೆಂಬ ಖ್ಯಾತಿಗೆ ಕೇರಳ ಭಾಜನವಾಯಿತು. ಜಲ ಸಂಪನ್ಮೂಲಗಳ ಸಚಿವೆ ರೋಶಿ ಆಗಸ್ಟಿನ್, ಕೇರಳ ಜಲ ಪ್ರಾಧಿಕಾರ ತ್ರಿಶೂರು ಜಿಲ್ಲೆಯಲ್ಲಿ ಕೈಗೊಂಡ ಗುರುವಾಯೂರು ಒಳಚರಂಡಿ ಯೋಜನೆಯಡಿಯಲ್ಲಿ ಬಂಡಿಕೂಟಕ್ಕೆ ಚಾಲನೆ ನೀಡಿದರು. ರಾಜ್ಯ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಡಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

    ಯಂತ್ರದ ಮುಖ್ಯ ಭಾಗವಾದ ರೋಬಾಟಿಕ್ ಟ್ರೋನ್ ಘಟಕವು ಚರಂಡಿಯನ್ನು ಪ್ರವೇಶಿಸಿ ಮಾನವ ಕೈಗಳ ರೀತಿಯಲ್ಲೇ ರೋಬಾಟಿಕ್ ಕೈಗಳು ಗಲೀಜನ್ನು ಸ್ವಚ್ಛಗೊಳಿಸುತ್ತದೆ. ಈ ಯಂತ್ರ ವಾಟರ್​ಪ್ರೂಫ್ ಆಗಿದ್ದು ಎಚ್​ಡಿ ವಿಜನ್ ಕ್ಯಾಮರಾ ಮತ್ತು ಸೆನ್ಸರ್​ಗಳನ್ನು ಹೊಂದಿವೆ. ಅವುಗಳು ಚರಂಡಿಯಲ್ಲಿರುವ ಅಪಾಯಕಾರಿ ಅನಿಲವನ್ನು ಪತ್ತೆ ಹಚ್ಚಲು ನೆರವಾಗುತ್ತವೆ.

    ಇದನ್ನೂ ಓದಿ: ಟೊಮ್ಯಾಟೋ ತಮನ್ನಾ: ಶುಭಾಶಯ ತಿಳಿಸಿದ ಗೆಳತಿಯ ಕಾಲೆಳೆದ ವಿಜಯ್ ವರ್ಮಾ

    ಸ್ಟಾರ್ಟಪ್ ಮಿಷನ್: ಕೇರಳ ಸ್ಟಾರ್ಟಪ್ ಮಿಷನ್ (ಕೆಎಸ್​ಯುಎಂ) ಈಚೆಗೆ ಏರ್ಪಡಿಸಿದ್ದ ಹಡಲ್ ಗ್ಲೋಬಲ್-2022 ಸಮಾವೇಶದಲ್ಲಿ ಬಂಡಿಕೂಟ್ ‘ಕೇರಳದ ಹೆಮ್ಮೆ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

    ಗಾಡಿ ಹರಾಜು ಗೋಲ್ಮಾಲ್ ದೃಢ! ಇನ್​ಸ್ಪೆಕ್ಟರ್, ಹೆಡ್ ಕಾನ್​ಸ್ಟೆಬಲ್ ವಿರುದ್ಧ ಕಮಿಷನರ್​ಗೆ ವರದಿ

    ಮದುವೆಯ ದಿನ ಮೊಬೈಲ್​ ಸ್ವಿಚ್​ ಆಫ್ ಮಾಡಿ ಬಚ್ಚಿಟ್ಟುಕೊಂಡ ವರ​: ನಂತರ ನಡೆದಿದ್ದು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts