ಮದುವೆಯ ದಿನ ಮೊಬೈಲ್​ ಸ್ವಿಚ್​ ಆಫ್ ಮಾಡಿ ಬಚ್ಚಿಟ್ಟುಕೊಂಡ ವರ​: ನಂತರ ನಡೆದಿದ್ದು ಘೋರ ದುರಂತ

Photo of Kerala Girl Dhanya
blank

ತಿರುವನಂತಪುರ: ಮದುವೆಯ ದಿನವೇ ವರನೊಬ್ಬ ಫೋನ್​ ಸ್ವಿಚ್​​ ಮಾಡಿಕೊಂಡು ಬಚ್ಚಿಟ್ಟುಕೊಂಡಿದ್ದಕ್ಕೆ ಮನನೊಂದು 23 ವರ್ಷದ ಯುವತಿ ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.

ಮೃತ ಯುವತಿಯನ್ನು ಧನ್ಯಾ ಎಂದು ಗುರುತಿಸಲಾಗಿದೆ. ಈಕೆ ಕೊಲ್ಲಂನ ವಟ್ಟಪಾಡ್​ನಲ್ಲಿರುವ ಮಧು ಭವನ್​ ನಿವಾಸಿ. ಶನಿವಾರ ಬೆಳಗ್ಗೆ 8 ಗಂಟೆಗೆ ತನ್ನ ಬೆಡ್​ರೂಮ್​ನ ಬಾತ್​ರೂಮ್​ನಲ್ಲಿ ಶಾಲೂವಿನಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಧನ್ಯಾಳ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ದೇಶಾದ್ಯಂತ ಬಿರುಬಿಸಿಲಿನ ಝುಳ ಹೆಚ್ಚಳ: ವಿದ್ಯುತ್ ಸರಬರಾಜಿಗೆ ಹೆಚ್ಚಿದ ಬೇಡಿಕೆ, ಕಾಡುತ್ತಿರುವ ಅಭಾವದ ಆತಂಕ

ಮೃತ ಧನ್ಯಾ, ಕೊಲ್ಲಂನ ಅಂಚಲದ ಅತಿಶಯಮಂಗಲಂ ನಿವಾಸಿ ಅಖಿಲ್​ ಎಂಬಾತನನ್ನು ಕಳೆದು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಪ್ರೀತಿಸುತ್ತಿದ್ದಳು. ಫೆ. 15ರಂದು ಮನೆಯಿಂದ ಧನ್ಯಾ ನಾಪತ್ತೆಯಾಗಿದ್ದಳು. ಇದರ ಆಧಾರದ ಮೇಲೆ ಆಕೆಯ ಕುಟುಂಬಸ್ಥರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ತನಿಖೆ ಆರಂಭಿಸಿದ ಪೊಲೀಸರಿಗೆ ಧನ್ಯಾ, ಅಖಿಲ್​ ಜೊತೆ ಇರುವುದು ತಿಳಿಯಿತು. ಬಳಿಕ ಧನ್ಯಾಳ ಕುಟುಂಬಸ್ಥರ ಮುಂದೆ ಆಕೆಯನ್ನು ರಿಜಿಸ್ಟರ್​ ಮದುವೆ ಆಗುವುದಾಗಿ ಅಖಿಲ್​ ಆಣೆ ಮಾಡಿದ್ದ. ನಂತರ ಮದುವೆಯ ದಿನಾಂಕವು ನಿಗದಿಯಾಯಿತು. ಅದರಂತೆ ಮದುವೆಯ ದಿನ ಧನ್ಯಾ ಮತ್ತು ಆಕೆಯ ಕುಟುಂಬ ಇಟ್ಟಿವಾ ಗ್ರಾಮ ಪಂಚಾಯಿತಿಗೆ ತೆರಳಿದರು. ರಿಜಿಸ್ಟರ್​ ಮದುವೆಗೆ ಎಲ್ಲ ಸಿದ್ಧತೆ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅಖಿಲ್​ ಬರಲೇ ಇಲ್ಲ.

ಧನ್ಯಾ ಮತ್ತು ಆಕೆಯ ಕುಟುಂಬ ಅಖಿಲ್​ ಫೋನ್​ಗೆ ಎಷ್ಟೇ ಪ್ರಯತ್ನಿಸಿದರೂ ಆತನ ಫೋನ್​ ಸ್ವಿಚ್​ ಆಫ್​ ಅಂತ ಹೇಳುತ್ತಿತ್ತು. ಸಾಕಷ್ಟು ಸಮಯದವರೆಗೂ ಕಾದು, ಅಖಿಲ್​ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ಧನ್ಯಾ ಮತ್ತು ಆಕೆಯ ಕುಟುಂಬ ಬಹಳ ಬೇಸರದಿಂದ ಮತ್ತೆ ಮನೆಗೆ ಮರಳಿದರು.

ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಿಗೇ ಅವಮಾನ: ಬೇಸರಗೊಂಡು ಹೊರ ಬಂದ ಜೋಶಿ

ಅಖಿಲ್​ ಮಾಡಿದ ವಂಚನೆಯಿಂದ ಮನನೊಂದು ಅದರಿಂದ ಹೊರಬರಲಾಗದೇ ಧನ್ಯಾ ಸಾವಿನ ಹಾದಿ ಹಿಡಿದಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆ ಸಂಬಂಧ ಕಡಕ್ಕಲ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಅಖಿಲ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ನಿಮ್ಮ ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಜಿಂಕೆಯನ್ನು ಪತ್ತೆಹಚ್ಚಲು ಸಾಧ್ಯ!

ಈ​ ಕೆಲಸದ ಸಹವಾಸವೇ ಬೇಡ ಅಂತ ಕಣ್ಮರೆಯಾದ ಪೊಲೀಸ್​ ಅಧಿಕಾರಿ! ಸಹೋದ್ಯೋಗಿಗಳು ಕೊಟ್ಟ ಕಾರಣ ಹೀಗಿದೆ…

Share This Article

ಖಾಲಿ ಹೊಟ್ಟೆಯಲ್ಲಿ ಶುಂಠಿ ತಿನ್ನಿರಿ! ಈ 6 ಆರೋಗ್ಯ ಪ್ರಯೋಜನಗಳು ಪಡೆಯಿರಿ.. | Ginger

Ginger: ಇಂದಿನ ಆಧುನಿಕ ಜಗತ್ತಿನಲ್ಲಿ ವೇಗದ ಜೀವನದಲ್ಲಿ ಮನುಷ್ಯನ ದೇಹ ರೋಗದ ಗೂಡಾಗುತ್ತಿದೆ. ಜಡ ಜೀವನ…

ಸಾಲದ ಹೊರೆಯಿಂದ ಬಳಲುತ್ತಿದ್ರೆ ಶ್ರಾವಣ ಮಾಸದಲ್ಲಿ ಈ ಸಣ್ಣ ಕೆಲಸ ಮಾಡಿ: ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಿರಿ.. | Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಈ ಪವಿತ್ರ ಮಾಸದಲ್ಲಿಯೇ ಶಿವನು ಪಾರ್ವತಿಯನ್ನು ವಿವಾಹವಾಗದ್ದು ಎಂದು…