More

    ಗಾಡಿ ಹರಾಜು ಗೋಲ್ಮಾಲ್ ದೃಢ! ಇನ್​ಸ್ಪೆಕ್ಟರ್, ಹೆಡ್ ಕಾನ್​ಸ್ಟೆಬಲ್ ವಿರುದ್ಧ ಕಮಿಷನರ್​ಗೆ ವರದಿ

    ಬೆಂಗಳೂರು: ಕಳವಾದ ವಾಹನ ಸಿಕ್ಕರೂ ಮಾಲೀಕರನ್ನು ಪತ್ತೆಹಚ್ಚಿ ಅವರಿಗೆ ವಾಹನ ಹಸ್ತಾಂತರಿಸದೆ ಬಹಿರಂಗ ಹರಾಜಿನಲ್ಲಿ ಪೊಲೀಸರೇ ಖರೀದಿಸಿರುವುದು ಪೊಲೀಸ್ ಇಲಾಖೆ ನಡೆಸಿ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ತನಿಖಾ ವರದಿ ಸಲ್ಲಿಕೆಯಾಗಿದ್ದು, ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.

    ಫೆ.19ರಂದು ‘ಗಾಡಿ ಹರಾಜು ಗೋಲ್ಮಾಲ್’ ಶೀರ್ಷಿಕೆಯಡಿ ಹಾಗೂ ಫೆ.20ರಂದು ‘ಗೋಲ್ಮಾಲ್ ಬಹಿರಂಗ ವಾಹನ ಬಿಟ್ಹೋದ ಖಾಕಿ!’ ಶೀರ್ಷಿಕೆಯಡಿ ತನಿಖಾ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಗಂಗಮ್ಮನಗುಡಿ ಠಾಣೆ ಇನ್​ಸ್ಪೆಕ್ಟರ್​ಗೆ ಸೂಚಿಸಿದ್ದರು. ಅದರನ್ವಯ ತನಿಖಾ ವರದಿ ತಯಾರಿಸಿ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ.

    ಇದನ್ನೂ ಓದಿ: ಮದುವೆಯ ದಿನ ಮೊಬೈಲ್​ ಸ್ವಿಚ್​ ಆಫ್ ಮಾಡಿ ಬಚ್ಚಿಟ್ಟುಕೊಂಡ ವರ​: ನಂತರ ನಡೆದಿದ್ದು ಘೋರ ದುರಂತ

    ಕೆ.ಜಿ.ಹಳ್ಳಿ ಕಲಾನಗರದ 9ನೇ ಕ್ರಾಸ್​ನಲ್ಲಿ ಕಸ್ಟಮ್್ಸ ಕಚೇರಿ ಹೆಡ್ ಕಾನ್​ಸ್ಟೆಬಲ್ ಎ.ನಾಗರಾಜು ಕುಟುಂಬ ಸಮೇತ ವಾಸವಿದ್ದಾರೆ. 2020ರ ಆ.12ರ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ‘ಕೆಎ-04-ಎಚ್​ಯುು-3225’ ನಂಬರ್​ನ ಹೋಂಡಾ ಡಿಯೋ ಕಳವಾಗಿತ್ತು. ಈ ಸಂಬಂಧ ಉತ್ತರ ವಿಭಾಗದ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ತೆರಳಿ ನಾಗರಾಜು ವಾಹನ ನಾಪತ್ತೆ ದೂರು ಕೊಟ್ಟಿದ್ದು, ಎಫ್​ಐಆರ್ ಸಹ ದಾಖಲಾಗಿತ್ತು.

    ಪಶ್ಚಿಮ ವಿಭಾಗದ ಬ್ಯಾಡರಹಳ್ಳಿ ಪೊಲೀಸರಿಗೆ ವಾಹನ ಸಿಕ್ಕಿತ್ತು. ಡಿಸಿಪಿ, ನ್ಯಾಯಾಲಯದ ಅನುಮತಿ ಪಡೆದು ನ.4ರಂದು ಹರಾಜು ಹಾಕಿದ್ದು, ಬ್ಯಾಡರಹಳ್ಳಿ ಠಾಣೆಯ ಪೊಲೀಸರೇ ವಾಹನವನ್ನು 4100 ರೂ.ಗೆ ಖರೀದಿಸಿದ್ದರು. ಇತ್ತೀಚೆಗೆ ವಾಹನದ ಬಗ್ಗೆ ಮಾಲೀಕರಿಗೆ ವಿಷಯ ತಿಳಿದು, ದೂರು ಕೊಡಲು ಗಂಗಮ್ಮನಗುಡಿ ಠಾಣೆಗೆ ಹೋಗಿದ್ದರು. ಆದರೆ, ದೂರು ಸ್ವೀಕರಿಸಲು ನಿರಾಕರಿಸಿದ್ದರು. ಇದೇ ವೇಳೆ ವಾಹನ ಖರೀದಿಸಿದ್ದ ಪೊಲೀಸ್ ದಂಪತಿ ದೂರುದಾರ ನಾಗರಾಜು ಅವರ ಮನೆ ಬಳಿ ಹೋಗಿ ವಾಹನ ಬಿಟ್ಟು ಬಂದಿದ್ದರು. ಆಂತರಿಕ ತನಿಖೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಆಗಿನ ಇನ್​ಸ್ಪೆಕ್ಟರ್ ರಾಜೀವ್ ಹಾಗೂ ಮುಖ್ಯಪೇದೆ ರವಿ ಕರ್ತವ್ಯಲೋಪ ಎಸಗಿರುವುದು ದೃಢಪಟ್ಟಿದೆ. ಹೀಗಾಗಿ ಇಬ್ಬರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ. ವರದಿ ಪರಿಶೀಲಿಸಿ ಕಮಿಷನರ್ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಟೊಮ್ಯಾಟೋ ತಮನ್ನಾ: ಶುಭಾಶಯ ತಿಳಿಸಿದ ಗೆಳತಿಯ ಕಾಲೆಳೆದ ವಿಜಯ್ ವರ್ಮಾ

    ಗೊಂದಲದಲ್ಲಿ ಮಾಲೀಕ
    ಗೋಲ್ಮಾಲ್ ವಿಚಾರ ತಿಳಿಯುತ್ತಿದ್ದಂತೆ ದೂರುದಾರ ಎ.ನಾಗರಾಜು ಅವರ ಮನೆ ಪತ್ತೆಹಚ್ಚಿ, ವಾಹನ ಬಿಟ್ಟು ಹೋಗಿದ್ದಾರೆ. ವಾಹನ ಮಾಲೀಕತ್ವ ವರ್ಗಾವಣೆಯ 29/30 ಫಾರಂಗೂ ಸಹಿ ಹಾಕಿಟ್ಟು ಬಂದಿದ್ದಾರೆ. ಇಷ್ಟೆಲ್ಲಾ ಅವ್ಯವಹಾರ ನಡೆದಿದೆ. ಈ ವಾಹನವನ್ನು ಬಳಸಬೇಕೆ? ವಾಹನ ಮಾಲೀಕತ್ವವನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬೇಕೆ, ಬೇಡವೇ. ಮಾಲೀಕತ್ವ ಟ್ರಾನ್ಸ್ ಫರ್ ಮಾಡಿಕೊಂಡ ನಂತರ ಇನ್ನೇನಾದರು ಕಾನೂನು ಸಮಸ್ಯೆಗಳು ಉದ್ಬವಿಸಬಹುದೇ ಎಂಬ ಗೊಂದಲದಲ್ಲಿ ನಾಗರಾಜು ಕುಟುಂಬ ಇದೆ.

    ಗಾಡಿ ಹರಾಜು ಗೋಲ್ಮಾಲ್: ವಾಹನ ಸಿಕ್ಕರೂ ಮಾಲೀಕರಿಗೆ ಕೊಡಲ್ಲ! ಪೊಲೀಸರ ಕಳ್ಳಾಟ ಬಯಲು

    ದೇಶಾದ್ಯಂತ ಬಿರುಬಿಸಿಲಿನ ಝುಳ ಹೆಚ್ಚಳ: ವಿದ್ಯುತ್ ಸರಬರಾಜಿಗೆ ಹೆಚ್ಚಿದ ಬೇಡಿಕೆ, ಕಾಡುತ್ತಿರುವ ಅಭಾವದ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts