More

    ದೇಶಾದ್ಯಂತ ಬಿರುಬಿಸಿಲಿನ ಝುಳ ಹೆಚ್ಚಳ: ವಿದ್ಯುತ್ ಸರಬರಾಜಿಗೆ ಹೆಚ್ಚಿದ ಬೇಡಿಕೆ, ಕಾಡುತ್ತಿರುವ ಅಭಾವದ ಆತಂಕ

    ನವದೆಹಲಿ: ದೇಶದಲ್ಲಿ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು, ವಿದ್ಯುತ್​ಗೆ ಭಾರಿ ಬೇಡಿಕೆ ಉಂಟಾಗಿದೆ. ಇದೇ ವೇಳೆ ಅಭಾವದ ಆತಂಕವೂ ಕಾಡುತ್ತಿದೆ. ಭಾರತದ ಕೆಲವು ಭಾಗಗಳಲ್ಲಿ ಹೆಚ್ಚಿದ ತಾಪಮಾನ ಇತ್ತೀಚಿನ ವಾರಗಳಲ್ಲಿ ವಿದ್ಯುತ್ ಬೇಡಿಕೆಯನ್ನು ದಾಖಲೆ ಮಟ್ಟಕ್ಕೆ ತಳ್ಳಿದೆ. ಇದು ವಿದ್ಯುತ್ ಸರಬರಾಜಿನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದೆ. ವಿದ್ಯುತ್ ಉತ್ಪಾದನೆಗಿಂತ ಪೂರೈಕೆಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.

    ಬಿಸಿಲಿನ ಶಾಖದ ಪರಿಣಾಮ ಜನವರಿಯಲ್ಲಿ ವಿದ್ಯುತ್​ನ ಗರಿಷ್ಠ ಬೇಡಿಕೆಯು 211 ಗಿಗಾವಾಟ್ ತಲುಪಿತ್ತು. ಇದು ಕಳೆದ ವರ್ಷ ದಾಖಲಾದ ತಾಪಮಾನದ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪದಲ್ಲಿದೆ. ಕರೊನಾ ಸಾಂಕ್ರಾಮಿಕದ ನಂತರ ವ್ಯಾಪಾರ, ಉದ್ಯಮ ಚುರುಕು ಪಡೆದುಕೊಂಡಿದ್ದು, ವಿದ್ಯುತ್ ಬೇಡಿಕೆ ಏಕಾಏಕಿ ಹೆಚ್ಚಳವಾಗಿದೆ. ಹೀಗಾಗಿ ಬಿಸಿಲಿನ ಝುಳ ಹೆಚ್ಚಾಗುವ ಏಪ್ರಿಲ್, ಮೇ ತಿಂಗಳಲ್ಲಿ ವಿದ್ಯುತ್ ಅಭಾವ ಕಾಡುವ ಸಾಧ್ಯತೆ ಕೂಡ ಇದೆ.

    ಇದನ್ನೂ ಓದಿ: ‘ನಾನಿನ್ನೂ ಸಕ್ರಿಯ, ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಅಂದ್ರು ಮಾಜಿ ಸಿಎಂ ಯಡಿಯೂರಪ್ಪ: ಅವರ ಮುಂದಿನ ಗುರಿ ಏನು?

    ಕಳೆದ ವಾರ ಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 11 ಸೆಲ್ಸಿಯಸ್​ಗಿಂತ ಹೆಚ್ಚಿದೆ. ತೀವ್ರ ಝುಳದಿಂದ ಗೋಧಿ ಮತ್ತು ಇತರ ಬೆಳೆಗಳ ಮೇಲೆ ಆಗುತ್ತಿರುವ ಪರಿಣಾಮವನ್ನು ಪರೀಕ್ಷಿಸುವಂತೆ ಭಾರತೀಯ ಹವಾಮಾನ ಇಲಾಖೆಯು ಸಲಹೆ ನೀಡಿದೆ.

    ಒತ್ತಡದಲ್ಲಿ ವಿದ್ಯುತ್ ಜಾಲ: ತೀವ್ರ ಉಷ್ಣ ಹವಾಮಾನದಿಂದಾಗಿ ನೀರಾವರಿ ಪಂಪ್​ಗಳು ಮತ್ತು ಏರ್ ಕಂಡೀಷನರ್​ಗಳು ಕ್ರ್ಯಾಂಕ್ ಆಗಿರುವುದರಿಂದ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತಿದೆ. ಸತತ ಎರಡು ವರ್ಷಗಳ ಅಡಚಣೆಗಳ ನಂತರ ರಾಷ್ಟ್ರದ ವಿದ್ಯುತ್ ಜಾಲವು ಹೊಸ ಒತ್ತಡಕ್ಕೆ ಒಳಗಾಗುತ್ತದೆ ಎಂಬ ಆತಂಕವನ್ನು ಹೆಚ್ಚಿಸಿದೆ. ಆಮದು ಮಾಡಿಕೊಂಡ ಕಲ್ಲಿದ್ದಲ್ಲನ್ನು ಬಳಕೆ ಮಾಡಿಕೊಂಡು ಬೇಸಿಗೆ ಅವಧಿಯಲ್ಲಿ ಮೂರು ತಿಂಗಳು ಉಷ್ಣ ವಿದ್ಯುತ್ ಸ್ಥಾವರಗಳು ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಇದು ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆಯ ಅಡಚಣೆ ತಪ್ಪಿಸಲು ಮತ್ತು ದೇಶೀಯ ಕಲ್ಲಿದ್ದಲು ಪೂರೈಕೆ ಮೇಲಿನ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಳೆದ ಬೇಸಿಗೆಗೆ ಹೋಲಿಸಿದರೆ ಈ ವರ್ಷ ವಿದ್ಯುಚ್ಛಕ್ತಿ ಬೇಡಿಕೆಯು ಶೇ. 20-30ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ವಿದ್ಯುತ್ ಬೇಡಿಕೆಯು ಏಪ್ರಿಲ್​ನಲ್ಲಿ ಗರಿಷ್ಠ 229 ಗಿಗಾವಾಟ್​ಗೆ ತಲುಪಬಹುದು ಎಂದು ವಿದ್ಯುತ್ ಸಚಿವಾಲಯ ಈಗಾಗಲೇ ಅಂದಾಜಿಸಿದೆ. ತಾಪಮಾನವು ಏರುತ್ತಿರುವ ರೀತಿ ನೋಡಿದರೆ ಕಳವಳಕಾರಿಯಾಗಿದೆ ಎಂದು ರಾಜಸ್ಥಾನದ ವಿದ್ಯುತ್ ಸಚಿವ ಭನ್ವರ್ ಸಿಂಗ್ ಭಾಟಿ ಹೇಳಿದ್ದಾರೆ.

    ಉಷ್ಣ ವಿದ್ಯುತ್ ಸ್ಥಾವರದಿಂದ ಶೇ.70 ಉತ್ಪಾದನೆ: ಭಾರತದಲ್ಲಿ ಕಲ್ಲಿದ್ದಲಿನಿಂದ ಶೇ.70ಕ್ಕಿಂತ ಹೆಚ್ಚು ಪ್ರಮಾಣದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ವಿದ್ಯುತ್ ಸ್ಥಾವರಗಳಲ್ಲಿರುವ ದಾಸ್ತಾನು ಪ್ರಸ್ತುತ ಮಾರ್ಚ್ ಅಂತ್ಯದವರೆಗೆ ವಿದ್ಯುತ್ ಪೂರೈಸಲು ಸರ್ಕಾರ ಕೇಳಿಕೊಂಡ 45 ದಶಲಕ್ಷ ಟನ್ ಗುರಿಗಿಂತ ಕಡಿಮೆ ಇದೆ.

    ಇದನ್ನೂ ಓದಿ: ಟೊಮ್ಯಾಟೋ ತಮನ್ನಾ: ಶುಭಾಶಯ ತಿಳಿಸಿದ ಗೆಳತಿಯ ಕಾಲೆಳೆದ ವಿಜಯ್ ವರ್ಮಾ

    ಹವಾಮಾನ ವೈಪರೀತ್ಯದ ಸಂಕೇತವಲ್ಲ
    ಪ್ರಸ್ತುತ ಅಧಿಕ ತಾಪಮಾನವು ಮಾರ್ಚ್​ನಿಂದ ಮೇ ತಿಂಗಳವರೆಗೆ ಹವಾಮಾನ ವೈಪರೀತ್ಯದ ಸಂಕೇತವಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಶಾಸ್ತ್ರದ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

    ಈ​ ಕೆಲಸದ ಸಹವಾಸವೇ ಬೇಡ ಅಂತ ಕಣ್ಮರೆಯಾದ ಪೊಲೀಸ್​ ಅಧಿಕಾರಿ! ಸಹೋದ್ಯೋಗಿಗಳು ಕೊಟ್ಟ ಕಾರಣ ಹೀಗಿದೆ…

    ನಿಮ್ಮ ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಜಿಂಕೆಯನ್ನು ಪತ್ತೆಹಚ್ಚಲು ಸಾಧ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts