More

    ಶೇ. 42ರ ಬೆಳವಣಿಯೊಂದಿಗೆ ಸ್ಮಾರ್ಟ್​ಫೋನ್​ಗಳು ಇದೀಗ ಭಾರತದ ನಾಲ್ಕನೇ ಅತಿದೊಡ್ಡ ರಫ್ತು ವಸ್ತು!

    ನವದೆಹಲಿ: ಸ್ಮಾರ್ಟ್​ಫೋನ್​ಗಳು ಇದೀಗ ಭಾರತದ ನಾಲ್ಕನೇ ಅತಿದೊಡ್ಡ ರಫ್ತು ವಸ್ತು ಎನಿಸಿಕೊಂಡಿದೆ. 2024ನೇ ಹಣಕಾಸು ವರ್ಷದಲ್ಲಿ ಶೇ. 42 ರಷ್ಟು ಬೆಳವಣಿಗೆಯೊಂದಿಗೆ 15.6 ಶತಕೋಟಿ ಡಾಲರ್ ತಲುಪುವ ಮೂಲಕ ಹಿಂದಿನ ವರ್ಷದ ರ್ಯಾಂಕಿಂಗ್​ಗಿಂತಲೂ ಒಂದು ಹಂತ ಮುಂದೆ ಸಾಗಿದೆ.

    ಭಾರತವು 2022ರ ಏಪ್ರಿಲ್​ನಿಂದ ಪ್ರತ್ಯೇಕವಾಗಿ ಸ್ಮಾರ್ಟ್‌ಫೋನ್‌ಗಳಿಗಾಗಿ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿತು. ಇದರ ಪ್ರಕಾರ ಭಾರತದ ರಫ್ತು ವಸ್ತುಗಳು ಪೆಟ್ರೋಲಿಯಂ ಉತ್ಪನ್ನಗಳಿಂದ ಪ್ರಾಬಲ್ಯ ಹೊಂದಿದ್ದರು ಕೂಡ ಈ ಬಾರಿ ಸ್ಮಾರ್ಟ್‌ಫೋನ್‌ಗಳು ಮೋಟಾರ್ ಗ್ಯಾಸೋಲಿನ್ ಅನ್ನು ಹಿಂದಿಕ್ಕಿ 2024ರ ಹಣಕಾಸು ವರ್ಷದಲ್ಲಿ ನಾಲ್ಕನೇ-ಅತಿದೊಡ್ಡ ರಫ್ತು ಸರಕು ಎನಿಸಿಕೊಂಡಿದೆ.

    ವಾಣಿಜ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಸ್ಮಾರ್ಟ್‌ಫೋನ್ ರಫ್ತು ಹೆಚ್ಚಳವು ಯುನೈಟೆಡ್​ ಸ್ಟೇಟ್ಸ್​ಗೆ 5.6 ಶತಕೋಟಿ ಡಾಲರ್​ಗೆ ಸಾಗಣೆಯಲ್ಲಿ ಶೇ. 158 ರಷ್ಟು ಹೆಚ್ಚಳವಾಗಿದೆ. ನಂತರದ ಸ್ಥಾನದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (2.6 ಶತಕೋಟಿ ಡಾಲರ್​), ನೆದರ್ಲ್ಯಾಂಡ್ಸ್ (1.2 ಶತಕೋಟಿ ಡಾಲರ್​), ಮತ್ತು ಯುನೈಟೆಡ್​ ಕಿಂಗ್​ಡಮ್​ (1.1 ಶತಕೋಟಿ ಡಾಲರ್​) ಇವೆ.

    ಹಣಕಾಸು ವರ್ಷ 2024 ರಲ್ಲಿ ಭಾರತದಲ್ಲಿ ರಫ್ತು ಮತ್ತು ದೇಶೀಯ ಮಾರುಕಟ್ಟೆಗಳಿಗಾಗಿ ಉತ್ಪಾದಿಸಲಾದ ಮೊಬೈಲ್ ಡಿವೈಸ್​ಗಳ ಮೌಲ್ಯವು 4.1 ಟ್ರಿಲಿಯನ್ (49.16 ಶತಕೋಟಿ ಡಾಲರ್​) ಗೆ ಏರಿಕೆ ಕಂಡಿದೆ. ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ನ ಪ್ರಾಥಮಿಕ ಅಂದಾಜಿನ ಪ್ರಕಾರ ವರ್ಷದಿಂದ ವರ್ಷಕ್ಕೆ ಕನಿಷ್ಠ 17 ಪ್ರತಿಶತದಷ್ಟು ಏರಿಕೆಯಾಗಿದೆ. ಇದು ದೇಶದಲ್ಲಿನ ಮೊಬೈಲ್​ ಪ್ರಾಬಲ್ಯವನ್ನು ಪ್ರತಿನಿಧಿಸುತ್ತದೆ.

    ಅಂದಹಾಗೆ ಈ ಸ್ಮಾರ್ಟ್‌ಫೋನ್‌ಗಳು ಸರ್ಕಾರದ ಪ್ರೊಡಕ್ಷನ್​-ಲಿಂಕ್ಡ್​ ಇನ್ಸೆಂಟಿವ್​ (ಪಿಎಲ್​ಐ) ಸ್ಕೀಮ್​ನ ಪ್ರಮುಖ ಯಶೋಗಾಥೆಯಾಗಿದೆ. ಈ ಯೋಜನೆಯು ಚೀನಾದ ನಂತರ ಭಾರತವು ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದನಾ ರಾಷ್ಟ್ರವಾಗಲು ನೆರವಾಗುತ್ತಿದೆ. ಚೀನಾ ಮತ್ತು ಯುಎಸ್ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಚೀನಾದಲ್ಲಿ ಉತ್ಪಾದಿಸುವ ಕಂಪನಿಗಳನ್ನು ಭಾರತದೆಡೆಗೆ ಆಕರ್ಷಿಸಲು ಮತ್ತು ಭಾರತಕ್ಕೆ ಸ್ಥಳಾಂತರಿಸಲು ಮನವೊಲಿಸಲು ಈ ಯೋಜನೆ ಕೇಂದ್ರೀಕರಿಸಿದೆ. (ಏಜೆನ್ಸೀಸ್​)

    IPL 2024: ಎಲಿಮಿನೇಟರ್ ಪಂದ್ಯದಲ್ಲಿ RR ವಿರುದ್ಧ RCB ಸೋಲಿಗೆ 5 ಪ್ರಮುಖ ಕಾರಣಗಳು ಹೀಗಿವೆ…

    ಆರ್​ಸಿಬಿ ವಿಚಾರದಲ್ಲಿ ಯೂಟರ್ನ್​ ಹೊಡೆದ ಅಂಬಟಿ ರಾಯುಡು: ಕೊಹ್ಲಿಯನ್ನು ಟಾರ್ಗೆಟ್ ಮಾಡಿದ ರಾಯುಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts