More

    ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ಆತನೊಬ್ಬನೇ ಕಾರಣ! ಅಭಿಮಾನಿಗಳಿಂದ ಹಿಡಿಶಾಪ

    ನವದೆಹಲಿ: ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಸೀಸನ್​ನ ಆರಂಭದಲ್ಲಿ ಮೊದಲ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಕಳೆದುಕೊಂಡ ಆರ್​ಸಿಬಿ ಸತತ 6 ಗೆಲುವಿನೊಂದಿಗೆ ಪ್ಲೇ ಆಫ್ ತಲುಪಿ ಇತಿಹಾಸ ಬರೆಯಿತು. ಈ ಕಾರಣದಿಂದ ಈ ಸಲ ಕಪ್​ ನಮ್ದೆ ಅನ್ನೋ ಭಾವನೆ ಅಭಿಮಾನಿಗಳಲ್ಲಿತ್ತು. ಆದರೆ, ನಿನ್ನೆ (ಮೇ 22) ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋತು ಐಪಿಎಲ್​ನಿಂದ ಹೊರಬೀಳುವ ಮೂಲಕ ಆರ್​ಸಿಬಿ ಮತ್ತೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

    ಅದೇನೇ ಇರಲಿ ಆರ್​ಸಿಬಿ ಸೋಲಿಗೆ ಈತನೇ ಕಾರಣ ಎಂದು ಕ್ರಿಕೆಟ್ ಅಭಿಮಾನಿಗಳ ಜತೆಗೆ ಆರ್​ಸಿಬಿ ಅಭಿಮಾನಿಗಳು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ. ಆ ಆಟಗಾರ ಯಾರು ಎಂಬುದನ್ನು ನಾವೀಗ ತಿಳಿಯೋಣ.

    ಆರ್‌ಸಿಬಿ ಮುಖ್ಯವಾಗಿ ವಿರಾಟ್ ಕೊಹ್ಲಿಯನ್ನು ನೆಚ್ಚಿಕೊಂಡಿದೆ. ಈ ಸೀಸನ್​ನ ಆರಂಭದಿಂದಲೂ ಕೊಹ್ಲಿ ಒಬ್ಬರೇ ಆರ್‌ಸಿಬಿಯ ಬ್ಯಾಟಿಂಗ್‌ನ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಆ ನಂತರ ದಿನೇಶ್ ಕಾರ್ತಿಕ್, ಗ್ರೀನ್, ಪಾಟಿದಾರ್, ವಿಲ್ ಜಾಕ್ಸ್ ಮತ್ತು ಡುಪ್ಲೆಸಿಸ್ ಫಾರ್ಮ್‌ಗೆ ಬಂದರು ಮತ್ತು ಅವರ ಬಲವೂ ಕೊಹ್ಲಿಗೆ ಸೇರ್ಪಡೆಯಾಯಿತು. ಇದರಿಂದ ಗೆಲುವಿನ ಸರಣಿ ಸಾಧ್ಯವಾಯಿತು.

    ಆದರೆ, ಆರ್​ಸಿಬಿ ತಂಡದಲ್ಲಿ ಮತ್ತೊಬ್ಬ ಆಟಗಾರ ಫಾರ್ಮ್​ಗೆ ಬಂದಿದ್ದರೆ, ಆರ್​ಸಿಬಿ ಬಲಿಷ್ಠ ತಂಡವಾಗುತ್ತಿತ್ತು. ಆ ಆಟಗಾರ ಬೇರೆ ಯಾರೂ ಅಲ್ಲ ಅವರೇ ಗ್ಲೇನ್ ಮ್ಯಾಕ್ಸ್‌ವೆಲ್. ಮ್ಯಾಕ್ಸಿ, ಕೊಹ್ಲಿ ನಂತರ ಆರ್‌ಸಿಬಿಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಆಟಗಾರ. ಅವರು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಈ ಸೀಸನ್​ನಲ್ಲಿ ಮ್ಯಾಕ್ಸಿ ದಯನೀಯವಾಗಿ ವಿಫಲರಾದರು. ಮ್ಯಾಕ್ಸಿ 10 ಪಂದ್ಯಗಳಲ್ಲಿ ಗಳಿಸಿದ ರನ್ ಎಷ್ಟು ಗೊತ್ತಾ? ಕೇವಲ 52. ಇದು ಅವರ ವೈಫಲ್ಯದ ಪರಾಕಾಷ್ಠೆಯನ್ನು ಪ್ರದರ್ಶಿಸುತ್ತದೆ.

    ವಿಲ್ ಜಾಕ್ಸ್ ಉತ್ತಮ ಪ್ರದರ್ಶನ ನೀಡಿದ ಕಾರಣ ಮ್ಯಾಕ್ಸಿ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ, ವಿಲ್​ ಜಾಕ್ಸ್​ ಇಂಗ್ಲೆಂಡ್‌ಗೆ ತೆರಳಿದ ನಂತರ ಆರ್‌ಸಿಬಿ ಮ್ಯಾಕ್ಸ್‌ವೆಲ್‌ಗೆ ಮತ್ತೊಮ್ಮೆ ಅವಕಾಶ ನೀಡಿತು. ತಂಡದಲ್ಲಿ ಅಲ್ಜಾರಿ ಜೋಸೆಫ್ ಅವರಂತಹ ಆಟಗಾರ ಇದ್ದರೂ ಆರ್​ಸಿಬಿ ಮ್ಯಾನೇಜ್ಮೆಂಟ್, ನಾಯಕ ಡುಪ್ಲೆಸಿಸ್ ಮತ್ತು ಕೊಹ್ಲಿ, ಮ್ಯಾಕ್ಸಿ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ, ಮ್ಯಾಕ್ಸ್‌ವೆಲ್‌ಗೆ ಆ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಲಿಮಿನೇಟರ್ ನಂತಹ ಅತ್ಯಂತ ಮಹತ್ವದ ಪಂದ್ಯದಲ್ಲಿ ಅತ್ಯಂತ ನಿರಾತಂಕವಾಗಿ ಆಡಿ ರಾಜಸ್ಥಾನಕ್ಕೆ ವಿಕೆಟ್ ಒಪ್ಪಿಸಿದರು.

    ಈಗಾಗಲೇ ಮೂರನೇ ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ಬೆಂಬಲ ನೀಡಬೇಕಿದ್ದ ಮ್ಯಾಕ್ಸಿ, ಗೋಲ್ಡನ್‌ ಡಕ್‌ ಆಗಿ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದರು. ಒಂದು ವೇಳೆ ಮ್ಯಾಕ್ಸಿ ಅರ್ಧಶತಕವನ್ನಾದರೂ ಸಿಡಿಸಿದ್ದರೆ ಆರ್​ಸಿಬಿ ಗೆಲುವು ಖಂಡಿತವಾಗಿ ದಕ್ಕುತ್ತಿತ್ತು. ಆದರೆ, ಅಂತಿಮವಾಗಿ ಆರ್​ಸಿಬಿ ಆರ್​ಆರ್​ ವಿರುದ್ಧ ಸೋಲುಂಡಿತು. ಈ ಸೋಲಿಗೆ ಮ್ಯಾಕ್ಸ್​ವೆಲ್​ ಕೂಡ ಪ್ರಮುಖ ಕಾರಣ. ಹೀಗಾಗಿ ಆರ್​ಸಿಬಿ ಅಭಿಮಾನಿಗಳು ಮ್ಯಾಕ್ಸಿಗೆ ಹಿಡಿಶಾಪ ಹಾಕುತ್ತಿದ್ದಾರೆ. ದೇಶದ ಪರವಾಗಿ ಅಬ್ಬರಿಸುವ ಮ್ಯಾಕ್ಸಿ ಇಲ್ಲೇಕೆ ಮಂಕಾದರು? ಕೊಟ್ಟ ಕಾಸಿಗೆ ನ್ಯಾಯ ಒದಗಿಸಬೇಕಿತ್ತು ಎಂದು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್​​)

    IPL 2024: ಎಲಿಮಿನೇಟರ್ ಪಂದ್ಯದಲ್ಲಿ RR ವಿರುದ್ಧ RCB ಸೋಲಿಗೆ 5 ಪ್ರಮುಖ ಕಾರಣಗಳು ಹೀಗಿವೆ…

    ಆರ್​ಸಿಬಿ ವಿಚಾರದಲ್ಲಿ ಯೂಟರ್ನ್​ ಹೊಡೆದ ಅಂಬಟಿ ರಾಯುಡು: ಕೊಹ್ಲಿಯನ್ನು ಟಾರ್ಗೆಟ್ ಮಾಡಿದ ರಾಯುಡು!

    ಆರ್​ಸಿಬಿ ಸೋತ ಬೆನ್ನಲ್ಲೇ ಡಿವಿಲಿಯರ್ಸ್​ ಬಿಚ್ಚುಮಾತು! ಟೀಕಾಕಾರರ ಬಾಯಿ ಮುಚ್ಚಿಸಿದ ಮಿಸ್ಟರ್. 360

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts