ಅಕ್ರಮ ಶೆಡ್​ನಲ್ಲಿ ಗ್ಯಾಸ್​​ ರೀಫಿಲ್ಲಿಂಗ್ ದಂಧೆ; ಇಬ್ಬರ ಬಂಧನ

illegal gas refilling
Published on

ನೆಲಮಂಗಲ: ಶೆಡ್ ನಿರ್ಮಿಸಿಕೊಂಡು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ದಂಧೆಯನ್ನು ಬೇಧಿಸುವಲ್ಲಿ ನೆಲಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ವಿಶ್ವೇಶ್ವರಪುರ ಸಮೀಪದ ಬಿಲಾಲ್ ನಗರದಲ್ಲಿ ಈ ಘಟನೆ ನಡೆದಿದೆ.

ನೆಲಮಂಗಲದ ಹುಳ್ಳೆಗೌಡನಹಳ್ಳಿಯ ಶಶಿಕುಮಾರ್ (29) ಮತ್ತು ಇಸ್ಲಾಂಪುರದ ಮೊಹಮ್ಮದ್ ಇಮ್ರಾನ್ (28) ಬಂಧಿತ ಆರೋಪಿಗಳು. ಬಂಧಿತರು ಸೂರ್ಯ ಗ್ಯಾಸ್ ಏಜೆನ್ಸಿಯಿಂದ ಅಕ್ರಮವಾಗಿ ಗ್ಯಾಸ್ ರಫ್ತು ಮಾಡಿಕೊಂಡು, ಅದಕ್ಕೆ ರೀಫಿಲ್ಲಿಂಗ್ ಮಾಡುತ್ತಿದ್ದರು. ಜತೆಗೆ ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್​ಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.

ಆರೋಪಿಗಳಿಂದ 35 ವಿವಿಧ ಮಾದರಿಯ ಖಾಲಿ ಸಿಲಿಂಡರ್​​ಗಳು, 3 ಕಬ್ಬಿಣದ ಡಿಜಿಟಲ್ ತೂಕದ ಯಂತ್ರ, ಪೈಪ್ ಮತ್ತು ಟೂಲ್ಸ್​​ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net