More

    ಕಾಂತಾರ ಸಿನಿಮಾ ನೋಡಿದ್ರಾ ಎಂಬ ಪ್ರಶ್ನೆಗೆ ಸಮಯ ಸಿಕ್ಕಿಲ್ಲ ಎಂದು ಉತ್ತರ ಕೊಟ್ಟ ರಶ್ಮಿಕಾ!

    ಮುಂಬೈ: ಏರ್​ಪೋರ್ಟ್​​ನಿಂದ ಹೊರಬಂದ ರಶ್ಮಿಕಾ ಮಂದಣ್ಣಗೆ ಕಾಂತಾರ ಸಿನಿಮಾ ನೋಡಿದ್ದೀರಾ? ಎಂದ ಪಾಪರಾಜಿಯ ಪ್ರಶ್ನೆಗೆ, ಇನ್ನೂ ಇಲ್ಲ ಎಂದು ಉತ್ತರಿಸಿದ್ದಾರೆ. ಸದ್ಯ ಬಾಲಿವುಡ್​​ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿಗೆ ಕಾಂತಾರ ಸಿನಿಮಾ ನೋಡಲು ಸಮಯ ಸಿಕ್ಕಿಲ್ಲವಂತೆ. ‘ನನಗೆ ಆ ಸಿನಿಮಾ ನೋಡಬೇಕೆಂಬ ಆಸೆಯಿದೆ. ಆದಷ್ಟು ಶೀಘ್ರವೇ ನಾನು ಸಿನಿಮಾ ನೋಡುತ್ತೇನೆ’ ಎಂದು ಹೇಳಿದ್ದಾರೆ.

    ಆಗಾಗ ಹೊಸ ಹೊಸ ಲುಕ್​ನಲ್ಲಿ ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡು ಪಾಪರಾಜಿಗಳ ಕ್ಯಾಮರಕ್ಕೆ ಪೋಸ್​ ಕೊಟ್ಟು, ಅವರು ಕೇಳುವ ಪ್ರಶ್ನೆಗೆ ಉತ್ತರಿಸುತ್ತಾರೆ. ಇದರಂತೆ ಮತ್ತೊಬ್ಬ ಪಾಪರಾಜಿ ರಶ್ಮಿಕಾ ಬಳಿ ಕನ್ನಡದಲ್ಲಿ ‘ಕಾಂತಾರ ಮೂವೀ ನೋಡಿಲ್ವಾ ಇನ್ನು?’ ಎಂದು ಕೇಳಿದಾಗ ರಶ್ಮಿಕಾ, ‘ಓ ಕನ್ನಡ, ಈಗ ಕನ್ನಡ ಮಾತಾಡ್ತಿದ್ದೀರಾ ನೀವು’ ಎಂದು ಹೇಳುತ್ತಲೇ ಮುಂದೆ ತೆರಳಿದರು.

    ಅಮಿತಾಭ್​​ ಬಚ್ಚನ್​​ ಜತೆ ನಟಿಸಿದ ಗುಡ್​​​ಬೈ ಚಿತ್ರ ಈಗಾಗಲೇ ತೆರೆಕಂಡಿದ್ದು, ಸಿದ್ಧಾರ್ಥ್ ಕಪೂರ್​​ ಜತೆಗಿನ ಮಿಷನ್​​ ಮಜ್ನು ಸೇರಿದಂತೆ ಇನ್ನೂ ಹಲವು ಹಿಂದಿ ಸಿನಿಮಾಗಳು ರಶ್ಮಿಕಾ ಕೈಯಲ್ಲಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಸಿನಿಮಾವನ್ನು ರಶ್ಮಿಕಾ ಗುಟ್ಟಾಗಿ ನೋಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಇದೀಗ ಅದಕ್ಕೆ ತೆರೆ ಎಳೆಯುವಂತೆ ತಾನಿನ್ನೂ ಸಿನಿಮಾ ನೋಡಿಲ್ಲ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts