More

    ಆಟೋ ಚಾಲಕರಿಂದಲೇ ಸಿದ್ಧವಾಯ್ತು ಹೊಸ ಆ್ಯಪ್​​; ಇನ್ನುಂದೆ ಗ್ರಾಹಕರು ಎಕ್ಸ್​ಟ್ರಾ ಹಣ ನೀಡುವಂತಿಲ್ಲ!

    ಬೆಂಗಳೂರು: ಓಲಾ, ಊಬರ್ ಮುಂತಾದ ಆಟೋಗಳು ಗ್ರಾಹಕರಿಂದ ಹೆಚ್ಚಿನ ಹಣವನ್ನು ಪಡೆದು ಹಗಲು ದರೋಡೆ ಮಾಡುತ್ತಿವೆ ಎಂದು ಬಹಳಷ್ಟು ಗ್ರಾಹಕರು ಆರೋಪಿಸುತ್ತಲೇ ಇದ್ದಾರೆ. ಆದರೆ ಇನ್ನು ಮುಂದೆ ಗ್ರಾಹಕರು ಈ ರೀತಿ ಸಮಸ್ಯೆಗಳನ್ನು ಎದುರಿಸುವಂತಿಲ್ಲ. ಇದಕ್ಕೆಂದೇ ಆಟೋ ಚಾಲಕರಿಂದ ಹೊಸ ಆ್ಯಪ್​ ಸಿದ್ಧವಾಗಿದೆ.

    ನೆವೆಂಬರ್​​ 1 ರಿಂದ ಅಧಿಕೃತವಾಗಿ ಆಟೋ ಚಾಲಕರಿಂದಲೇ ಸಿದ್ದವಾಗಿರುವ ‘ನಮ್ಮ ಯಾತ್ರಿ ಆ್ಯಪ್​’ ಚಾಲನೆಗೆ ಬರುತ್ತಿದೆ. ಈ ಆ್ಯಪ್​​ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದಂದು ಗ್ರಾಹಕರ ಸೇವೆಗಾಗಿ ಕಾರ್ಯಾರಂಭ ಮಾಡಲಿದೆ. ‘ಓಪನ್ ನೆಟ್ ವರ್ಕ್ ಡಿಜಿಟಲ್ ಕಾಮರ್ಸ್’ (ONDC) ಅಡಿ ಕಾರ್ಯ ನಿರ್ವಹಿಸುತ್ತಿರುವ ಈ ಆ್ಯಪ್​ನಲ್ಲಿ ಮದ್ಯವರ್ತಿಗಳ ಹಾವಳಿ ಇರೋದಿಲ್ಲ ಮತ್ತು ಗ್ರಾಹಕರು ಎಕ್ಸ್​ಟ್ರಾ ಕಮೀಷನ್ ಕೂಡ ನೀಡುವ ಅಗತ್ಯ ಇರುವುದಿಲ್ಲ.

    ಈ ಆ್ಯಪ್​ನಲ್ಲಿ ಗ್ರಾಹಕರಿಂದ ಪ್ರತಿ ಟ್ರಿಪ್​ಗೂ 10.ರೂ ಸರ್ವೀಸ್ ಚಾರ್ಜ್ ಮಾತ್ರ ಪಡೆಯಲಾಗುತ್ತದೆ. ಗ್ರಾಹಕರು ಅದಕ್ಕಿಂತ ಅಧಿಕ ಹಣ ಕೊಡುವಂತಿಲ್ಲ. ಒಂದು ವೇಳೆ ಆಟೋ ಚಾಲಕರಿಗೆ ಹೆಚ್ಚಿನ ಹಣ ಕೊಡಬೇಕು ಎಂದರೆ ಅದನ್ನು ಗ್ರಾಹಕರೇ ತೀರ್ಮಾನ ಮಾಡಬಹುದು. ಗ್ರಾಹಕರು ತಮ್ಮ ಒಪ್ಪಿಗೆ ಇದ್ದರೆ ಮಾತ್ರ ಹೆಚ್ಚಿನ ಹಣ ನೀಡಬೇಕೇ ಹೊರತು ಇಲ್ಲಿ ಆಟೋ ಚಾಲಕರ ಒತ್ತಾಯ ಇರುವುದಿಲ್ಲ.

    ಈಗಾಗಲೇ 16 ಸಾವಿರ ಆಟೋ ಚಾಲಕರು ‘ಓಪನ್ ನೆಟ್ ವರ್ಕ್ ಡಿಜಿಟಲ್ ಕಾಮರ್ಸ್’ (ONDC) ಅಡಿ ‘ನಮ್ಮ ಯಾತ್ರಿ ಆ್ಯಪ್​​’ಗೆ ರಿಜಿಸ್ಟರ್​​ ಮಾಡಿಕೊಂಡಿದ್ದಾರೆ. ಜತೆಗೆ 20 ಸಾವಿರ ಗ್ರಾಹಕರು ಈ ಆ್ಯಪನ್ನು ತಮ್ಮ ಮೊಬೈಲ್​ ಗಳಲ್ಲಿ ಡೌನ್​ಲೋಡ್​​​ ಮಾಡಿಕೊಂಡಿದ್ದು, ಕನ್ನಡ ರಾಜ್ಯೋತ್ಸವ ದಿನದಿಂದ ಈ ಸೇವೆ ಗ್ರಾಹಕರಿಗೆ ಲಭ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts