More

    ಕರೆಂಟ್​ ಬಿಲ್ ನೋಡಿ ಬೆಚ್ಚಿಬಿದ್ದ ಕೂಲಿ ಕಾರ್ಮಿಕ; ಇಷ್ಟೊಂದು ದುಡ್ಡು ಹೇಗೆ ಕಟ್ಟಲಿ ಎಂದು ಬೆಸ್ಕಾಂ ವಿರುದ್ಧ ಅಳಲು

    ಬೆಂಗಳೂರು: ತಿಂಗಳಿಗೆ 200 ರಿಂದ 300 ರೂ. ಬರುತ್ತಿದ್ದ ಕರೆಂಟ್​​​ ಬಿಲ್ ಏಕಾಏಕಿ 23 ಸಾವಿರ ರೂ. ಬಂದಿದ್ದನ್ನು ನೋಡಿ ಶೀಟ್​​ ಮನೆಯಲ್ಲಿ ವಾಸ ಮಾಡುತ್ತಿದ್ದ ರಾಜು ಎಂಬಾತನಿಗೆ ಬರಸಿಡಿಲು ಬಡಿದಂತಾಗಿದೆ. ಈ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡ ಕಮ್ಮನಹಳ್ಳಿಯಲ್ಲಿ ನಡೆದಿದೆ.

    ಕೂಲಿ ಕಾರ್ಮಿಕ ರಾಜು ದೊಡ್ಡ ಕಮ್ಮನಹಳ್ಳಿಯ ಬಿಬಿಎಂಪಿ 15ನೇ ಕ್ರಾಸ್​​​​ ನಿವಾಸಿ. ರಾಜು ಶೀಟ್​​ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ವಾಸ ಮಾಡುತ್ತಿದ್ದ. ಈತನ ಪತ್ನಿ ಗಾರ್ಮೆಂಟ್ಸ್​​​ ಉದ್ಯೋಗಿ. ಇಬ್ಬರೂ ಕಡು ಬಡುತನದಲ್ಲಿ ತಮ್ಮ ಜೀವನ ನಡೆಸುತ್ತಿದ್ದರು.

    ಇವರ ಮನೆಗೆ ಸಿಂಗಲ್ ಫೇಸ್​​​ ಕರೆಂಟ್​​ ಕನೆಕ್ಷನ್ ಇದೆ. ಫೆಬ್ರವರಿ 2022 ರಿಂದ ಆಗಸ್ಟ್ 2022 ರವರೆಗೂ ಪ್ರತಿ ತಿಂಗಳು ಕರೆಂಟ್​​ ಬಿಲ್​​ 200 ರಿಂದ 300 ರೂ.ಗಳಷ್ಟು ಬರುತ್ತಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ 22 ಸಾವಿರ ರೂಪಾಯಿ ಕರೆಂಟ್ ಬಿಲ್​ ಬಂದಿದೆ. ನಂತರ ಅಕ್ಟೋಬರ್ ತಿಂಗಳಿನಲ್ಲಿ ಮತ್ತೆ ಕಳೆದ (ಸೆಪ್ಟೆಂಬರ್​) ತಿಂಗಳ ಬಿಲ್​ಗೆ 500 ರೂ. ಸೇರಿಸಿ ಒಟ್ಟು 23 ಸಾವಿರ ಕಟ್ಟುವಂತೆ ಬೆಸ್ಕಾಂನಿಂದ ಬಿಲ್​ ಬಂದಿದೆ. ಅಲ್ಲದೇ ಪೂರ್ತಿ ಕರೆಂಟ್ ಬಿಲ್ ಹಣ ಪಾವತಿಸುವಂತೆ ಬೆಸ್ಕಾಂ ಒತ್ತಾಯ ಮಾಡಿದೆ. ಬೆಸ್ಕಾಂನಿಂದಾದ ಅವಾಂತರಕ್ಕೆ ರಾಜು ಕಂಗಾಲಾಗಿ ಹೋಗಿದ್ದಾರೆ.

    ‘ನಾವು ದೈನಂದಿನ ಬಳಕೆಯ ಯಾವುದೇ ಕಮರ್ಷಿಯಲ್ ಕಾರಣಕ್ಕೆ ವಿದ್ಯುತ್ ಬಳಸಿಕೊಂಡಿಲ್ಲ. ನಾವು ಬಡವರು, ಕೂಲಿ ಮಾಡಿ ಜೀವನ ನಡೆಸೋದು. ಹೇಗೆ ಅಷ್ಟೊಂದು ಹಣ ನೀಡಲು ಸಾಧ್ಯ’ ಎಂದು ರಾಜು ಬೆಸ್ಕಾಂನ ವಿರುದ್ಧ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಯಾರಿಗೋ ಕೊಡಬೇಕಾಗಿದ್ದ ಬಿಲ್​ ತಪ್ಪಾಗಿ ನಮಗೆ ಬಂದಿದೆ ಎಂದು ರಾಜು ಆರೋಪಿಸಿ, ಬೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts