ಪತ್ನಿಯನ್ನು ಹತ್ಯೆಗೈದ ಪತಿ; ಪುತ್ರನನ್ನು ಶವದೊಂದಿಗೆ ಬಿಟ್ಟು ನಾಪತ್ತೆ!ಮುಂದೆ ನಡೆದಿದ್ದು ಶಾಕಿಂಗ್..

crime scene
Published on

ಉತ್ತರಪ್ರದೇಶ: ಹರಿತವಾದ ವಸ್ತುವಿನಿಂದ ತನ್ನ ಪತ್ನಿಯ ಕತ್ತು ಸೀಳಿದ ವ್ಯಕ್ತಿಯೊಬ್ಬ, ಆಕೆಯ ತಲೆಮೇಲೆ ಇಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದಾನೆ. ತದನಂತರ ತನ್ನ ಎರಡು ವರ್ಷದ ಪುತ್ರನನ್ನು ಪತ್ನಿಯ ಶವದ ಮುಂದೆ ಬಿಟ್ಟು ಸ್ಥಳದಿಂದ ಪರಾರಿಯಾದ ವ್ಯಕ್ತಿ, ಬಳಿಕ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಿಯಾಗಿದೆ.

ಪೊಲೀಸರ ಪ್ರಕಾರ, ಪತ್ನಿಯನ್ನು ಹತ್ಯೆಗೈದ ಪತಿ, ತನ್ನ ಎರಡು ವರ್ಷದ ಮಗನನ್ನು ಸ್ಥಳದಲ್ಲೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಗಾಜಿಯಾಬಾದ್‌ನ ಕೌಶಂಬಿ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು 30 ವರ್ಷದ ಗೌರವ್ ಶರ್ಮಾ ಎಂದು ಗುರುತಿಸಲಾಗಿದ್ದು, ಚೂಪಾದ ಆಯುಧದಿಂದ ಪತ್ನಿಯ ಕತ್ತು ಸೀಳಿ, ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯಿಂದ ಹತ್ಯೆಯಾದ ಮಹಿಳೆಯನ್ನು ಲಕ್ಷ್ಮಿ ರಾವತ್ (24) ಎಂದು ಗುರುತಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ತಲುಪಿದ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ ಗಾಯಗೊಂಡ ಮಗು ಮಹಿಳೆಯ ಶವದ ಮುಂದೆ ಅಳುತ್ತಿರುವುದು ಕಂಡುಬಂದಿದೆ. ಮೃತ ಮಹಿಳೆಯ ಮೊಬೈಲ್ ಫೋನ್ ಶೌಚಾಲಯದ ಸೀಟಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದು,

ಗಾಯಗೊಂಡ ಮಗುವನ್ನು ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net