ಬಾಕ್ಸ್ ಆಫೀಸ್‌ ಲೆಕ್ಕಾಚಾರ: 'ಅನಿಮಲ್'​ ಒಟ್ಟು ಕಲೆಕ್ಷನ್​ ಎಷ್ಟು? ಹೀಗಿದೆ ವಿವರ

ವಿಜಯವಾಣಿ - 2024-01-02T081321.525
Published on

ಮುಂಬೈ: ಬಾಲಿವುಡ್​ ನಟ ರಣಬೀರ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಹಾಗೂ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಅನಿಮಲ್ ಚಿತ್ರವು ಸಿನಿಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆಯುವಲ್ಲಿ ವಿಫಲವಾದರೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದೆ. ಆ್ಯಕ್ಷನ್ ಡ್ರಾಮಾ ಜಾನರ್​ ಒಳಗೊಂಡ ಈ ಸಿನಿಮಾವು ಇದೀಗ ಐದನೇ ವಾರಕ್ಕೆ ಕಾಲಿಟ್ಟಿದ್ದು, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಎಂದಿನಂತೆ ಮುಂದುವರೆಸಿದೆ.

ಕೇವಲ ಹಿಂದಿಯಲ್ಲಿ ಚಿತ್ರ 482 ಕೋಟಿ ರೂ. ಗಳಿಸಿದ್ದು, ಇದೀಗ 500 ಕೋಟಿಯತ್ತ ಸಾಗುತ್ತಿದೆ. ಹೊಸ ವರ್ಷಕ್ಕೆ ತಮ್ಮ ಅನುಯಾಯಿ ಹಾಗೂ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ ಸಂದೀಪ್, ತಮ್ಮ ಚಿತ್ರವನ್ನು ಹಿಟ್ ಮಾಡಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಹೇಳಿದರು. ಯುಎಸ್​ನಲ್ಲಿಯೂ ಉತ್ತಮ ಗಳಿಕೆ ಕಂಡಿರುವ ಅನಿಮಲ್, ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಒಟ್ಟು 888.17 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಟಿ-ಸೀರಿಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಜಂಟಿಯಾಗಿ ನಿರ್ಮಿಸಿದ ಈ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬೇಬಿ ಡಿಯೋಲ್, ಅನಿಲ್ ಕಪೂರ್, ಸೌರಬ್ ಶುಕ್ಲ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net