More

    ಬಿಗಿಯಾಯ್ತು ಪುರಿ ಜಗನ್ನಾಥ ದೇವಾಲಯದ ರೂಲ್ಸ್​! ಈ ರೀತಿಯ ಬಟ್ಟೆಗಳನ್ನು ಧರಿಸಿದರೆ ಪ್ರವೇಶವಿಲ್ಲ

    ಒಡಿಶಾ: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಸೋಮವಾರದಿಂದ ವಸ್ತ್ರ ಸಂಹಿತೆ ಜಾರಿಗೊಳಿಸಿರುವ ಅಧಿಕಾರಿಗಳು, ದೇವಾಲಯಕ್ಕೆ ಆಗಮಿಸುವ ಭಕ್ತರು ತಮಿಷ್ಟದ ಉಡುಗೆಗಳನ್ನು ಧರಿಸಿ ಬರುವಂತಿಲ್ಲ. ಇದಕ್ಕೆ ಅವಕಾಶ ಇರುವುದಿಲ್ಲ ಎಂಬುದನ್ನು ಹೊಸ ಪ್ರಕಟಣೆಯಲ್ಲಿ ಪ್ರತ್ಯೇಕವಾಗಿ ಒತ್ತಿ ತಿಳಿಸಿದ್ದಾರೆ. ಹಾಗಾದ್ರೆ, ಯಾವ ರೀತಿಯ ಬಟ್ಟೆಗಳನ್ನು ಧರಿಸುವಂತಿಲ್ಲ ಎಂಬುದರ ವಿವರ ಹೀಗಿದೆ.

    ಇದನ್ನೂ ಓದಿ: ನೆಟ್ಸ್‌ನಲ್ಲಿ ಎಡಗೈ ವೇಗಿಗಳ ಎದುರು ಟೀಮ್ ಇಂಡಿಯಾ ಆಟಗಾರರ ಕಠಿಣ ತಾಲೀಮು

    ಹಾಫ್ ಪ್ಯಾಂಟ್, ಶಾರ್ಟ್ಸ್, ರಿಪ್ಡ್ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್‌ಲೆಸ್ ಡ್ರೆಸ್‌ಗಳನ್ನು ಧರಿಸಿದವರಿಗೆ ದೇವಾಲಯದೊಳಗೆ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದು, ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ‘ಸಭ್ಯ ಉಡುಪು’ಗಳನ್ನು ಧರಿಸಬೇಕು ಎಂದು ಹೇಳಿದ್ದಾರೆ.

    ಹೊಸ ನಿಯಮವು ಜಾರಿಗೆ ಬಂದಂತೆ, ಪುರುಷರು ಧೋತಿಗಳು ಮತ್ತು ಗಮ್ಚಾಗಳನ್ನು ಧರಿಸಿ 12ನೇ ಶತಮಾನದ ದೇಗುಲಕ್ಕೆ ಪ್ರವೇಶಿಸಿದರೆ, ಮಹಿಳೆಯರು ಹೆಚ್ಚಾಗಿ ಸೀರೆ ಅಥವಾ ಸಲ್ವಾರ್ ಕಮೀಜ್‌ಗಳಲ್ಲಿ ಆಗಮಿಸಲಿದ್ದಾರೆ. ಬಹುತೇಕ ಭಕ್ತಾಧಿಗಳು ದೇವಸ್ಥಾನದ ಸುತ್ತಮುತ್ತಲಿನ ಹೋಟೆಲ್​ನಲ್ಲಿ ಉಳಿದುಕೊಳ್ಳುವುದರಿಂದ ಜಗನ್ನಾಥ ದೇವಾಲಯದ ಆಡಳಿತವು (SJTA), ದೇಗುಲಕ್ಕೆ ಬರುವ ಜನರಿಗೆ ಡ್ರೆಸ್ ಕೋಡ್ ಬಗ್ಗೆ ಹೆಚ್ಚು ಅರಿವು ಮೂಡಿಸುವಂತೆ ಹೋಟೆಲ್‌ ಮಾಲೀಕರಿಗೆ ಈಗಾಗಲೇ ತಿಳಿಸಿದೆ.

    ಇದನ್ನೂ ಓದಿ: ಭೂಮಾಫಿಯಾ ಕರಾಳ ಜಾಲ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ

    ದೇವಸ್ಥಾನದೊಳಗೆ ಗುಟ್ಕಾ ಮತ್ತು ಪಾನ್ ಜಗಿಯುವುದರ ಮೇಲೆ ಹೆಚ್ಚು ನಿಗಾ ವಹಿಸಲಾಗಿದ್ದು, ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೇವಾಲಯದ ಆಡಳಿತವು ಒತ್ತಿ ಹೇಳಿದೆ,(ಏಜೆನ್ಸೀಸ್).

    ರಾಮನ ಅಭಿಷೇಕಕ್ಕೆ ಬಂತು ನೇಪಾಳ ನದಿಗಳ ಜಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts