ವಿಧಾನಸಭೆಯಲ್ಲಿ ಹಾಸನದ ಕೋಳಿಜಗಳ!

revanna- preetham gowda
Published on

ಬೆಂಗಳೂರು: ಹಾಸನ ವಿಚಾರವಾಗಿ ವಿಧಾನಸಭೆ ಅಧಿವೇಶನದಲ್ಲಿ ಪ್ರತಿನಿತ್ಯ ಶಾಸಕ ಪ್ರೀತಂಗೌಡ ಮತ್ತು ಎಚ್.ಡಿ.ರೇವಣ್ಣ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತೆ. ಬುಧವಾರವೂ ಇವರಿಬ್ಬರ ಕೋಳಿಜಗಳ ಮುಂದುವರಿದಿದೆ.

ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್ ಯಾವಾಗ ಕರೆಯುತ್ತೀರಿ? ಕರೆಯುತ್ತೀರೋ ಇಲ್ಲವೋ ಈಗಲೇ ಹೇಳಿ. ಹಾಸನ ಜಿಲ್ಲೆಯ ಕೆಲಸ ಮಾಡಲ್ಲವೆಂದಿದ್ದರೆ ಹೇಳಿ, ನಾವು ತಲೆಯೇ ಹಾಕುವುದಿಲ್ಲ ಎಂದು ಎಚ್.ಡಿ.ರೇವಣ್ಣ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರಕ್ಕೆ ಸವಾಲು ಹಾಕಿದರು. ಇದನ್ನೂ ಓದಿರಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ

1965ರಿಂದ ಹಾಸನ ವಿಮಾನ ನಿಲ್ದಾಣ ನೆನೆಗುದಿಗೆ ಬಿದ್ದಿದೆ. ಜಾಗ ಲಭ್ಯವಿದ್ದರೂ ಮುಂದಿನ ಪ್ರಕ್ರಿಯೆ ನಡೆಯುತ್ತಿಲ್ಲ, ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಶಿವಮೊಗ್ಗ, ವಿಜಯಪುರ ವಿಮಾನ ನಿಲ್ದಾಣಕ್ಕೆ ತೋರಿಸುವ ಆಸಕ್ತಿಯನ್ನು ನಮ್ಮ ಜಿಲ್ಲೆಗೆ ತೋರಿಸುತ್ತಿಲ್ಲ ಎಂದು ರೇವಣ್ಣ ಆರೋಪಿಸಿದರು.

ಈ ಟೀಕೆಗೆ ಪ್ರತಿಯಾಗಿ ಮಾತನಾಡಿದ ಪ್ರೀತಂ ಗೌಡ, 1965ರಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಜೆಟ್‌ನಲ್ಲಿ 175 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ, ಅವರಿಗೆ ವಿಶೇಷ ಧನ್ಯವಾದ ಅರ್ಪಿಸುವೆ ಎಂದರು.

ಇಷ್ಟು ವರ್ಷ ಅಧಿಕಾರ ನಡೆಸಿದವರು ಹಣ ಕೊಡಲಿಲ್ಲ, ನಮ್ಮ ಸರ್ಕಾರ ಹಣ ಘೋಷಿಸಿದೆ, ವಿಮಾನ ನಿಲ್ದಾಣದ ಕಾಮಗಾರಿಯನ್ನು ಆರಂಭಿಸಲಿದೆ ಎಂದು ರೇವಣ್ಣರನ್ನು ಉದ್ದೇಶಿಸಿ ಪ್ರೀತಂ ಗೌಡ ಹೇಳಿದಾಗ ಸದನದಲ್ಲಿದ್ದ ಹಲವು ಶಾಸಕರಲ್ಲಿ ನಗೆಯುಕ್ಕಿ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net