ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

death
Published on

ಮೈಸೂರು: ಗಂಡನ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಸಾವಿಗೂ ಮುನ್ನ ಬರೆದಿಟ್ಟ ಡೆತ್​ನೋಟ್​ ಓದಿದರೆ ಮನಕಲಕುತ್ತೆ.

ಕೆ.ಆರ್.ನಗರ ಮೂಲದ ಬಿಂದುಶ್ರೀ ಆತ್ಮಹತ್ಯೆ ಶರಣಾದ ಯುವತಿ. ಸೌದರ್ಯವತಿಯಾಗಿದ್ದ ಬಿಂದುಶ್ರೀಯನ್ನು ವರ್ಷದ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಂದ್ರಶೇಖರ್ ಎಂಬಾತನೊಂದಿಗೆ ಮದುವೆ ಮಾಡಲಾಗಿತ್ತು. ದಂಪತಿ ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿಯ ನಡತೆ ಶಂಕಿಸಿ ಚಂದ್ರಶೇಖರ್​ ಹಿಂಸೆ ನೀಡುತ್ತಿದ್ದ. ಇದನ್ನು ನೋಡಿ ನೋಡಿ ಸಾಕಾಗಿದ್ದ ಬಿಂದುಶ್ರೀ, ತವರು ಮನೆ ಸೇರಿದ್ದಳು. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ಗಂಡನೊಂದಿಗೆ ಬಿಂದುಶ್ರೀ
ಗಂಡನೊಂದಿಗೆ ಬಿಂದುಶ್ರೀ

'ನಿಮ್ಮ ಮಗಳನ್ನು ಕಳುಹಿಸಿ ಕೊಡಿ. ನಾನು ಚೆನ್ನಾಗಿ ಸಂಸಾರ ಮಾಡುತ್ತೇನೆ' ಬಂದು ಕೇಳಿದ್ದ. ಅದಕ್ಕೆ ಮನೆಯವರೂ ಒಪ್ಪಿದ್ದರು. ಆದರೆ ಆ ಬಳಿಕವೂ ಆತ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ, ಇಂದು(ಮಂಗಳವಾರ) ಡೆತ್​ನೋಟ್​ ಬರೆದಿಟ್ಟ ಬಿಂದುಶ್ರೀ ತವರು ಮನೆಯಲ್ಲೇ ಮಾತ್ರೆ ಸೇವಿಸಿ ಮೃತಪಟ್ಟಿದ್ದಾಳೆ. ಸ್ಥಳದಲ್ಲಿ ಸಿಕ್ಕ ಡೆತ್​ನೋಟ್​ನಲ್ಲಿ ಆಕೆ ತನ್ನ ನೋವನ್ನು ಅಕ್ಷರಕ್ಕಿಳಿಸಿದ್ದಾಳೆ.

'ಅಮ್ಮ, ನಾನು ಗಂಡನ ಮನೆಗೆ ಹೋದರೆ ಮತ್ತೆ ಅದೇ ಕಿರುಕುಳ ಅನುಭವಿಸಬೇಕು. ನೀವಂದುಕೊಂಡಂತೆ ನಿನ್ನ ಅಳಿಯ ಒಳ್ಳೆಯವನಲ್ಲ. ತುಂಬಾ ಹಿಂಸೆ ಕೊಡುತ್ತಾನೆ. ಅವನ ಹಿಂಸೆ ಸಹಿಸಿಕೊಂಡು ನಿತ್ಯ ಸಾಯುವ ಬದಲು ಒಂದೇ ಸಲ ಸಾಯೋದು ಮೇಲು. ಗಂಡನ ಮನೆಬಿಟ್ಟು ಮಗಳು ತವರು ಮನೆ ಸೇರಿದ್ದಾಳೆಂದರೆ ನಿಮಗೂ ಮರ್ಯಾದೆ ಕಡಿಮೆ. ನಾನು ಸತ್ತ ಮೇಲೆ ನನ್ನ ಮಕ್ಕಳನ್ನು ನೀನೇ ಸಾಕು. ಯಾರ ಬಳಿಗೂ ಕಳಿಸಬೇಡ ಅಮ್ಮ. ನನ್ನನ್ನು ಕ್ಷಮಿಸಿ...' ಎಂದು ಬಿಂದುಶ್ರೀ ಡೆತ್​ನೋಟ್​ನಲ್ಲಿ ಬರೆದಿದ್ದಾಳೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net