

ಬೆಂಗಳೂರು: ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಕೆಪಿಸಿಸಿ ಮತ್ತು ರಾಜ್ಯ ಬಿಜೆಪಿ ಘಟಕದ ನಡುವೆ ಟ್ವೀಟ್ ವಾರ್ ಮುಂದುವರಿದಿದೆ.
‘ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎನ್ನುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ? ಬೆಂಕಿಯಿಲ್ಲದೆ ಹೊಗೆಯಾಡುವುದೇ? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್ ಹಗೆತನ ಸಾಧಿಸುತ್ತಿದೆ’ ಎಂದು ನಿನ್ನೆ ಟ್ವೀಟ್ ಮಾಡಿದ್ದ ಬಿಜೆಪಿ ಆ ಮೂಲಕ ಡಿಕೆಶಿಯೇ ಇದರ ಸೂತ್ರಧಾರಿ ಎಂದು ಪರೋಕ್ಷವಾಗಿ ಟೀಕಿಸಿತ್ತು. ಇಂದು ಸಿಡಿ ಕೇಸ್ನ ಕಿಂಗ್ಪಿನ್ ಎನ್ನಲಾದ ನರೇಶ್ಗೌಡನೊಂದಿಗೆ ಡಿಕೆಶಿ ತೆಗೆಸಿಕೊಂಡಿರುವ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿ 'ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ?' ಎಂದು ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ ಮಾಡಿದೆ. 'ಮಾಸ್ಟರ್ ಮೈಂಡ್ʼ ಜತೆ 'ರಿಂಗ್ ಮಾಸ್ಟರ್ʼಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ
ಆರೋಪಿ ಜತೆ ಡಿಕೆಶಿ ಇರೋ ಫೋಟೋ ರಿಲೀಸ್ ಮಾಡಿದ ಬೆನ್ನಲ್ಲೇ ವಿವಿಧ ಕೇಸ್ಗಳ ಪ್ರಮುಖ ಆರೋಪಿಗಳೊಂದಿಗೆ ಬಿಜೆಪಿ ನಾಯಕರು ತೆಗೆಸಿಕೊಂಡ ಫೋಟೋಗಳನ್ನ ಕಾಂಗ್ರೆಸ್ ಅಪ್ಲೋಡ್ ಮಾಡಿದೆ.
'ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿಯೇ ಹೇಳಬೇಕು, ದೇಶದ್ರೋಹಿ ಮತ್ತು ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ? ಡ್ರಗ್ ಡೀಲರ್‌ಗೂ ತೇಜಸ್ವಿ ಸೂರ್ಯನಿಗೂ ಏನು ಸಂಬಂಧ? ಪ್ರತಾಪ್ ಸಿಂಹನಿಗೂ ಈ ಆರೋಪಿಗೂ ಏನು ಸಂಬಂಧ? ಲಕ್ಷ್ಮಣ ಸವದಿ ಮತ್ತು ವಂಚಕ ಯುವರಾಜನಿಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಘಟಕ, ಆರೋಪಿ ಭವಿತ್ ಸಂಸದ ಪ್ರತಾಪಸಿಂಹ ಜತೆ, ಡ್ರಗ್ ಡೀಲರ್ಸ್ ಜತೆ ತೇಜಸ್ವಿ ಸೂರ್ಯ ಇರೋ ಫೋಟೋಗಳಲ್ಲಿ ರಿಲೀಸ್ ಮಾಡಿದೆ.