

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಕೇಸ್ನ ಸೂತ್ರಧಾರರ ಖತರ್ನಾಕ್ ಹಿಸ್ಟರಿ ರಿವೀಲ್ ಆಗಿದೆ. ಈ ಗ್ಯಾಂಗ್ ಮಾಡಿರೋದು ಜಾರಕಿಹೊಳಿಯ ಸಿಡಿ ಮಾತ್ರವಲ್ಲ, ಕಾಂಗ್ರೆಸ್ಮ ಇಬ್ಬರು ಪ್ರಭಾವಿ ಜನಪ್ರತಿನಿಧಿಗಳ ಸಿಡಿಯನ್ನೂ ಮಾಡಿ ಲಕ್ಷ ಲಕ್ಷ ಹಣ ಪೀಕಿದೆಯಂತೆ...
ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್ ಒಳಗೊಂಡ ಟೀಂ ಈ ಹಿಂದೆ ಮಾಡಿದ್ದ ಡೀಲ್ಗಳನ್ನ ಕಂಡು ಎಸ್ಐಟಿ ತಂಡವೇ ದಂಗಾಗಿದೆ. ಮಾ.2ರಂದು ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ವೈರಲ್ ಆಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಮರುದಿನವೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆಗೆ ನಿರ್ಧರಿಸುತ್ತಿದ್ದಂತೆ ರಮೇಶ್ ಜಾರಕಿಹೊಳಿ, ‘ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ, ಇದು ನಕಲಿ ಸಿಡಿ’ ಎಂದು ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ‘ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ-ಮರ್ಯಾದೆ ಊರು ತುಂಬಾ ಹರಾಜಾಗಿದೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ಗೃಹಸಚಿವರು ನನಗೆ ರಕ್ಷಣೆ ನೀಡಬೇಕು’ ಎಂದು ಸಿಡಿ ಲೇಡಿ ಮನವಿ ಮಾಡಿಕೊಂಡಿದ್ದರ ವಿಡಿಯೋವನ್ನು ಅಜ್ಞಾತ ಸ್ಥಳದಿಂದಲೇ ರಿಲೀಸ್ ಮಾಡಲಾಗಿತ್ತು. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ
ಸಿಡಿ ಕೇಸ್ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಸಿಡಿ ಕೇಸ್ನ ಯುವತಿಯನ್ನ ವಿಚಾರಣೆ ನಡೆಸಲು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಆ ಯುವತಿ ಸಿಡಿ ಹೊರ ಬಂದ ಕೂಡಲೇ ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್, ಹ್ಯಾಕರ್ ಜತೆ ಬೆಂಗಳೂರು ಬಿಟ್ಟಿದ್ದಾಳೆ. ಬೆಂಗಳೂರಿನಿಂದ ನೇರವಾಗಿ ಆರೋಪಿಗಳು ಮತ್ತು ಯುವತಿ ಗೋವಾ, ಚೆನ್ನೈ, ಹೈದ್ರಾಬಾದ್, ಎರ್ನಾಕಲುಂ, ಕೊಚ್ಚಿ... ಹೀಗೆ ಊರೂರು ಸುತ್ತಿದ್ದಾರಂತೆ. ಇನ್ನೇನು ಸಿಕ್ಕಿದ್ರು ಅನ್ನುವಷ್ಟರಲ್ಲಿ ಶಂಕಿತ ಆರೋಪಿಗಳು ಎಸ್ಕೇಪ್ ಆಗುತ್ತಿದ್ದು, ಅವರನ್ನು ಹುಡುಕಲು ಎಸ್ಐಟಿ ಕಾರ್ಯಾಚರಣೆ ನಡೆಸುತ್ತಲೇ ಇದೆ.
ಈ ನಡುವೆ ಸಿಡಿ ಕೇಸ್ನ ಸೂತ್ರಧಾರಿಗಳು ಹಿಂದೆ ಮಾಡಿದ್ದ ಡೀಲ್ಗಳ ರಹಸ್ಯ ಒಂದೊಂದೇ ಬಯಲಾಗುತ್ತಿದೆ. ಇವರ ಸಿಡಿ ಸುಳಿಗೆ ಸಿಲುಕಿದ್ದು ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಇದಕ್ಕೂ ಮುನ್ನ ಕಾಂಗ್ರೆಸ್ನ ಇಬ್ಬರು ಪ್ರಭಾವಿ ನಾಯಕರನ್ನು ಟ್ರ್ಯಾಪ್ ಮಾಡಿದ್ದರಂತೆ. ಅವರು ಯಾರು ಗೊತ್ತಾ? ಇದನ್ನೂ ಓದಿರಿ ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ
ಚಿತ್ರದುರ್ಗ ಮೂಲದ ಮಾಜಿ ಸಚಿವರೊಬ್ಬರು ಸಿಡಿ ಗ್ಯಾಂಗ್ನ ಖೆಡ್ಡಾಗೆ ಬಿದ್ದಿದ್ದು, ಮಾ. 1ರಂದು ಸಿಡಿ ಯುವತಿಗೆ 50,000 ಹಣ ಕೊಟ್ಟಿದ್ದಾರೆ. ಅರ್ಜೆಂಟ್ 60 ಸಾವಿರ ಹಣ ಬೇಕು ಕೊಡಿ ಎಂದು ಆ ಯುವತಿ ಕೇಳಿದ್ದಳಂತೆ. ಅದಕ್ಕೆ ಮಾಜಿ ಸಚಿವರು 50 ಸಾವಿರ ಹಣ ಕೊಟಿದ್ದಾರೆ. ಇದಲ್ಲದೆ ಹಾವೇರಿ ಮೂಲದ ಮತ್ತೊಬ್ಬ ಜನಪ್ರತಿನಿಧಿಯ ಸಿಡಿ ಇಟ್ಕೊಂಡು ಡೀಲ್ ಕುದುರಿಸಿತ್ತಂತೆ ಸಿಡಿ ಗ್ಯಾಂಗ್. ಮಾನ-ಮರ್ಯಾದೆಗೆ ಅಂಜಿ 75 ಲಕ್ಷ ರೂ. ಕೊಟ್ಟಿದ್ರಂತೆ ಆ ಮಾಜಿ ಶಾಸಕ. ಎಸ್ಐಟಿ ತನಿಖೆಯಲ್ಲಿ ಸಿಡಿ ಗ್ಯಾಂಗ್ನ ಖರಾಳ ಮುಖ ರಿವೀಲ್ ಆಗಿದೆ ಎಂದು ಮೂಲಗಳು ತಿಳಿಸಿದೆ. (ದಿಗ್ವಿಜಯ ನ್ಯೂಸ್)