ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

accident
Published on

ವಿಜಯಪುರ: ಕೊಲ್ಹಾರ ತಾಲೂಕಿನ ರೋಣಿಗಾಳ ಕ್ರಾಸ್​ನಲ್ಲಿ ಲಾರಿ ಮತ್ತು ಟವೇರಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಕಬಡ್ಡಿ ಕ್ರೀಡಾಪಟುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಕ್ರೀಡಾಪಟುಗಳ ಸ್ಥಿತಿ ಗಂಭೀರವಾಗಿದೆ.

ಸೊಹೇಲ್(22) ಮತ್ತು ಮಹಾದೇವ(20) ಮೃತರು. ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯತ್ತ ಹತ್ತು ಜನರ ಕಬಡ್ಡಿ ತಂಡ ಟವೇರಾದಲ್ಲಿ ಪ್ರಯಾಣಿಸುತ್ತಿತ್ತು.

ಇಂದು ಬೆಳಗ್ಗೆ ರೋಣಿಗಾಳ ಕ್ರಾಸ್​ನಲ್ಲಿ ಲಾರಿ ಮತ್ತು ಟವೇರಾ ನಡುವೆ ಡಿಕ್ಕಿಯಾಗಿದ್ದು, ಟವೇರಾದಲ್ಲಿ ಮುಂಭಾಗ ಕುಳಿತ್ತಿದ್ದ ಮಹಾರಾಷ್ಟ್ರದ ಮೂಲದ ಕ್ರೀಡಾಪಟುಗಳು ಮೃತಪಟ್ಟಿದ್ದು, ಉಳಿದ 8 ಮಂದಿ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಕ್ರೀಡಾಪಟುಗಳನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಟವೇರಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net