

ನೋಯ್ಡಾ: ಮನೆಯ ಪ್ಲ್ಯಾಟ್ನಲ್ಲಿರುವ ಕುಂಡಗಳಲ್ಲಿ (ಮಡಕೆ) ಗಾಂಜಾ(Cannabis)ಬೆಳೆದು, ಡಾರ್ಕ್ವೆಬ್ನಲ್ಲಿ ಮಾರಾಟ ಮಾಡುತ್ತಿದ್ದವನನ್ನು ಗ್ರೇಟರ್ ನೋಯ್ಡಾದಲ್ಲಿ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಾಹುಲ್ ಚೌದರಿ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳಿಂದ 50ಕ್ಕೂ ಅಧಿಕ ಮಡಿಕೆಗಳಲ್ಲಿ ಒಜಿ ಎಂದು ಕರೆಯಲ್ಪಡುವ ಗಾಂಜಾವನ್ನು ಬೆಳೆಯುತ್ತಿದ್ದನು. ಅಲ್ಲದೆ, ತಾನು ಬೆಳೆದ ಗಾಂಜಾವನ್ನು ಡಾರ್ಕ್ವೆಬ್ ಮಾರ್ಕೆಟ್ ಮೂಲಕ ಸರಾಬರಾಜು ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ನಾರ್ಕೋಟಿಕ್ಸ್ ಇಲಾಖೆ ಮತ್ತು ಸ್ಥಳೀಯ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ಅಕ್ರಮ ಬಯಲಾಗಿದೆ.
ಇನ್ನು ಪ್ಲ್ಯಾಟ್ನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸಿಕ್ಕ ಮಾಹಿತಿ ಪ್ರಕಾರ, ಪ್ಲ್ಯಾಟ್ನಲ್ಲಿ 50 ಕ್ಕೂ ಅಧಿಕ ಮಡಿಕೆಗಳಲ್ಲಿ ಗಾಂಜಾ ಬೆಳದಿದ್ದು, ಮನೆಯ ರೂಮ್ ಅನ್ನು ನರ್ಸರಿಯಾಗಿ ಮಾರ್ಪಾಡಿಸಿದ್ದಾನೆ. ಬೆಳೆ ಬೆಳೆಯಲು ಸೂಕ್ತವಾದ ವಾತಾವರಣದ ವ್ಯವಸ್ಥೆ ನಿರ್ಮಿಸಿದ್ದಾನೆ ಎಂದು ದಾಳಿ ವೇಳೆ ಲಕ್ಷಾಂತರ ಮೌಲ್ಯದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).