ನಿಮಗೆ ಮೂತ್ರಪಿಂಡದಲ್ಲಿ ನೋವು ಕಾಣಿಸಿಕೊಂಡರೆ ಅದು ಕಲ್ಲುಗಳ ಸಂಕೇತವಾಗಿರಬಹುದು. ವೈದ್ಯರ ಬಳಿ ತಪಾಸಣೆ ಮಾಡಿಸಿದರೆ ಒಳಿತು. ಮೂತ್ರಪಿಂಡದ ಕಲ್ಲುಗಳ ನೋವು ಕೆಲವೊಮ್ಮೆ ಅಸಹನೀಯವಾಗಿರುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳು ಕಂಡುಬಂದಲ್ಲಿ ಆಕ್ಸಲೇಟ್ ಅಂಶವಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಏಕೆಂದರೆ ಇವುಗಳಿಂದಾಗಿ ಕಲ್ಲುಗಳ ಸಂಖ್ಯೆ ಮತ್ತು ಗಾತ್ರ ಎರಡೂ ಹೆಚ್ಚಾಗಬಹುದು.(Health Tips)
ಇದನ್ನು ಓದಿ: ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ
ರಾಷ್ಟ್ರೀಯ ಕಿಡ್ನಿ ಫೌಂಡೇಶನ್ ಎಲ್ಲಾ ಮೂತ್ರಪಿಂಡದ ಕಲ್ಲುಗಳು ಒಂದೇ ಆಗಿರುವುದಿಲ್ಲ ಎಂದು ಸೂಚಿಸುತ್ತದೆ. ಇದರ ಅತ್ಯಂತ ಸಾಮಾನ್ಯ ವಿಧವೆಂದರೆ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು, ನಂತರ ಯೂರಿಕ್ ಆಮ್ಲದಿಂದ ಉಂಟಾಗುವ ಕಲ್ಲುಗಳು. ಕ್ಯಾಲ್ಸಿಯಂ ಆಕ್ಸಲೇಟ್‌ನಿಂದ ರೂಪುಗೊಂಡ ಕಲ್ಲುಗಳಲ್ಲಿ ಕ್ಯಾಲ್ಸಿಯಂ ಪಾತ್ರವನ್ನು ವಹಿಸುತ್ತದೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ, ಆದರೆ ಇದು ತಪ್ಪು ಭಾವನೆಯಾಗಿದೆ.
ಅತಿಯಾಗಿ ಉಪ್ಪನ್ನು ಸೇವಿಸುವವರಲ್ಲಿ ಮೂತ್ರಪಿಂಡದ ಕಲ್ಲುಗಳು ಬೆಳೆಯುವ ಅಪಾಯವಿದೆ. ಉಪ್ಪಿನಲ್ಲಿ ಸೋಡಿಯಂ ಇರುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಈ ಕ್ಯಾಲ್ಸಿಯಂ ಮೂತ್ರಪಿಂಡದಲ್ಲಿ ಸಂಗ್ರಹವಾಗುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತದೆ. ಆದ್ದರಿಂದ ನೀವು ಹೆಚ್ಚಿನ ಸೋಡಿಯಂ ಅನ್ನು ತೆಗೆದುಕೊಳ್ಳಬಾರದು. ಅನೇಕ ಆಹಾರ ಪದಾರ್ಥಗಳಲ್ಲಿ ಸೋಡಿಯಂ ಇದೆ ಎಂಬುದನ್ನು ನೆನಪಿನಲ್ಲಿಡಿ.
ಮೂತ್ರಪಿಂಡದ ಕಲ್ಲುಗಳನ್ನು ತಪ್ಪಿಸಲು, ಕ್ಯಾಲ್ಸಿಯಂ ಭರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಡಿ. ಏಕೆಂದರೆ ನ್ಯಾಷನಲ್ ಕಿಡ್ನಿ ಫೌಂಡೇಶನ್ ಪ್ರಕಾರ, ಹಾಗೆ ಮಾಡುವುದರಿಂದ ಈ ಸಮಸ್ಯೆಯ ಅಪಾಯ ಹೆಚ್ಚಾಗುತ್ತದೆ.
ನ್ಯಾಷನಲ್ ಕಿಡ್ನಿ ಫೌಂಡೇಶನ್ ಪ್ರಕಾರ, ಕಡಲೆಕಾಯಿ,ರುಬರ್ಬ್(ದಪ್ಪ ಕಾಂಡದ ಜತೆಗೆ ಅಗಲವಾಗಿ ಎಲೆಯಿರುವ) ಪಾಲಕ್ , ಬೀಟ್ರೂಟ್, ಚಾಕೊಲೇಟ್ ಮತ್ತು ಸಿಹಿ ಆಲೂಗಡ್ಡೆಗಳಲ್ಲಿ ಆಕ್ಸಲೇಟ್ ಅಧಿಕವಾಗಿದೆ. ಕ್ಯಾಲ್ಸಿಯಂ ಆಕ್ಸಲೇಟ್ ಹೊಂದಿರುವ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವ ಜನರು ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು.
ನೀವು ಕ್ಯಾಲ್ಸಿಯಂ ಆಹಾರಗಳು ಮತ್ತು ಆಕ್ಸಲೇಟ್ ಆಹಾರವನ್ನು ಒಟ್ಟಿಗೆ ಸೇವಿಸಬೇಕು. ಇದನ್ನು ಮಾಡುವುದರಿಂದ ಈ ಎರಡೂ ಪೋಷಕಾಂಶಗಳು ಹೊಟ್ಟೆ ಅಥವಾ ಕರುಳಿನಲ್ಲಿ ಒಟ್ಟಿಗೆ ಸೇರಿಕೊಳ್ಳುತ್ತವೆ ಮತ್ತು ಮೂತ್ರಪಿಂಡದಲ್ಲಿ ಶೇಖರಣೆಯ ಅಪಾಯವು ಕಡಿಮೆಯಾಗುತ್ತದೆ.
ಸೊಂಟದ ಒಂದು ಬದಿಯಲ್ಲಿ ನೋವು, ಜನನಾಂಗದವರೆಗೆ ನೋವು, ಮೂತ್ರದಲ್ಲಿ ರಕ್ತ, ಶೀತ, ಜ್ವರ, ವಾಕರಿಕೆ, ವಾಂತಿ, ಮೂತ್ರದ ಬಣ್ಣ ಬದಲಾವಣೆ ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ನೀವು ಒಟ್ಟಿಗೆ ನೋಡುತ್ತಿದ್ದರೆ ನಂತರ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರಬಹುದು. ತಕ್ಷಣವೆ ವೈದ್ಯರನ್ನು ಸಂಪರ್ಕಿಸಿ.
ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips