ಥಮ್ಸಪ್​ ಬಾಟಲ್​ನಲ್ಲಿ ಮದ್ಯ ತುಂಬಿ ವರನಿಗೆ ಕುಡಿಸಿದ ಸ್ನೇಹಿತರು! ಮುಂದೇನಾಯ್ತು ನೀವೇ ನೋಡಿ….

Wedding Drinks Friend
Published on

ನವದೆಹಲಿ: ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್​ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಶೇರ್​ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್​ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ಮದುವೆ ಅಂದಮೇಲೆ ಅಲ್ಲಿ ಸ್ನೇಹಿತರ ತುಂಟಾಟಗಳು ಇದ್ದೇ ಇರುತ್ತವೆ. ಸದ್ಯ ವೈರಲ್​ ಆಗಿರುವ ವಿಡಿಯೋ ಕೂಡ ಅದಕ್ಕೆ ಸಂಬಂಧಿಸಿದೆ. ವೇದಿಕೆ ಮೇಲೆ ವಧುವಿನ ಜೊತೆಯಲ್ಲಿ ನಿಂತಿದ್ದ ವರನಿಗೆ ಆತನ ಸ್ನೇಹಿತರು ಥಮ್ಸಪ್ ಬಾಟಲ್​ನಲ್ಲಿ ಮದ್ಯ ಬೆರೆಸಿ ಕುಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.​

ಕನುಮೂರವಿ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಆಗಿದ್ದು, ಈವರೆಗೆ 25 ಮಿಲಿಯನ್​ಗೂ ಅಧಿಕ ವೀಕ್ಷಣೆ ಮತ್ತು 2 ಮಿಲಿಯನ್​ಗೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ. ವಿಡಿಯೋದಲ್ಲಿರುವ ಸುಳಿವಿನ ಪ್ರಕಾರ ಈ ಘಟನೆ ತೆಲಂಗಾಣ ಅಥವಾ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ವಿಡಿಯೋದಲ್ಲಿ ಏನಿದೆ?

ವೇದಿಕೆ ಮೇಲೆ ನಿಂತಿರುವ ವರ ಸಾಫ್ಟ್​ ಡ್ರಿಂಕ್ಸ್​ ಬಾಟಲ್​ನಲ್ಲಿರುವ ಡಿಂಕ್ಸ್​ ಕುಡಿದ ಕೂಡಲೇ ಆತನ ಮುಖದ ಅಭಿವ್ಯಕ್ತಿ ಬದಲಾಗುತ್ತದೆ. ಅದರಲ್ಲಿರುವ ಸಾಫ್ಟ್​ ಡ್ರಿಂಕ್​ ಅಲ್ಲ ಬದಲಾಗಿ ಮದ್ಯ ಎಂಬುದು ಅರಿವೆ ಬರುತ್ತದೆ. ಬಳಿಕ ಸ್ನೇಹಿತರ ಕಡೆ ನೋಡುತ್ತಾನೆ. ಆಗ ಸ್ನೇಹಿತರು ಥಮ್ಸಪ್​ ಬಾಟಲ್​ಗೆ ಮದ್ಯ ಬೆರೆಸಿರುವ ದೃಶ್ಯ ವಿಡಿಯೋದಲ್ಲಿ ಬರುತ್ತದೆ. ಬಳಿಕ ಪಕ್ಕದಲ್ಲಿ ನಿಂತಿದ್ದ ವಧುವಿಗೂ ವರ ಮುಖ ನೋಡಿ ಮದ್ಯದ ವಿಚಾರ ಗೊತ್ತಾದಂತೆ ಕಾಣುತ್ತದೆ. ಬಳಿಕ ಇಬ್ಬರು ನಗುತ್ತಾರೆ.

ಸದ್ಯ ವಿಡಿಯೋ ವೈರಲ್​ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net