More

    9 ವರ್ಷವಾದ್ರೆ ಸಾಕು ಮಕ್ಕಳು ದಿಢೀರ್​ ನಾಪತ್ತೆ: ಗದಗಿನ ಕುಟುಂಬಕ್ಕೆ ಕಾಡುತ್ತಿದೆ 9ರ ಕಂಟಕ!

    ಗದಗ: ಜಿಲ್ಲೆಯ ದಾವಲಖಾನವರ ಕುಟುಂಬಕ್ಕೆ 9 ವರ್ಷದ ಕಂಟಕ ಕಾಡುತ್ತಿದೆ. ಇದು ಕಾಕತಾಳಿಯವೋ? ಆಕಸ್ಮಿಕವೋ? ಅಥವಾ ಮಾಯೆಯೋ? ತಿಳಿಯುತ್ತಿಲ್ಲ. ಆದರೆ, ದಾವಲಖಾನವರ ಕುಟುಂಬ ಮಾತ್ರ 9 ಅಂದರೆ ತುಂಬಾ ಹೆದರುತ್ತಿದೆ.

    ಅಷ್ಟಕ್ಕೂ ದಾವಲಖಾನವರ ಕುಟುಂಬಕ್ಕೆ ಏನಾಯಿತು ಅಂತಾ ನೋಡುವುದಾದರೆ, ಅವರ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷ ಆದರೆ ಹೆತ್ತವರಲ್ಲಿ ಆತಂಕ ಶುರುವಾಗುತ್ತದೆಯಂತೆ. ಏಕೆಂದರೆ, ಒಂಬತ್ತು ವರ್ಷವಾದರೆ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆ ಆಗ್ತಾರಂತೆ. ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಕೂಡ ಪ್ರಯೋಜನ ಆಗುವುದಿಲ್ಲವಂತೆ.

    13 ವರ್ಷಗಳ ಹಿಂದೆ ಅಂದರೆ, 2010ರ ಅಕ್ಟೋಬರ್ 10ರಂದು ಒಂಬತ್ತು ವರ್ಷದ ಇಲಿಯಾಸ್ ದಾವಲಖಾನವರ ಹೆಸರಿನ ಬಾಲಕ ಸಂಜೆ 6 ಗಂಟೆಗೆ ನಾಪತ್ತೆಯಾಗಿದ್ದ. ಇದೀಗ ಅದೇ ಕುಟುಂಬದ ಒಂಬತ್ತು ವರ್ಷದ ಮತ್ತೋರ್ವ ಬಾಲಕ ಅಬ್ಜಲ್ ದಾವಲಖಾನವರ ಮೊನ್ನೆ (ಮೇ. 30) ಸಂಜೆ 6 ಗಂಟೆಗೆ ನಾಪತ್ತೆಯಾಗಿದ್ದಾನೆ.

    ಇದನ್ನೂ ಓದಿ: ಹೆಚ್ಚುತ್ತಿರುವ ತಂಬಾಕು ಬಳಕೆಯ ವ್ಯಸನಿಗಳು: ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಬೇಸರ

    ಕುಟುಂಬಸ್ಥರು ಕಂಗಾಲು

    13 ವರ್ಷದ ಹಿಂದೆ ನಾಪತ್ತೆಯಾಗಿರುವ ಬಾಲಕ ಈವರೆಗೂ ಪತ್ತೆಯಾಗಿಲ್ಲ. ಇದೀಗ ಮತ್ತೊಬ್ಬ ಬಾಲಕ ದಿಢೀರ್ ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ಕಂಗಾಲು ಮಾಡಿದೆ. ಮುದ್ದಿನ ಮಗನಿಗಾಗಿ ಹೆತ್ತತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿದೆ.

    ಫೋಟೋ ಹಿಡಿದು ಅಲೆದಾಟ

    ದಾವಲಖಾನವರ ಕುಟುಂಬ ಗದಗ ನಗರದ ಹೊಂಬಳ ನಾಕಾ ಬಳಿ ವಾಸವಿದೆ. ಇದೀಗ ಮಗನ ಫೋಟೋ ಹಿಡಿದು ಕುಟುಂಬಸ್ಥರು ಅಲೆದಾಡುತ್ತಿದ್ದಾರೆ. ಈ ಸಂಬಂಧ ಗದಗ ಶಹರ ಪೊಲೀಸ ಠಾಣೆಯಲ್ಲಿ ಅಪಹರಣ ದೂರು ದಾಖಲಾಗಿದ್ದು, ಪೊಲೀಸರಿಂದಲೂ ಪತ್ತೆಕಾರ್ಯ ನಡೆಯುತ್ತಿದೆ. ಸದ್ಯ ಈ ಪ್ರಕರಣ ನಿಗೂಢವಾಗಿಯೇ ಉಳಿದುಕೊಂಡಿದೆ. (ದಿಗ್ವಿಜಯ ನ್ಯೂಸ್​)

    ವಿಚಿತ್ರವಾದರೂ ಸತ್ಯ: ಅಂತ್ಯಸಂಸ್ಕಾರದ ವೇಳೆ ಎದ್ದು ಕೂತ ಹೆಣ..!

    ಲೈಂಗಿಕತೆ ಬದಲು ಮಾದಕ ವ್ಯಸನಕ್ಕೆ ಕಾರಣವಾಗುತ್ತಿದೆ ಕಾಂಡೋಮ್​? ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ!

    ಕಲಬುರಗಿಯಲ್ಲಿ ವಿದ್ಯುತ್​ ಬಿಲ್​ ವಸೂಲಿಗೆ ಹೋದ ಜೆಇ, ಲೈನ್​ಮ್ಯಾನ್​ ಮೇಲೆ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts