More

    ಲೈಂಗಿಕತೆ ಬದಲು ಮಾದಕ ವ್ಯಸನಕ್ಕೆ ಕಾರಣವಾಗುತ್ತಿದೆ ಕಾಂಡೋಮ್​? ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ!

    ನವದೆಹಲಿ: ಕಳೆದ ವರ್ಷ ಪಶ್ಚಿಮ ಬಂಗಾಳದ ದರ್ಗಾಪುರ್​ ಏರಿಯಾದಿಂದ ಆತಂಕಕಾರಿ ವರದಿಯೊಂದು ಪ್ರಕಟವಾಗಿತ್ತು. ಅದೇನೆಂದರೆ, ಆ ಏರಿಯಾದಲ್ಲಿ ಫ್ಲೇವರ್ಡ್​ ಕಾಂಡೋಮ್​ಗಳು ರಾಕೆಟ್​ ವೇಗದಲ್ಲಿ ಮಾರಾಟವಾಗುತ್ತಿದ್ದವು. ಆದರೆ, ಆ ಕಾಂಡೋಮ್​ಗಳನ್ನು ಲೈಂಗಿಕ ಕ್ರಿಯೆಗಾಗಿ ಬಳಸುತ್ತಿರಲಿಲ್ಲ. ಬದಲಾಗಿ ಮಾದಕ ವ್ಯಸನಕ್ಕೆ ಬಳಸಲಾಗುತ್ತಿತ್ತು. ಈ ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್​ ಕೆಮಿಕಲ್ಸ್​ನಿಂದ ದೇಹಕ್ಕೆ ತುಂಬಾ ಅಪಾಯಕಾರಿ ಎಂಬ ಸಂಗತಿ ಬಯಲಾಗಿದೆ.

    ಕಾಂಡೋಮ್​ಗಳ ಮಾರಾಟದ ಬಗ್ಗೆ ಈ ಹಿಂದೆ ಮೆಡಿಕಲ್​ ಸ್ಟೋರ್ ಸಿಬ್ಬಂದಿಯೊಬ್ಬರು ಮಾತನಾಡಿ, ಆ್ಯಪಲ್​, ಸ್ಟ್ರಾಬೆರೀಸ್​ ಮತ್ತು ಚಾಕೊಲೇಟ್​ ಫ್ಲೇವರ್​ ಇರುವ ಕಾಂಡೋಮ್​ಗಳು ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲಿಯು ಕೆಮಿಕಲ್​ನಿಂದ ಅಮಲೇರಿಸಿಕೊಳ್ಳಲು ಯುವಕರು ಹೆಚ್ಚಾಗಿ ಇದನ್ನು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

    ಇದನ್ನೂ ಓದಿ: ಜೂನ್​ 4ರಂದು ಸ್ಥಳದಲ್ಲೇ ಚಿತ್ರ ಬಿಡಿಸಿ ಸ್ಪರ್ಧೆ: ವಿಜಯವಾಣಿ, ದಿಗ್ವಿಜಯ ನ್ಯೂಸ್​ನಿಂದ ಮಕ್ಕಳಿಗಾಗಿ ಆಯೋಜನೆ

    ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಎಂಬುವರು ಮಾತನಾಡಿ, ಕಾಂಡೋಮ್​ನಲ್ಲಿ ಆರೊಮ್ಯಾಟಿಕ್ ಸಂಯುಕ್ತಗಳು ಇರುತ್ತವೆ. ಅದನ್ನು ಮದ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಇದು ತಂಬಾ ವ್ಯಸನಕಾರಿಯಾಗಿದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಸಹ ಬಳಸುತ್ತಾರೆ ಎಂದು ತಿಳಿಸಿದ್ದರು.

    ಕಾಂಡೋಮ್​ ಹೇಗೆ ವ್ಯಸನಕ್ಕೆ ಕಾರಣವಾಗುತ್ತದೆ?

    ರಸಾಯನಶಾಸ್ತ್ರ ಶಿಕ್ಷಕರ ಪ್ರಕಾರ ಫ್ಲೇವರ್ಡ್​ ಕಾಂಡೋಮ್​ ಅನ್ನು ತುಂಬಾ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿದರೆ, ಅದರಲ್ಲಿರುವ ದೊಡ್ಡ ರಾಸಾಯನಿಕ ಅಣುಗಳು ಒಡೆಯುತ್ತವೆ ಮತ್ತು ಆಲ್ಕೋಹಾಲ್​ಯುಕ್ತ​​ ಸಂಯುಕ್ತಗಳನ್ನು ರೂಪಿಸುತ್ತವೆ. ಈ ಕಾರಣದಿಂದಾಗಿ ಕಾಂಡೋಮ್​ ಮಾದಕತೆಯನ್ನು ಉಂಟುಮಾಡುತ್ತವೆ. ಕೆಮ್ಮಿನ ಸಿರಪ್, ಸ್ನಿಫಿಂಗ್ ಅಂಟು ಮತ್ತು ಕೈಗಾರಿಕಾ ಅಂಟುಗಳು ಸಹ ಇದೇ ರೀತಿಯ ಮಾದಕತೆಯನ್ನು ಉಂಟು ಮಾಡುತ್ತವೆ. ಆದರೆ, ಇವುಗಳು ಪ್ರಮುಖ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಅದರಲ್ಲೂ ಬೆಳವಣಿಗೆಯ ಹಂತದಲ್ಲಿದ್ದರೆ ಅಪಾಯ ಹೆಚ್ಚು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

    ಇದನ್ನೂ ಓದಿ: ಕಳೆದುಹೋಗಿದ್ದ ದುಬಾರಿ ಐಫೋನ್ ಕೆಲವೇ ಗಂಟೆಗಳಲ್ಲಿ ಪತ್ತೆ! ಸ್ವಿಚ್ ಆಫ್ ಆಗಿದ್ದ ಮೊಬೈಲನ್ನು ಪತ್ತೆಹಚ್ಚಿದ್ಹೇಗೆ?

    ಯಾವೆಲ್ಲ ಸಮಸ್ಯೆಗಳು ಕಾಡಬಹುದು?

    ಫ್ಲೇವರ್ಡ್​ ಕಾಂಡೋಮ್​ ಅನ್ನು ಬಿಸಿನೀರಿನಲ್ಲಿ ಕುದಿಸಿದಾಗ ಹೊರಸೂಸುವ ಹೊಗೆ ತುಂಬಾ ಅಪಾಯಕಾರಿಯಾಗಿದ್ದು, ಇದು ಶಾಶ್ವತ ಮೆದುಳಿನ ಹಾನಿ ಉಂಟುಮಾಡುತ್ತದೆ ಮತ್ತು ವರ್ತನೆಯಲ್ಲಿನ ಬದಲಾವಣೆಗೆ ಕಾರಣವಾಗಲಿದೆ. ಅದೇ ರೀತಿ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಕಲಿಕೆಯಲ್ಲಿ ಅಸಮರ್ಥತೆಗೆ ಕಾರಣವಾಗುತ್ತದೆ. ಇದಲ್ಲದೆ, ಕಾಂಡೋಮ್​ನಲ್ಲಿರುವ ರಾಸಾಯನಿಕವು ಮೆದುಳಿನ ಮೇಲೆ ಪರಿಣಾಮ ಬೀರುವ ಅನೇಕ ಮಾನಸಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. (ಏಜೆನ್ಸೀಸ್​)

    ಕಲಬುರಗಿಯಲ್ಲಿ ವಿದ್ಯುತ್​ ಬಿಲ್​ ವಸೂಲಿಗೆ ಹೋದ ಜೆಇ, ಲೈನ್​ಮ್ಯಾನ್​ ಮೇಲೆ ಹಲ್ಲೆ

    ಕೋಟಿ ಕೋಟಿ ಕಳಕೊಂಡರೂ ಮತ್ತೊಮ್ಮೆ ಎಲಾನ್ ಮಸ್ಕ್ ಅತೀ ಶ್ರೀಮಂತ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts