

ಕೊಡಗು: ನಿಯಂತ್ರಣ ತಪ್ಪಿದ ಕಿರು ವಿಮಾನವೊಂದು (ಗ್ಲೈಡರ್) ರಸ್ತೆಗೆ ಅಪ್ಪಳಿಸಿರುವಂತಹ ಘಟನೆ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ನಡೆದಿದೆ.
ಮುತ್ತಣ್ಣ ಎಂಬುವವರಿಗೆ ಸೇರಿದ ಗ್ಲೈಡರ್ ಅಪಘಾತವಾಗಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲ ವರ್ಷಗಳ ಹಿಂದೆಯೂ ಮುತ್ತಣ ಅವರ ಗ್ಲೈಡರ್ ಅಪಘಾತವಾಗಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು. ಇದೀಗ ಎರಡನೇ ಬಾರಿಗೆ ಮುತ್ತಣ್ಣ ಅವರ ಗ್ಲೈಡರ್ ಅಪಘಾತವಾಗಿದೆ.
ಗ್ಲೈಡರ್ ಅಪಘಾತವಾಗಿ ನೆಲಕ್ಕೆ ಅಪ್ಪಳಿಸುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ಲೈಡರ್ ರಸ್ತೆಗೆ ಬಂದು ಅಪ್ಪಳಿಸುವಾಗ ಮುಂಭಾಗದಿಂದ ಕಾರೊಂದು ಬರುತ್ತಿತ್ತು. ಕಾರು ಚಾಲಕನ ಸಮಯ ಪ್ರಜ್ಞೆ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.