VIDEO | ಬಿಟ್ ಕಾಯಿನ್​​ನಂತೆ ಸಿಂಗರಿಸಿಕೊಂಡ ಯುವತಿಯಿಂದ ವೇದಿಕೆ ಮೇಲೆ ರ‍್ಯಾಂಪ್ ವಾಕ್!

Ramp Walk
Published on

ನ್ಯೂ ಓರ್ಲಿಯನ್ಸ್(ಫ್ರೆಂಚ್): ಜಾಗತಿಕ ಸ್ಪರ್ಧೆಯ 71ನೇ ವಾರ್ಷಿಕೋತ್ಸವದಲ್ಲಿ ಸಾಲ್ವಡಾರ್​ನ್ ರೂಪದರ್ಶಿ ಅಲೆಂಜಾಂಡ್ರಾ ಗುಜಾರ್ಡೋ ತಮ್ಮ ವಿಶೇಷ ಶೈಲಿಯ ಉಡಪು ಧರಿಸಿ, ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಇದು ನೆರೆದಿದ್ದ ಎಲ್ಲರ ಗಮನ ಸೆಳೆದಿದೆ. ಈ ಫೋಟೋಗಳನ್ನು ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇವರು ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದ್ದು, ಸಾಕಷ್ಟು ಮೆಚ್ಚುಗೆಯ ಕಮೆಂಟ್​ಗಳು ಬರುತ್ತಿದೆ.

ಎರಡು ವರ್ಷಗಳ ಹಿಂದೆ ಸಾಲ್ವಡಾರ್​ ದೇಶ ಕ್ರಿಪ್ಟೋ ಕರೆನ್ಸಿಯನ್ನು ಕಾನೂನು ಪ್ರಕಾರ ಅಳವಡಿಸಿಕೊಂಡ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಈ ವಿಚಾರವನ್ನೇ ಮುಂದಿಟ್ಟುಕೊಂಡು ರೂಪದರ್ಶಿ ಅಲೆಂಜಾಂಡ್ರಾ ಗುಜಾರ್ಡೋ ಬಿಟ್​​ ಕಾಯಿನ್​ನಂತೆ ಸಿಂಗರಿಸಿಕೊಂಡು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ.

ಬಿಟ್ ಕಾಯಿನ್​ನಂತೆ ಸಿಂಗರಿಸಿಕೊಂಡಿರುವ ಉಡುಪಿಗೆ, ಬಾದಾಮಿ ಹಾಗೂ ಕೋಕೋ ಬೀಜಗಳನ್ನು ಅಳವಡಿಸಲಾಗಿದೆ. ಇದು ಈ ಉಡುಪಿನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ರೂಪದರ್ಶಿ ತಮ್ಮ ಬೆನ್ನಿಗೆ ಸ್ಥಳೀಯ ಕರೆನ್ಸಿಯಾಗಿದ್ದ US ಡಾಲರ್​ನ ಪ್ರತಿಯನ್ನು ಅಳವಡಿಸಿಕೊಂಡಿದ್ದಾರೆ. ಪ್ರಾಚೀನ ಕಾಲದಲ್ಲಿ ಕೋಕೋವನ್ನು ಮೆಸೊ ಅಮೆರಿಕದಾದ್ಯಂತ ಹಣವಾಗಿ ಬಳಸಲಾಗುತ್ತಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net