ಫಾರ್ಮ್​ಹೌಸ್​ನಲ್ಲಿ ಇಬ್ಬರು ಗರ್ಲ್​ ಫ್ರೆಂಡ್ಸ್​ ಜತೆ ಏನ್ಮಾಡ್ತಿದ್ದಾರೆ ಸಲ್ಮಾನ್​?

170420050630salman-iulia-jackie
Published on

ಇಡೀ ಮುಂಬೈ ಕರೊನಾದಿಂದಾಗಿ ಸ್ಮಶಾನದಂತಾಗಿದೆ. ಜನರೆಲ್ಲರೂ ಗೂಡು ಸೇರಿದ್ದಾರೆ. ಒಂದಷ್ಟು ಸಡಿಲಿಕೆ ಇದ್ದರೂ, ಅವಶ್ಯಕತೆ ಇದ್ದವರು ಆಚೆ ಬರುತ್ತಿದ್ದಾರೆ. ಸಿನಿಮಾದವರಂತೂ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿಟಿಯಲ್ಲಿ ಓಡಾಟ ನಡೆಸುವುದಂತೂ ದೂರದ ಮಾತು. ಹೀಗಿರುವಾಗಲೇ ಸಲ್ಮಾನ್​ ಖಾನ್​ ಒಡೆತನದ ಪಾನ್​ವೆಲ್​ ಫಾರ್ಮ್​ಹೌಸ್​ನಲ್ಲಿ ಕಳೆದ ಹಲವು ದಿನಗಳಿಂದ ಜಾಕ್​ಲೀನ್​ ಫರ್ನಾಂಡೀಸ್​ ಮತ್ತು ಲೂಲಿಯಾ ವೆಂಚರ್​ ಠಿಕಾಣಿ ಹೂಡಿದ್ದಾರೆ!

ಹೌದು, ಲಾಕ್​ಡೌನ್​ ಶುರುವಾಗಿ 50 ದಿನಗಳಾಗುತ್ತ ಬಂದಿದೆ. ಇಡೀ ದೇಶವೇ ಲಾಕ್​ ಆಗಿದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈನಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಹೀಗಿರುವಾಗಲೇ ಅದ್ಯಾವ ಗ್ಯಾಪ್​ನಲ್ಲಿ ಜಾಕ್​ಲೀನ್ ಫಾರ್ಮ್​ಹೌಸ್​ ಸೇರಿಕೊಂಡರೋ ಗೊತ್ತಿಲ್ಲ. ಜಿಮ್​ನಲ್ಲೂ ಅವರೇ, ಉಪಹಾರದ ಹೊತ್ತಲ್ಲೂ ಅವರೇ, ಇದೀಗ ಅದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತೇರೆ ಬಿನ್​ ಎಂಬ ಹಾಡನ್ನೇ ಚಿತ್ರೀಕರಿಸಿದ್ದಾರೆ.

ಕೇವಲ ಜಾಕ್​ಲೀನ್​ ಅಷ್ಟೇ ಸಲ್ಮಾನ್​ ಜತೆಗಿಲ್ಲ. ಬದಲಿಗೆ ಈ ಹಿಂದೆ ಸಲ್ಮಾನ್​ ಪ್ರೇಯಸಿ ಎಂದೇ ಹೇಳಲಾಗುತ್ತಿದ್ದ, ಲೂಲಿಯಾ ವೆಂಚರ್​ ಸಹ ಫಾರ್ಮ್​ಹೌಸ್​ನಲ್ಲಿ ತಂಗಿದ್ದಾರೆ. ಅಲ್ಲಿನ ಕುದುರೆಗಳ ಮೇಲೆ ಸವಾರಿ ಮಾಡಿದ್ದಾರೆ. ಕುರಿಮರಿಗಳ ಜತೆ ಆಟವಾಡಿದ್ದಾರೆ. ಕೆರೆಯಲ್ಲಿ ಮೀನು ಹಿಡಿದು ತಿಂದಿದ್ದಾರೆ. ಒಟ್ಟಿನಲ್ಲಿ ಲಾಕ್​ಡೌನ್​ ಸಮಯವನ್ನು ಒಮದು ರೀತಿ ಜಾಲಿ ಟ್ರಿಪ್​ ಎಂಬಂತೆ ಅನುಭವಿಸುತ್ತಿದ್ದಾರೆ ಜಾಕ್​ಲೀನ್​ ಮತ್ತು ಲೂಲಿಯಾ. ಇವರ ಜತೆಗೆ ಬಿಗ್​ಬಾಸ್​ ಸ್ಪರ್ಧಿ ನಿಕೇತನ್ ಸೇರಿ ಹಲವರು ಸಲ್ಮಾನ್​ ಖಾನ್​ ಫಾರ್ಮ್​ಹೌಸ್​ ಸೇರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net