More

    ಅಲ್ಲಿ ಕನಸುಗಳಿವೆ, ನೂರಾರು ಕಥೆಗಳಿವೆ … ಚಿತ್ರಮಂದಿರಗಳ ಬಗ್ಗೆ ಸತೀಶ್ ಹೀಗೆ ಹೇಳುತ್ತಾರೆ ಕೇಳಿ

    ಲಾಕ್‌ಡೌನ್‌ನಿಂದ ಚಿತ್ರಮಂದಿರಗಳು ಸಂಕಷ್ಟದಲ್ಲಿವೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಿಂತು ಎರಡು ತಿಂಗಳಾಗುತ್ತಾ ಬಂದಿದೆ. ಲಾಕ್‌ಡೌನ್ ಮುಗಿದ ಮೇಲೂ, ಜನ ಭಯ ಬಿಟ್ಟು ಚಿತ್ರಮಂದಿರಗಳಿಗೆ ಹೋಗಿ ಚಿತ್ರಗಳನ್ನು ನೋಡುತ್ತಾರೆ ಎಂಬ ನಂಬಿಕೆ ಯಾರಲ್ಲೂ ಇಲ್ಲ. ಹೀಗಿರುವಾಗಲೇ, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘವು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಹಲವು ಬೇಡಿಕೆಗಳನ್ನಿಟ್ಟಿದೆ. ತಮ್ಮ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಮನವಿ ಮಾಡಿದೆ.

    ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಮನೆಯಲ್ಲಿ ಬೇರೆಯದೇ ಹೆಸರಿದೆ; ಏನದು?

    ಹಾಗಾದರೆ, ಚಿತ್ರಮಂದಿರಗಳು ಇನ್ನು ಮುಂದೆ ಮುಗಿದ ಅಧ್ಯಾಯವಾ? ಚಿತ್ರಮಂದಿರಗಳಿಗೆ ಪರ್ಯಾಯವಾಗಿ ಓಟಿಟಿಗಳು ಬೆಳೆಯುತ್ತವಾ? ಎಂಬಂತಹ ಪ್ರಶ್ನೆಗಳು ಸಾರ್ವಜನಿಕ ವಲಯಗಳಲ್ಲಿ ಹೆಚ್ಚು ಕೇಳಿ ಬರುತ್ತಿದೆ. ಆದರೆ, ಚಿತ್ರಮಂದಿರಗಳಿಗೆ ಎಂದೂ ಸಾವಿಲ್ಲ ಎಂದು ನಟ-ನಿರ್ಮಾಪಕ ಸತೀಶ್ ನೀನಾಸಂ ಅಭಿಪ್ರಾಯಪಟ್ಟಿದ್ದಾರೆ.

    ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದು, ಹಲವು ವಿಷಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುವ ಸತೀಶ್ ನೀನಾಸಂ, ಈಗ ಚಿತ್ರಮಂದಿರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಕೊನೆಗೂ ಗೊತ್ತಾಯ್ತು ಮಾಧುರಿ ದೀಕ್ಷಿತ್ ಸಕ್ಸಸ್ ಮಂತ್ರ!

    ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಚಿತ್ರಮಂದಿರಗಳು ಎಂದೂ ಮುಚ್ಚುವುದಿಲ್ಲ. ಅಲ್ಲಿ ಕನಸುಗಳಿವೆ, ನೂರಾರು ಜನರ ಕಥೆಗಳಿವೆ, ನಮ್ಮ ನೆಚ್ಚಿನ ನಾಯಕರಿದ್ದಾರೆ, ಲಕ್ಷಾಂತರ ಜನರ ಬದುಕಿದೆ. ಅದೊಂದು ಅದ್ಭುತ ಲೋಕ. ಇಂಥಾ ಮಹಾಮಾರಿಗಳು ನೂರಾರು ಬಂದರೂ, ಅವರನ್ನೆಲ್ಲಾ ಮೆಟ್ಟಿ ಮತ್ತು ನಮ್ಮ ಚಿತ್ರಮಂದಿರಗಳು ಬದುಕುತ್ತವೆ’ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
    ಸತೀಶ್ ಮಾತು ನಿಜವಾಗುತ್ತದಾ? ವೇಯ್ಟ ಆ್ಯಂಡ್ ಸೀ …

    ಕೇಬಲ್ ಚಾನಲ್ ವಿರುದ್ಧ ಲೀಗಲ್ ಆ್ಯಕ್ಷನ್ … ‘ಕೆಜಿಎಫ್​’ ಚಿತ್ರತಂಡದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts