More

    ಕೇಬಲ್ ಚಾನಲ್ ವಿರುದ್ಧ ಲೀಗಲ್ ಆ್ಯಕ್ಷನ್ … ‘ಕೆಜಿಎಫ್​’ ಚಿತ್ರತಂಡದ ನಿರ್ಧಾರ

    ಯಶ್ ಅಭಿನಯದ ‘ಕೆಜಿಎಫ್​’ ಚಿತ್ರ ಬಿಡುಗಡೆಯಾಗಿ ಒಂದೂವರೆ ವರ್ಷಗಳೇ ಆಗಿವೆ. ಆದರೆ, ಇನ್ನೂ ಸುದ್ದಿಯಲ್ಲಿದೆ ಎನ್ನುವುದು ವಿಶೇಷ. ಈ ಚಿತ್ರವನ್ನು ಇದೀಗ ಆಂಧ್ರದಲ್ಲಿ ಕೇಬಲ್ ಚಾನಲ್ ಒಂದು ಅನಧಿಕೃತವಾಗಿ ಪ್ರಸಾರ ಮಾಡಿದ್ದು, ಆ ಚಾನಲ್ ವಿರುದ್ಧ ನ್ಯಾಯಯುತ ಹೋರಾಟ ನಡೆಸುವುದಾಗಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಅಭಿನಯದ ಪಾಠ

    ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ. ‘ಎವರಿ ಎನ್ನುವ ತೆಲುಗಿನ ಲೋಕಲ್ ಚಾನಲ್‌ವೊಂದು ಯಾರ ಅನುಮತಿ ಪಡೆಯದೆ, ಅನಧಿಕೃತವಾಗಿ ಪ್ರಸಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಅತ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಕ್ಕೆ ಪ್ರಯತ್ನ ನಡೆದಿದೆ. ಸ್ಯಾಟಿಲೈಟ್ ಹಕ್ಕುಗಳ ಮಾರಾಟದ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿರುವಾಗಲೇ, ಒಂದು ಕೇಬಲ್ ಚಾನಲ್ ಈ ರೀತಿ ಮಾಡಿರುವುದು ದುರಂತ. ಅನಧಿಕೃತವಾಗಿ ಪ್ರಸಾರ ಮಾಡಿರುವುದಕ್ಕೆ ಸಾಕಷ್ಟು ಸಾಕ್ಷಿ ಇದೆ’ ಎಂದು ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಕಾಸ್ಟಿಂಗ್​ ಕೌಚ್​ ಬಗ್ಗೆ ರಣವಿಕ್ರಮನ ಬೆಡಗಿ ಕೊಟ್ರು ಶಾಕಿಂಗ್​ ಸ್ಟೇಟ್​ಮೆಂಟ್​!

    ‘ಕೆಜಿಎಫ್​’ ಬಿಡುಗಡೆಯಾಗಿದ್ದು 2018ರ ಕೊನೆಯಲ್ಲಿ. ಚಿತ್ರ ಯಶಸ್ವಿ ಪ್ರದರ್ಶನ ಕಂಡು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಯಿತು. ಆ ನಂತರ ಚಿತ್ರದ ಅಧಿಕೃತ ಸ್ಯಾಟಿಲೈಟ್ ಹಕ್ಕು ಪಡೆದ ಆಯಾ ಭಾಷೆಯ ಚಾನಲ್‌ಗಳು, ಚಿತ್ರವನ್ನು ಪ್ರಸಾರ ಮಾಡಿದವು. ಆದರೆ, ತೆಲುಗು ಸ್ಯಾಟಿಲೈಟ್ ಹಕ್ಕುಗಳು ಇದುವರೆಗೂ ಕಾರಣಾಂತರಗಳಿಂದ ಮಾರಾಟವಾಗಿರಲಿಲ್ಲವಂತೆ. ಕೆಲವು ದಿನಗಳ ಹಿಂದೆ ಚಾನಲ್‌ವೊಂದರ ಜತೆಗೆ ಮಾತುಕತೆಯೂ ಆಗಿತ್ತಂತೆ. ಆದರೆ, ಅಷ್ಟರಲ್ಲಿ ಇತ್ತೀಚೆಗೆ ಆಂಧ್ರದಲ್ಲಿ ಕೇಬಲ್ ಚಾನಲ್‌ವೊಂದು ಅನಧಿಕೃತವಾಗಿ ಚಿತ್ರವನ್ನು ಪ್ರಸಾರ ಮಾಡಿ, ಚಿತ್ರತಂಡದ ಕೆಂಗಣ್ಣಿಗೆ ಗುರಿಯಾಗಿದೆ. ಹೀಗೆ ಅನಧಿಕೃತವಾಗಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ, ಚಿತ್ರತಂಡವು ನ್ಯಾಯಯುತವಾಗಿ ಫೈಟ್​ ಮಾಡಲು ನಿರ್ಧರಿಸಿದೆ.

    ಕೊಡವ ದಿರಿಸಿನಲ್ಲಿ ರಶ್ಮಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts