‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!

blank

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರಕ್ಕೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದಿನೇದಿನೆ ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಾಗ್ಯೂ ಇಬ್ಬರು ಸ್ಟಾರ್ ಕಲಾವಿದರು ಮೌನವಹಿಸಿರುವುದು ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.

blank

ಕಾಂತಾರ ಚಿತ್ರದ ಕುರಿತು ಸ್ಯಾಂಡಲ್​ವುಡ್ ಜತೆಗೆ ದಕ್ಷಿಣ ಭಾರತದ ಇತರ ಚಿತ್ರರಂಗಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಬಾಲಿವುಡ್​ನಲ್ಲಿ ಇದುವರೆಗೂ ಯಾವುದೇ ಕನ್ನಡ ಸಿನಿಮಾ ಮಾಡದ ಎರಡು ದಾಖಲೆಗಳನ್ನು ಕಾಂತಾರ ಮಾಡಿದೆ. ಒಟ್ಟಾರೆಯಾಗಿದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳ ಪ್ರೇಕ್ಷರಷ್ಟೇ ಅಲ್ಲದೆ, ಅಲ್ಲಿನ ದಿಗ್ಗಜ ನಟ-ನಟಿಯರೂ ಕಾಂತಾರವನ್ನು ವೀಕ್ಷಿಸಿ, ತಮ್ಮ ಅನಿಸಿಕೆ ಹೇಳಿಕೊಳ್ಳುತ್ತಿರುವುದಲ್ಲದೆ, ಭಾರಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಆದರೆ ಕನ್ನಡದಲ್ಲಿ ನಟ ಯಶ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಕಾಂತಾರದ ಯಶಸ್ಸಿನ ಕುರಿತು ಮೌನ ವಹಿಸಿರುವುದು ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ. ಹಾಗಂತ ಬೇರೆ ಯಾರೇ ಈ ಚಿತ್ರದ ಬಗ್ಗೆ ಮಾತನಾಡದಿದ್ದರೂ ಅದು ಅಂಥ ಗಮನ ಸೆಳೆಯುವುದಿಲ್ಲ. ಆದರೆ ಇವರಿಬ್ಬರ ಮೌನ ಎದ್ದು ಕಾಣುತ್ತಿದೆ. ಏಕೆಂದರೆ, ಯಶ್​ಗೆ ಕೆಜಿಎಫ್​ ಮೂಲಕ ದೊಡ್ಡ ಬ್ರೇಕ್ ಕೊಟ್ಟ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’​. ‘ಕೆಜಿಎಫ್​-1’, ‘ಕೆಜಿಎಫ್​-2’ ಮೂಲಕ ಯಶ್​ ಅವರನ್ನು ಪ್ಯಾನ್​ ಇಂಡಿಯಾ ಲೆವೆಲ್​ಗೆ ಕರೆದೊಯ್ದು ನಿಲ್ಲಿಸಿದ್ದು ‘ಹೊಂಬಾಳೆ ಫಿಲ್ಸ್ಮ್’. ಅದಾಗ್ಯೂ ಅವರು ಹೊಂಬಾಳೆಯದ್ದೇ ನಿರ್ಮಾಣದಲ್ಲಿ ಮೂಡಿಬಂದು ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರದ ಕುರಿತು ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.

ಇನ್ನು ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದೇ ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ. ಈ ಚಿತ್ರದಲ್ಲಿನ ಪಾತ್ರ, ಸಿನಿಮಾಗೆ ಸಿಕ್ಕ ಯಶಸ್ಸಿನಿಂದಲೇ ರಶ್ಮಿಕಾ ಸಾಕಷ್ಟು ಜನಪ್ರಿಯತೆ ಗಳಿಸಿ, ಪರಭಾಷೆಗಳಲ್ಲೂ ಅವಕಾಶ ಸಿಗುವಂತಾಗಿತ್ತು. ಹೀಗೆ ತನ್ನನ್ನು ನಾಯಕಿಯಾಗಿ ಲಾಂಚ್ ಮಾಡಿದ ನಿರ್ದೇಶಕರ ಮಹತ್ವಾಕಾಂಕ್ಷೆಯ ಕಾಂತಾರ ಸಿನಿಮಾದ ಭರ್ಜರಿ ಯಶಸ್ಸಿನ ಕುರಿತು ರಶ್ಮಿಕಾ ಮೌನ ವಹಿಸಿರುವುದು ಕೂಡ ಹಲವು ಸಿನಿಪ್ರಿಯರ ಹುಬ್ಬೇರುವಂತಾಗಿಸಿದೆ.

‘ಕಾಂತಾರ’ ನೋಡಿ ಕೂಗಿ ಕೂಗಿ ಸುಸ್ತಾದ ಈ ನಟಿ ಎರಡನೇ ಸಲ ನೋಡುವಾಗ ಮಾಡಿದ್ದೇನು?

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank