More

    ಕೃತಕ ಬುದ್ದಿಮತ್ತೆಯ ತಂತ್ರಜ್ಞಾನಕ್ಕೆ ಸಿದ್ಧರಾಗಿ   ಡಾ.ಕೆ.ಎಸ್.ಶ್ರೀಧರ್ ಹೇಳಿಕೆ   ಪ್ರಜ್ಞಾ- ರಾಜ್ಯ ವಿಚಾರ ಸಂಕಿರಣದ ಸಮಾರೋಪ

    ದಾವಣಗೆರೆ: ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ ನಾನಾ ಉದ್ಯೋಗಾವಕಾಶಕ್ಕೆ ಕಾರಣವಾಗಬಹುದು. ನಾಳಿನ ತಂತ್ರಜ್ಞಾನಕ್ಕೆ ನಾವಿಂದೇ ಸಿದ್ಧರಾಗಬೇಕು ಎಂದು ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗ ಮುಖ್ಯಸ್ಥ ಡಾ.ಕೆ.ಎಸ್.ಶ್ರೀಧರ್ ಹೇಳಿದರು.
    ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕೃತಕ ಬುದ್ಧಿಮತ್ತೆಯ ಭವಿಷ್ಯ’ ಕುರಿತಾದ ರಾಜ್ಯಮಟ್ಟದ ವಿಚಾರ ಸಂಕಿರಣ ‘ಪ್ರಜ್ಞಾ’ದ ಸಮಾರೋಪದಲ್ಲಿ ಮಾತನಾಡಿದರು.
    ಕಂಪ್ಯೂಟರ್ ಬಂದಾಗ ಉದ್ಯೋಗಗಳೇ ನಾಶವಾಗುವ ಹೆದರಿಕೆ ಇತ್ತು. ಕಂಪ್ಯೂಟರ್ ಕ್ಷೇತ್ರವೇ ದೊಡ್ಡ ಉದ್ದಿಮೆಯಾಗಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದೆ. ಹೀಗಾಗಿ ಕೃತಕ ಬುದ್ದಿಮತ್ತೆ ಬಗ್ಗೆ ಭಯ ಬೇಡ ಎಂದರು.
    ಕೃತಕ ಮಿದುಳನ್ನು  ನಿರ್ಮಾಣ ಮಾಡುವ 1980ರ ಪ್ರಯತ್ನ ವಿಫಲವಾದರೂ ಈಗದು ಕೃತಕ ಬುದ್ಧಿಮತ್ತೆಯ ಮೂಲಕ ಸಾಧ್ಯವಾಗುವ ಸಂದರ್ಭ ಬಂದಿದೆ.  ಅಂಪೈರ್‌ಗಿಂತಲೂ ನಿಖರವಾಗಿ ಕ್ಯಾಮರಾಗಳು ತೀರ್ಪು ಹೇಳುತ್ತಿವೆ. ಶಿಕ್ಷಕರ ಜಾಗದಲ್ಲಿ ಮುಂದೆ ರೋಬಾಟ್‌ಗಳೇ ಬರಬಹುದು ಎಂದರು.
    ಹೃದಯದಲ್ಲಿ ವ್ಯತ್ಯಾಸವಾದರೆ ನಮ್ಮ ಅರಿವಿಗೆ ಬರುವ ಮೊದಲೇ ನಮ್ಮ ವೈದ್ಯರಿಗೆ ಅದರ ಮಾಹಿತಿ ಹೋಗುವ ಕಾಲ ದೂರವಿಲ್ಲ. ಏನೇ ಆದರೂ ಕೃತಕ ಬುದ್ಧಿಮತ್ತೆಯು ಪ್ರಕೃತಿದತ್ತವಾದ ನಮ್ಮ ಮೆದುಳಿನ ಕೂಸೇ ಎಂಬುದನ್ನು ತಿಳಿದಾಗ ಆತಂಕ ಇರುವುದಿಲ್ಲ ಎಂದರು.
    ಪ್ರಾಚಾರ್ಯ ಡಾ.ಬಿ. ವೀರಪ್ಪ ಮಾತನಾಡಿ ಭಾರತವು ಪ್ರತಿಭಾವಂತ ತಂತ್ರಜ್ಞಾನಿಗಳ ಕ್ಷೇತ್ರವಾಗಿ ಬದಲಾಗಿದೆ ಎಂದು ಹೇಳಿದರು. ಕಾಲೇಜಿನ ನಿರ್ದೇಶಕ ಡಾ. ಎಚ್.ವಿ.ಸ್ವಾಮಿ ತ್ರಿಭುವನಾನಂದ ಇದ್ದರು. ವಿಚಾರ ಸಂಕಿರಣದಲ್ಲಿ ಮಂಡನೆಯಾದ ಉತ್ತಮ ಸಂಶೋಧನಾ ಪ್ರಬಂಧಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ಡಾ.ಜಿ.ವೈ.ವಿಶ್ವನಾಥ್, ಪಿ.ಪ್ರತಿಮಾ, ಪ್ರೊ.ಬಿ.ಎಸ್. ನಾಗರಾಜ, ಪ್ರೊ. ಎಸ್.ಪಿ.  ಸರೋಜಾ, ಉಮಾಮಹೇಶ್ವರಪ್ಪ, ಪ್ರೊ. ಕೆ.ಎಸ್.ವಿಜಯ್, ಡಾ.ಜಿ.ಎಸ್. ವಿದ್ಯಾ, ಡಾ.ಕೆ.ಎಸ್. ಚೈತ್ರಾ, ಡಾ.ಎಂ. ಶ್ರುತಿ, ಡಾ. ಎ.ಜೆ. ನೀತಾ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.  ಅನಿಲ್ ಅತ್ತಾರ್ ಸ್ವಾಗತಿಸಿದರು. ಪ್ರೊ.ಬಿ.ವಿ.ಶ್ವೇತಾ ವಂದಿಸಿದರು. ದರ್ಶನ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts