ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ‘ಕೋಲ್ಕತ್ತಾ ನೈಟ್ ರೈಡರ್ಸ್’ ತಂಡ ಸುಲಭದಲ್ಲಿ ಈ ವರ್ಷದ ಐಪಿಎಲ್ ಫಿನಾಲೆಗೆ ಏರಿದೆ. ಹೈದರಾಬಾದ್ ನೀಡಿದ 159 ರನ್ಗಳ ಗುರಿಯನ್ನು ಕೇವಲ 13.4 ಓವರ್ಗಳಲ್ಲಿ ತಲುಪಿ ಕೆಕೆಆರ್ ಗೆಲುವಿನ ನಗೆ ಬೀರಿದೆ. ಇದನ್ನು ಶಾರುಖ್ ಖಾನ್ ಅವರು ಸಂಭ್ರಮಿಸಿದ್ದಾರೆ. ಆದರೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೇಂದ್ರ ಗೃಹ ಸಚಿವಾಲಯಕ್ಕೆ ಬಾಂಬ್ ಬೆದರಿಕೆ; ದೆಹಲಿ ಪೊಲೀಸರಿಂದ ಪರಿಶೀಲನೆ
ನಟ ಶಾರುಖ್ ಖಾನ್ ಅವರನ್ನು ಬುಧವಾರ ಮಧ್ಯಾಹ್ನ ಅಹಮದಾಬಾದ್ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಐಪಿಎಲ್ನ ಮೊದಲ ಪ್ಲೇ ಆಫ್ ಪಂದ್ಯದ ವೇಳೆ ಹೀಟ್ ಸ್ಟ್ರೋಕ್ಗೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ.
ಆದರೆ ಈ ಬಗ್ಗೆ ಆಸ್ಪತ್ರೆ ಅಥವಾ ಕುಟುಂಬದವರು ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಹೆಲ್ತ್ ಅಪ್ಡೇಟ್ ನೀಡಬೇಕು ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.