More

  ಮಾದಕ ವಸ್ತುಗಳ ಮಾರಾಟ, ಆರೋಪಿ ಬಂಧನ

  ದಾವಣಗೆರೆ : ನಗರದ ಕೆ.ಆರ್. ರಸ್ತೆಯ ಎಲ್.ಐ.ಸಿ ಕಚೇರಿ ಹಿಂಭಾಗದ ಬಿಟಿ ಲೇ ಔಟ್‌ನ ಪಾರ್ಕ್ ಮುಂಭಾಗದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
   ಮೂಲತಃ ರಾಜಸ್ಥಾನದ ಸಾಂಚೂರು ಜಿಲ್ಲೆಯ ಹಾಲಿವ್ ಗ್ರಾಮದ, ಪ್ರಸ್ತುತ ಬೆಂಗಳೂರಿನ ಜವರೇಗೌಡ ನಗರದ ರಾಮದಾಸ್ ಲೇ ಔಟ್ ನಿವಾಸಿ, ಸ್ಟೀಲ್ ರೇಲಿಂಗ್ ಕೆಲಸ ಮಾಡುವ ಅಶೋಕ್ ಯಾನೆ ಅಶೋಕ್ ಕುಮಾರ ಬಂಧಿತ ಆರೋಪಿಯಾಗಿದ್ದು ಆತನ ಬಳಿಯಿಂದ 4.5 ಲಕ್ಷ ರೂ. ಮೌಲ್ಯದ ಅಫೀಮ್ ಮೊಗ್ಗಿನ ಒಣಗಿದ ಪೌಡರ್, ಎಂಡಿಎಂಎ ಕ್ರಿಸ್ಟಲ್‌ಗಳು, ಓಪಿಯಂ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ.
   ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಅವರ ಮಾರ್ಗದರ್ಶನದಲ್ಲಿ, ದಾವಣಗೆರೆ ಆಜಾದ್ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಿನ್ ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಇಮ್ತಿಯಾಜ್, ಡಿಸಿಆರ್‌ಬಿ ವಿಭಾಗದ ಸಿಬ್ಬಂದಿ ಮಜೀದ್, ರಮೇಶ್ ನಾಯ್ಕ, ಕೆ.ಟಿ. ಆಂಜನೇಯ, ಬಾಲರಾಜ್, ಮಾಲತೇಶ್ ಕೆಳಗಿನಮನೆ, ಕೃಷ್ಣ ನಂದ್ಯಾಲ, ತಿಪ್ಪೇಸ್ವಾಮಿ, ಡಿ.ಬಿ. ನಾಗರಾಜ ಕಾರ್ಯಾಚರಣೆ ನಡೆಸಿದರು. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts