More

  ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

  ಹೈದರಾಬಾದ್​: ಟಾಲಿವುಡ್‌ನ ಯುವ ಚಕ್ರವರ್ತಿ ಅಕ್ಕಿನೇನಿ ನಾಗ ಚೈತನ್ಯ ಅವರು ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ. ಚೈತು ಗ್ಯಾರೇಜ್‌ನಲ್ಲಿ ಈಗಾಗಲೇ ಹಲವು ಐಷಾರಾಮಿ ಸ್ಪೋರ್ಟ್ಸ್ ಕಾರುಗಳಿದ್ದು, ಲೇಟೆಸ್ಟ್ ಆಗಿ ಮತ್ತೊಂದು ಹೊಸ ಸ್ಪೋರ್ಟ್ಸ್ ಕಾರು ಸೇರ್ಪಡೆಯಾಗಿದೆ. ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿರುವ ನಾಗಚೈತನ್ಯ ಈಗ ಪೋರ್ಷೆ 911 GT3 RS ಮಾದರಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.

  ಇದನ್ನೂ ಓದಿ: ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು: ಅಹಮದಾಬಾದ್​ನಲ್ಲಿ ಚಿಕಿತ್ಸೆ! ಏನಾಯ್ತು?

  ಈ ಐಷಾರಾಮಿ ಫೋರ್ಷಾ 911 ಜಿಟಿ3 ಆರ್‌ಎಸ್ ಕಾರಿನ ಎಕ್ಸ್ ಶೋರೂಂ ಬೆಲೆ 3.5 ಕೋಟಿ ರೂ. ಮೌಲ್ಯದಾಗಿದೆ. ಈ ಕಾರು ಆಟೋಮ್ಯಾಟಿಕ್, 7 ಗೇರ್ ಲಭ್ಯವಿದೆ. ಈ ಕಾರು ಪ್ರತಿ ಲೀಟರ್‌ಗೆ 7.4 ಕಿಮೀ ಮೈಲೇಜ್ ನೀಡಲಿದೆ. ಹಾಗೂ ಈ ಐಷಾರಾಮಿ ಸ್ಪೋರ್ಟ್ಸ್ ಕಾರು ಗಂಟೆಗೆ 296 ಕಿಲೋಮೀಟರ್ ವೇಗವನ್ನು ತಲುಪುತ್ತದೆ. ಸದ್ಯ ಕಾರು ಖರೀದಿಸಿರುವ ಖುಷಿಯಲ್ಲಿರುವ ನಟನಿಗೆ ಇದೀಗ ಅಭಿಮಾನಿಗಳು ವಿಶ್ ಮಾಡಿದ್ದಾರೆ.

  ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

  ನೂತನ ಕಾರು ಬ್ರ್ಯಾಂಡ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆ ಖರೀದಿಸುವ ಕಾರು ಪ್ರಿಯರಾಗಿರುವ ನಾಗ ಚೈತನ್ಯ ಬಳಿ ಕಪ್ಪು ಮರ್ಸಿಡಿಸ್ ಬೆಂಜ್ G63 AMG, ಕೆಂಪು ಬಣ್ಣದ ಫೆರಾರಿ 488 GTB ಸೇರಿದಂತೆ ವಿದೇಶಿ ಕಾರುಗಳ ಹಲವಾರು ಮಾದರಿಗಳನ್ನು ಹೊಂದಿದ್ದಾರೆ.

  ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

  ಹೊಸ ಪೋರ್ಷೆ 911 ಮಾದರಿಯ ಸ್ಪೋರ್ಟ್ಸ್ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚೆನ್ನೈನಲ್ಲಿರುವ ತಮ್ಮ ಪೋರ್ಷೆ ಸೆಂಟರ್‌ನಿಂದ ಸ್ಟಾರ್ ಹೀರೋ ಚೈತು ಅವರಿಗೆ ಕಾರನ್ನು ಯಶಸ್ವಿಯಾಗಿ ವಿತರಿಸಲಾಗಿದೆ ಎಂದು ಕಂಪನಿಯು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಪಡಿಸಿದೆ. ನಾಗ ಚೈತನ್ಯ ಅವರು ಕಾರಿನೊಂದಿಗೆ ಇರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

  ಸದ್ಯ ನಾಗಚೈತನ್ಯ ‘ತಾಂಡೇಲ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಚಂದು ಮೊಂಡೇಟಿ ನಿರ್ದೇಶಿಸಿದ್ದಾರೆ. ಜೊತೆಗೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಜೊತೆ ಹೊಸ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ಕೇಂದ್ರ ಗೃಹ ಸಚಿವಾಲಯಕ್ಕೆ ಬಾಂಬ್​ ಬೆದರಿಕೆ; ದೆಹಲಿ ಪೊಲೀಸರಿಂದ ಪರಿಶೀಲನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts