ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣ; ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗ್ತಿದ್ದಾರೆ: ಸಚಿವ ಸಂತೋಷ್​ ಲಾಡ್

Santosh Lad
Published on

ಹುಬ್ಬಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಆಡಳಿತರೂಡ ಕಾಂಗ್ರೆಸ್​ನ ಶಾಸಕರೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಸ್ವಪಕ್ಷದ ವಿರುದ್ಧವೇ ಕಿಡಿಕಾರುತ್ತಿದ್ದಾರೆ. ಇದೀಗ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ್​ ಲಾಡ್​ ನೀಡಿರುವ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ನಿತ್ಯ ನಡೆಯುವ ಕೆಲಸಗಳು ನಮಗೆ ಗೊತ್ತಾಗುವುದಿಲ್ಲ ಎಂದು ಹೇಳುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿಕ ಮಾತನಾಡಿದ ಸಚಿವ ಲಾಡ್, ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಬೇಕು ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನೇಹಾ ಹತ್ಯೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಸಮಾಜದಲ್ಲಿ ಇದು ಒಳ್ಳೆಯದಲ್ಲ. ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಂತೂ ಒಳ್ಳೆಯದಲ್ಲ. ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕುವುದು ಪೋಲಿಸರ ಕರ್ತವ್ಯ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗ್ತಿದ್ದಾರೆ. ಇಂಥ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

ಆರೋಪಿ ವಿಶ್ವನ ವಿರುದ್ಧ ಅಂಜಲಿ ಪೋಷಕರು ಮೊದಲೇ ದೂರು ಕೊಟ್ಟಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ. ಹೀಗಾಗಿ ಈಗಾಗಲೆ ಕ್ರಮ ಆಗಿದೆ. ಅಂಜಲಿ ಹತ್ಯೆ ತನಿಖೆ ನಡೆಯುತ್ತದೆ. ಗೃಹ ಸಚಿವರು ಬಂದು ಈ ಕುರಿತು ಮಾತಾನಾಡುತ್ತಾರೆ. ಇನ್ಮುಂದೆ ಇಂತಹ ಅಹಿತಕರ ಘಟನೆ ನಡೆದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸಂತೋಷ್​ ಲಾಡ್​​ ಹೇಳಿದ್ದಾರೆ. ಹತ್ಯೆಯಾದ ಅಂಜಲಿ ಕುಟುಂಬಕ್ಕೆ ತಮ್ಮ ಫೌಂಡೇಷನ್​​ನಿಂದ ಸಚಿವ ಸಂತೋಷ್ ಲಾಡ್ ಎರಡು ಲಕ್ಷ ರೂಪಾಯಿ ಚೆಕ್ ನೀಡಿದರು.

Santosh Lad
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net