ನವದೆಹಲಿ: ಎಎಪಿ ಸಂಸದೆ (ರಾಜ್ಯಸಭೆ) ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕನನ್ನು ಬಿಭವ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ತನಿಖೆಗೆ ಸಹಕರಿಸಲು ಸಿದ್ದವಿರುವುದಾಗಿ ಬಿಭವ್ ದೆಹಲಿ ಪೊಲೀಸರಿಗೆ ಇಮೇಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬಂಧಿಸಿದ್ದು, ಪೊಲೀಸರು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ಎಎಪಿ ರಾಜ್ಯಸಭೆ ಸದಸ್ಯೆಯಾದ ಸ್ವಾತಿ ಮಲಿವಾಲ್ ಅವರ ಮೇಲೆ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕನಿಗೆ ನೋಟಿಸ್ ನೀಡಿದ್ದರು.
Former PS of Delhi CM Arvind Kejriwal, Bibhav Kumar has been detained by Delhi Police in connection with the AAP MP Swati Maliwal assault case pic.twitter.com/RrukV9GYJ2
— ANI (@ANI) May 18, 2024
Bibhav Kumar arrested moments after writing to Delhi police: Ready to cooperate in the FIR against me, register FIR on my complaint too @thetribunechd pic.twitter.com/D4mjWpvslV
— Aditi Tandon (@anshumalini3) May 18, 2024