More

    ಸಿನಿಮಾ ಮಂದಿಗೆ ಸಿಹಿ ಸುದ್ದಿ; ಇನ್ಮುಂದೆ ನೀವು ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದು

    ಬೆಂಗಳೂರು: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಸಂಬಂಧಿ ಕೆಲಸಗಳು ಸ್ಥಗಿತಗೊಂಡು ಹತ್ರತ್ರ 50 ದಿನಗಳಾದವು. ಇಂದಿಗೂ ಸಿನಿಮಾ ಕೆಲಸಗಳು ಶುರುವಾಗಿಲ್ಲ. ಆದರೆ, ಇದೀಗ ಸಿನಿಮಾ ಮಂದಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಂದಿನಿಂದ (ಮೇ 9) ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಬಹುದಂತೆ. ಸರ್ಕಾರದ ಮಟ್ಟದಿಂದಲೂ ಈ ಬಗ್ಗೆ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು, ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಆಗಲಿದೆ.
    ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್​, ಕಂದಾಯ ಸಚಿವ ಆರ್ ಅಶೋಕ್​ ಅವರನ್ನು ಭೇಟಿಯಾಗಿ, ಅವರ ಸಮ್ಮುಖದಲ್ಲಿಯೇ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಿನಿಮಾ ಕೆಲಸಗಳ ಚಾಲನೆಗೆ ಸಂಬಂಧಿಸಿದಂತೆ ಮನವಿಯೊಂದನ್ನು ನೀಡಿದ್ದರು. ಮನವಿ ಪತ್ರದಲ್ಲಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗಷ್ಟೇ ಚಾಲನೆ ನೀಡುವ ಬಗ್ಗೆ ಕೋರಿದ್ದರು. ಅದರಂತೆ ಸಿಎಂ ಕಡೆಯಿಂದ ಒಪ್ಪಿಗೆ ಸಿಕ್ಕಿದ್ದು, ಕೆಲಸವನ್ನು ಶುರು ಮಾಡಿಕೊಳ್ಳುವಂತೆ ಹೇಳಿದ್ದಾರೆ ಎಂದು ಜೈರಾಜ್​ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಬಂಗಾರದ ಮನುಷ್ಯನನ್ನು ನೆನೆದ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​..

    ಹಾಗಾದರೆ ಯಾವೆಲ್ಲ ಕೆಲಸಗಳು ಶುರು? ಸದ್ಯಕ್ಕೆ ಶೂಟಿಂಗ್​ ಮುಗಿಸಿಕೊಂಡ ಸಿನಿಮಾಗಳು ಬಾಕಿ ಉಳಿದ ಡಬ್ಬಿಂಗ್​, ರೀ ರೆಕಾರ್ಡಿಂಗ್​, ಡಿಐ, ಸೌಂಡ್​ ಡಿಸೈನಿಂಗ್​, ಸೌಂಡ್​ ಮಿಕ್ಸಿಂಗ್​, ವಿಶ್ಯುವಲ್​ ಗ್ರಾಫಿಕ್ಸ್, ಸಿಜಿಐ ಸೇರಿ ಹಲವು ಪ್ಯಾಚ್​ ವರ್ಕ್​ ಕೆಲಸಗಳನ್ನು ಮಾಡಿಕೊಳ್ಳಬಹುದು. ಗಮನಿಸಬೇಕಾದ ಅಂಶ ಏನೆಂದರೆ, ಬೆರಳೆಣಿಕೆ ಜನ ಮಾತ್ರ ಈ ಕೆಲಸದಲ್ಲಿ ಹಾಜರಿರಬೇಕು. ಅನವಶ್ಯಕವಾಗಿ ಯಾರನ್ನೂ ಕೂರಿಸಿಕೊಳ್ಳುವಂತಿಲ್ಲ.

    ಇದನ್ನೂ ಓದಿ: ಅಲ್ಲಿ ಕನಸುಗಳಿವೆ, ನೂರಾರು ಕಥೆಗಳಿವೆ … ಚಿತ್ರಮಂದಿರಗಳ ಬಗ್ಗೆ ಸತೀಶ್ ಹೀಗೆ ಹೇಳುತ್ತಾರೆ ಕೇಳಿ

    ‘ಈ ನೀತಿಯಿಂದ ನಿಸ್ತೇಜವಾಗಿದ್ದ ಚಿತ್ರರಂಗ ಚುರುಕಾಗಲಿದೆ. ನಿರ್ಮಾಪಕರು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಲಿದ್ದಾರೆ. ಬಿಡುಗಡೆ ಬಗ್ಗೆ ಪ್ಲ್ಯಾನ್​ಗಳು ನಡೆಯಲಿವೆ. ಸದ್ಯ ಚಿತ್ರೀಕರಣೋತ್ತರ ಕೆಲಸಗಳಿಗೆ ಸಮ್ಮತಿ ಸಿಕ್ಕಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ, ಚಿತ್ರೀಕರಣಕ್ಕೂ ಆದಷ್ಟು ಬೇಗನೆ ಅವಕಾಶ ಸಿಗುವ ಸಾಧ್ಯತೆ ಇದೆ’ ಎಂದು ಅಧ್ಯಕ್ಷ ಜೈರಾಜ್​ ತಿಳಿಸಿದ್ದಾರೆ.

    ರಶ್ಮಿಕಾ ಮಂದಣ್ಣಗೆ ಮನೆಯಲ್ಲಿ ಬೇರೆಯದೇ ಹೆಸರಿದೆ; ಏನದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts