More

    ಚಿರತೆ ಬಂತು ಚಿರತೆ- 19ರಂದು ತೆರೆಗೆ

    ಶಿವಮೊಗ್ಗ: ಮಾನವ ಹಾಗೂ ವನ್ಯಜೀವಿ ಸಂಘರ್ಷದ ಕಥಾಹಂದರ ಹೊಂದಿರುವ ಚಿರತೆ ಬಂತು ಚಿರತೆ ಸಿನಿಮಾ ಏ.19ರಂದು ತೆರೆ ಕಾಣಲಿದೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿರುವ ಈ ಚಿತ್ರವನ್ನು ಸಂಪೂರ್ಣವಾಗಿ ಚಾಮರಾಜನಗರದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ಮಾಪಕ ಜಗದೀಶ್ ಮಲ್ನಾಡ್ ತಿಳಿಸಿದರು.

    ಮಾನವನ ಪ್ರಕೃತಿ ವಿರೋಧಿ ನಡೆಯಿಂದ ಉಂಟಾಗಿರುವ ಅನಾಹುತಗಳ ಬಗ್ಗೆ ಈ ಚಿತ್ರ ವಿವರಿಸಲಿದೆ. ವನ್ಯಮೃಗಗಳಿಗಿಂತಲೂ ನಮ್ಮ ನಡುವೆಯೇ ಇರುವ ಕೆಲವು ಮನುಷ್ಯರ ಕಿರಾತಕ ನಡೆಯನ್ನೂ ಈ ಚಿತ್ರ ತೆರೆದಿಡಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪ್ರಾಣಿ ಪ್ರಪಂಚದಲ್ಲಿ ಆದಿಯಿಂದಲೂ ಇರುವ ಸಹಬಾಳ್ವೆ ಹಾಗೂ ಪರಸ್ಪರ ಅವಲಂಬನೆ, ಬದುಕು ಹಾಗೂ ಬದುಕಲು ಬಿಡು ಎಂಬ ಸಿದ್ಧಾಂತವನ್ನು ಈ ಚಿತ್ರ ಪ್ರತಿಪಾದಿಸುತ್ತದೆ. ಹಳ್ಳಿಯೊಂದರ ಮುಖಂಡ ಮಾದಪ್ಪನ ಮನೆಯ ಎತ್ತೊಂದನ್ನು ಚಿರತೆ ಮಾರಣಾಂತಿಕ ಘಾಸಿಗೊಳಿಸುವ ಘಟನೆಯಿಂದ ಚಿತ್ರ ಆರಂಭವಾಗುತ್ತದೆ. ಬಳಿಕ ಆ ಚಿರತೆ ಊರಲ್ಲಿ ಉಂಟು ಮಾಡುವ ಆತಂಕ. ಅದನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ, ಅದನ್ನು ಸಾಯಿಸಲು ನಡೆಯುವ ಹುನ್ನಾರ ಎಲ್ಲವನ್ನೂ ಚಿತ್ರ ಎಳೆಎಳೆಯಾಗಿ ಬಿಚ್ಚಿಡುತ್ತದೆ ಎಂದರು.
    ರಂಗಭೂಮಿಯ ಅನೇಕ ಖ್ಯಾತನಾಮರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಾಮರಾಜನಗರದ ಭಾಷೆಯ ಸೊಗಡಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನಸೆಳೆದಿರುವ ಈ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಹೇಳಿದರು.
    ರಂಗ ಕಲಾವಿದ ಅ.ಚಿ.ಪ್ರಕಾಶ್, ಕಲಾವಿದರಾದ ಡಿ.ಆರ್.ನಾಗರಾಜ್, ಅ.ನಾ.ವಿಜಯೇಂದ್ರ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts