ಆತ್ಮಹತ್ಯೆಗೆ ರೈಲು ಹಳಿ ಮೇಲೆ ಮಲಗಿದ್ದವನ ಪ್ರಾಣವನ್ನು ಫೇಸ್​ಬುಕ್​ ಮೂಲಕವೇ ಕಾಪಾಡಿದ ಸ್ನೇಹಿತ!

Friend 1
ಸಾಂದರ್ಭಿಕ ಚಿತ್ರ
Published on

ವಿಜಯವಾಡ: ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಂಡರೆ ಒಳ್ಳೆಯ ಕೆಲಸ ಮಾಡಬಹುದು ಎಂಬುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿ ಜಾಲತಾಣದಲ್ಲಿ ನಡೆಯುವ ವಂಚನೆಗಳು ಕಡಿಮೆ ಇಲ್ಲ. ಏನೇ ಆಗಲಿ ಆಯ್ಕೆ ಅವರವರ ಮನಸ್ಸಿಗೆ ಬಿಟ್ಟದ್ದು.

ಫೇಸ್​ಬುಕ್​ನಲ್ಲಿ ಫ್ರೆಂಡ್ಸ್​ ರಿಕ್ವೆಸ್ಟ್​ ಸ್ವೀಕರಿಸುವಾಗ ಬಹಳ ಹುಷಾರಾಗಿರಬೇಕು. ಹಾಗಂತ ಎಲ್ಲರೂ ಕೆಟ್ಟವರೇನಲ್ಲ. ಕೆಲವು ಒಳ್ಳೆಯವರು ಸಹ ಇರುತ್ತಾರೆ ಎಂಬುದಕ್ಕೆ ಈ ಒಂದು ಘಟನೆ ಒಂದು ತಾಜಾ ಉದಾಹರಣೆ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬನ ಜೀವ ಫೇಸ್​ಬುಕ್​ ಸ್ನೇಹಿತನಿಂದಲೇ ಉಳಿದಿದೆ.

ಈ ಘಟನೆ ಆಂಧ್ರ ಪ್ರದೇಶ ಅನಂತಪುರದಲ್ಲಿ ನಡೆದಿದೆ. ಸತೀಶ್​ ಎಂಬಾತ ತನ್ನ ಫೇಸ್​ಬುಕ್​ ಸ್ನೇಹಿತ ಅನ್ನಪೂರ್ಣ ಸೇವಾ ಸಮಿತಿ ಸಂಸ್ಥಾಪಕ ಮಹಾಕಾಳಿ ಪ್ರಕಾಶ್​ ಎಂಬುವರಿಗೆ ಶನಿವಾರ ಮಧ್ಯಾಹ್ನ ಮೆಸೇಜ್​ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾನೆ.

ಬಳಿಕ ಪ್ರಕಾಶ್​ ಸಾಕಷ್ಟು ಬಾರಿ ಸತೀಶ್​ಗೆ ಕರೆ ಮಾಡಿದರೂ ಉತ್ತರಿಸದಿದ್ದಾಗ ತಕ್ಷಣ ಪ್ರಕಾಶ್​, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸುತ್ತಾನೆ. ಇದಕ್ಕೆ ತಕ್ಷಣ ಸ್ಪಂದಿಸುವ ಪೊಲೀಸರು ತಾಂತ್ರಿಕ ಸಹಾಯದಿಂದ ಸತೀಶ್​ 10 ಕಿ.ಮೀ ಅಂತರದಲ್ಲಿ ಮೆಸೇಜ್​ ಮಾಡಿರುವುದು ತಿಳಿಯುತ್ತದೆ. ಬಳಿಕ ಪೊಲೀಸರು ಆ ಸ್ಥಳವನ್ನು ಗುರುತಿಸುತ್ತಾರೆ.

ಈ ವೇಳೆ ಸತೀಶ್​ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಮೇಲೆ ಮಲಗಿರುತ್ತಾನೆ. ಇದನ್ನು ನೋಡಿದ ಪೊಲೀಸರು ಸತೀಶ್​ನನ್ನು ರಕ್ಷಿಸುತ್ತಾರೆ. ಇನ್ನು ಏಳು ನಿಮಿಷಗಳಲ್ಲಿ ರೈಲು ಬರುವ ಸಾಧ್ಯತೆಯು ಇತ್ತು. ಆದರೆ, ಅಷ್ಟರಲ್ಲಾಗಲೇ ಆತನ ಜೀವವನ್ನು ಪೊಲೀಸರು ಉಳಿಸಿದ್ದಾರೆ. ಅದಕ್ಕೆ ಕಾರಣ ಸತೀಶನ ಫೇಸ್​ಬುಕ್​ ಫ್ರೆಂಡ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net