

ಮುಂದುವರಿದ ಭಾಗ...
ಈ ಏಡಿಯ ಮಾಂಸ ಬಹಳ ರುಚಿಯಾಗಿರುತ್ತದೆಯಂತೆ, ಆದ್ದರಿಂದ ಆಕ್ಟೋಪಸ್‌ಗೆ ಏಡಿ ಅಂದರೆ ಬಹಳ ಇಷ್ಟ. ಕೆಲವು ಜಾತಿಯ ಏಡಿಗಳೂ ಕೂಡ ಆಕ್ಟೋಪಸ್‌ನ್ನು ಬೇಟೆಯಾಡಿ ತಿನ್ನುತ್ತವೆ. ಮನುಷ್ಯರು ಜೀವಂತ ಏಡಿಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಅವುಗಳಿಗೆ ಹಿಂಸೆ ನೀಡಿ ಅಡುಗೆ ಮಾಡಿ ತಿನ್ನುತ್ತಾರೆ. ಏಡಿಗಳನ್ನು ತಿನ್ನುವುದರಿಂದ ದೇಹಕ್ಕೆ ಬಹಳ ಉಪಯೋಗವಿದೆ, ಹೃದಯ ಸಂಬಂಧಿ ಕಾಯಿಲೆ ಮತ್ತು ಚರ್ಮದ ಉರಿ ಕಡಿಮೆಯಾಗುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ, ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ, ರಕ್ತ ಚಲನೆ ಚನ್ನಾಗಿ ಆಗಿ ದೇಹದಲ್ಲಿರುವ ಮಲಿನವನ್ನು ಹೊರಹಾಕಲು ಸಹಕಾರಿಯಾಗುತ್ತದೆ. ಪ್ರತಿವರ್ಷ ಅಂದಾಜು 15 ಲಕ್ಷ ಟನ್ ಏಡಿಗಳನ್ನು ಮನುಷ್ಯರು ತಿನ್ನುತ್ತಿದ್ದಾರೆ. ಆದರೆ, ಮುಸಲ್ಮಾನರು ಏಡಿಗಳನ್ನು ತಿನ್ನುವುದಿಲ್ಲ. ಏಡಿಗಳು ವಾಸಿಸುವ ಸ್ಥಳದಲ್ಲಿ ಮಾಲಿನ್ಯದ ಪರಿಣಾಮದಿಂದಾಗಿ ಮತ್ತು ಅವುಗಳ ವಾಸಸ್ಥಾನ ನಾಶವಾಗಿರುವುದರಿಂದ ಕೆಲವು ಜಾತಿಯ ಏಡಿಗಳು ನಿರ್ವಂಶವಾಗಿವೆ. ಮನುಷ್ಯರ ಅತಿಯಾದ ಮೀನುಗಾರಿಕೆಯಿಂದ ಮತ್ತು ಚಿಕ್ಕ ಚಿಕ್ಕ ಏಡಿಗಳನ್ನೂ ಬೇಟೆಯಾಡುವುದರಿಂದ ಹಲವು ಜಾತಿಯ ಏಡಿಗಳು ನಿರ್ವಂಶದ ಸ್ಥಿತಿಯನ್ನು ತಲುಪಿವೆ.
ಕೆಲವು ಜಾತಿಯವು ಒಂಟಿಯಾಗಿ ಬದುಕುತ್ತವೆ, ಕೆಲವು ಜಾತಿಯವು ತಮ್ಮ ಕುಟುಂಬದವರ ಜತೆ ಆಹಾರವನ್ನು ಹಂಚಿಕೊಂಡು, ದುಃಖ ಸಂತೋಷವನ್ನು ವಿನಿಮಯ ಮಾಡಿಕೊಂಡು, ಮಾತನಾಡಿಕೊಂಡು ಗುಂಪು ಗುಂಪಾಗಿ ಜೀವಿಸುತ್ತವೆ. ಅಂತಹ ಗುಂಪಿಗೆ ಕ್ಯಾಸ್ಟ್ ಎಂದು ಕರೆಯಲಾಗುವುದು. ಅವುಗಳು ಬಣ್ಣವನ್ನು ಗುರುತು ಹಚ್ಚುತ್ತವೆ, ಆದರೆ ಮನುಷ್ಯನ ಕಣ್ಣಿನಷ್ಟು ತೀಕ್ಷ್ಣತೆ ಇಲ್ಲ. ಇವು ಬಹುತೇಕವಾಗಿ, ಬೇಸಿಗೆ ಕಾಲದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಒಂದೆರಡು ವಾರದಲ್ಲಿ ಅಂದಾಜು ಒಂದು ಸಾವಿರದಿಂದ ಎರಡು ಸಾವಿರ ಮೊಟ್ಟೆಗಳನ್ನಿಡುತ್ತವೆ.