ಮಾಜಿ ಕಾನ್​ಸ್ಟೆಬಲ್ ಟಿಕೆಟ್, ಮಾಜಿ ಡಿಜಿಪಿಗೆ ಇಲ್ಲ! : ಬಿಜೆಪಿ, ಜೆಡಿಯು ತೊರೆದ ನಾಯಕರಿಗೆ ಎಲ್​ಜೆಪಿ ಗಾಳ

gupteshwar_pandey_parshuram
Published on

ನವದೆಹಲಿ/ಪಟನಾ: ಇತ್ತೀಚೆಗಷ್ಟೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆ ತೊರೆದು ಜೆಡಿಯು ಸೇರಿರುವ ಗುಪ್ತೇಶ್ವರ ಪಾಂಡೆಗೆ ಟಿಕೆಟ್ ದೊರಕಿಲ್ಲ. ಆದರೆ, ಮಾಜಿ ಕಾನ್​ಸ್ಟೆಬಲ್ ಪುರುಷೋತ್ತಮ ಚತುರ್ವೆದಿ ಬಿಜೆಪಿಯಿಂದ ಟಿಕೆಟ್ ಗಟ್ಟಿಸಿಕೊಂಡು, ಬಕ್ಸರ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಪಾಂಡೆ ತಮ್ಮ ತವರೂರಾದ ಬಕ್ಸರ್​ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಪಾಂಡೆಯವರನ್ನು ನ. 7ಕ್ಕೆ ಉಪಚುನಾವಣೆ ನಡೆಯಲಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗುವುದು ಎನ್ನಲಾಗಿದೆ.

ಬಿಹಾರದಲ್ಲಿ ಸೀಟು ಹಂಚಿಕೆ ಹಾಗೂ ನಾಯಕತ್ವ ವಿಚಾರದಲ್ಲಿ ಮುನಿಸಿಕೊಂಡು ಎನ್​ಡಿಎ ತೊರೆದಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನತಾಂತ್ರಿಕ ಪಕ್ಷವು (ಎಲ್​ಜೆಪಿ) ಬಿಜೆಪಿ ಹಾಗೂ ಜೆಡಿಯು ಬಿಟ್ಟು ಬರುತ್ತಿರುವ ನಾಯಕರಿಗೆ ಗಾಳ ಹಾಕಿದೆ. ಕೆಲವು ಹಾಲಿ ಹಾಗೂ ಮಾಜಿ ಶಾಸಕರ ಸಹಿತ ಸುಮರು 10 ಬಿಜೆಪಿ ನಾಯಕರಿಗೆ ಎಲ್​ಜೆಪಿ ಟಿಕೆಟ್ ಸಿಗುವ ಸಂಭವವಿದೆ. ಜೆಡಿಯು ಟಿಕೆಟ್ ನಿರಾಕರಿಸಿರುವ ಇಬ್ಬರು ಹಾಲಿ ಶಾಸಕರಿಗೆ ಕೂಡ ಎಲ್​ಜಿಪಿಯಿಂದ ಟಿಕೆಟ್ ದೊರೆಯುವುದು ಖಚಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net