More

    ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ

    ಕೋಲ್ಕತ್ತ: ನಗರದ ಕೆಲವು ಭಾಗಗಳು ಮತ್ತು ಹೌರಾ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳು ಇಂದು ಅಕ್ಷರಶಃ ಯುದ್ಧ ವಲಯಗಳಾಗಿ ಬದಲಾಗಿವೆ.

    ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಮತ್ತು ಪೊಲೀಸರ ನಡುವೆ ದೊಡ್ಡ ಘರ್ಷಣೆಯೇ ನಡೆದಿದೆ. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ರಸ್ತೆ ತೂರಾಟ, ಕಲ್ಲು ತೂರಾಟ ನಡೆಸಿದ್ದಾರೆ. ಟೈರ್​ಗಳನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.  ಇದನ್ನೂ ಓದಿ: ಮೋಸ್ಟ್​ ಡೇಂಜರಸ್​ ಟಾಪ್​ 10 ಸೆಲೆಬ್ರಿಟಿಗಳಿವರು- ಇವರಿಗಾಗಿ ಸದಾ ಹುಡುಕಾಟ…

    ಪಶ್ಚಿಮ ಬಂಗಾಳದಲ್ಲಿ ಪದೇಪದೆ ಬಿಜೆಪಿ ಕಾರ್ಯಕರ್ತರು ಹತ್ಯೆಗೀಡಾಗುತ್ತಿದ್ದಾರೆ..ಅದಕ್ಕೆ ಟಿಎಂಸಿ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿ, ದೀದಿ ಸರ್ಕಾರದ ವಿರುದ್ಧ ಇಂದು ‘ನಬನ್ನಾ ಚಲೋ’ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಮೆರವಣಿಗೆ ಹೊರಟಿದ್ದರು. ಈ ವೇಳೆ ಅವರನ್ನು ಪೊಲೀಸರು ತಡೆದಾಗ ಘರ್ಷಣೆ ಏರ್ಪಟ್ಟಿದೆ.

    ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ತಕರ್ತರು ಕೋಲ್ಕತ್ತ ಹಾಗೂ ಹೌರಾಹ್​ದಿಂದ ಮುಖ್ಯಮಂತ್ರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದರು. ಅವರನ್ನು ಪೊಲೀಸರು ತಡೆಯುತ್ತಿದ್ದಂತೆ ಸ್ಥಳದಲ್ಲಿ ಪರಿಸ್ಥಿತಿ ಗಂಭೀರವಾಯಿತು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಲ್ಲದೆ ಟಿಯರ್ ಗ್ಯಾಸ್ ಪ್ರಯೋಗವನ್ನೂ ಮಾಡಿದರು. ಹೌರಾಹ್​ನ ಸೇತುವೆ ಮೇಲೆ ಗುಂಪುಗೂಡಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನೀರು ಹಾಯಿಸಿದ್ದಾರೆ. ಇದನ್ನೂ ಓದಿ: ಸಾವಿರಾರು ಮಂದಿಗೆ ಊಟ ಹಾಕುವ ದಂಪತಿ ತುತ್ತು ಅನ್ನಕ್ಕೆ ಪರದಾಡಿದಾಗ… ನಡೆಯಿತೊಂದು ಪವಾಡ!

    ಪೊಲೀಸರ ಕ್ರಮವನ್ನು ಖಂಡಿಸಿದ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ, ನಮ್ಮ ಮೇಲೆ ಲಾಠಿ ಚಾರ್ಜ್​ ಮಾಡುತ್ತಾರೆ..ಆದರೆ ಕಲ್ಲು ತೂರಾಟ ನಡೆಸಿದ್ದು ನಾವಲ್ಲ. ಖಿದಿರ್​ಪುರ್​ ಕಡೆಯಿಂದ ಕಲ್ಲು ತೂರಾಟ ನಡೆದಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಈ ಘರ್ಷಣೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜು ಬ್ಯಾನರ್ಜಿ, ಸಂಸದರಾದ ಜ್ಯೋತಿರ್ಮಯಿ ಮೆಹ್ತೋ ಸೇರಿ ಹಲವರು ಗಾಯಗೊಂಡಿದ್ದಾರೆ.

    ಕರೊನಾ ಮಧ್ಯೆ ಇಷ್ಟೊಂದು ದೊಡ್ಡ ಪ್ರತಿಭಟನೆ ನಡೆಸಿ, ಗಲಾಟೆ ಆಗಿದ್ದರೂ ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡ ಬಿಜೆಪಿ ನಾಯಕ ಕೈಲಾಶ್​ ವಿಜಯ್​ವಾರ್ಗಿಯಾ, ನಮ್ಮ ಎಲ್ಲ ಕಾರ್ಯಕರ್ತರೂ ಮಾಸ್ಕ್​ ಧರಿಸಿದ್ದರು. ನಮಗೆ ಮಾತ್ರ ನಿಯಮನಾ? ಮೊನ್ನೆಮೊನ್ನೆಯಷ್ಟೇ ಮಮತಾ ಬ್ಯಾನರ್ಜಿ ಸಾವಿರಾರು ಜನರೊಂದಿಗೆ ಸೇರಿ ಪ್ರತಿಭಟನೆ ಮಾಡಿದ್ದಾರೆ. ಈಗ ನಮಗೆ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುತ್ತಾರೆ..ಅವರಿಗೆ ಯಾಕೆ ಯಾವ ಕಾನೂನು..ನಿಯಮಗಳೂ ಪಾಲನೆಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    55 ವರ್ಷದ ಕೊಲೆ ಆರೋಪಿ ಕೇಸು ಅಪ್ರಾಪ್ತರ ಕೋರ್ಟ್​ಗೆ ವರ್ಗ! ಸುಪ್ರೀಂನಿಂದ ಕುತೂಹಲದ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts