More

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಮಾಡಿಸಿ, 10 ಲಕ್ಷ ರೂ. ಪಡೆದ ಶಿಕ್ಷಕನ ವಿರುದ್ಧ ಎಫ್​ಐಆರ್​!

    ಗುಜರಾತ್: ನೀಟ್​-ಯುಜಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಆರು ಅಭ್ಯರ್ಥಿಗಳು, ಎಕ್ಸಾಂನಲ್ಲಿ ತಾವು ಪಾಸ್​ ಆಗಲು ಸಹಾಯ ಮಾಡುವಂತೆ ಶಿಕ್ಷಕನಿಗೆ ಕೋರಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಆತ, ಹೆಚ್ಚಿನ ಬೇಡಿಕೆಯನ್ನೇ ಮುಂದಿಟ್ಟಿದ್ದ. ಓಕೆ ಎಂದ ಕಿಡಿಗೇಡಿಗಳು, ಒಬ್ಬ ವಿದ್ಯಾರ್ಥಿಗೆ ತಲಾ 10 ಲಕ್ಷ ರೂ. ಎನ್ನುವಂತೆ 60 ಲಕ್ಷ ಕೊಡುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಎಕ್ಸಾಂಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಸಹಾಯ ಮಾಡ್ತಿದ್ದ ಶಿಕ್ಷಕನನ್ನು ಸ್ಥಳೀಯ ಪೊಲೀಸರು ರೆಡ್​ಹ್ಯಾಂಡ್​ ಆಗಿ ಸೆರೆಹಿಡಿದಿದ್ದು, ಘಟನೆ ಗುಜರಾತ್​ನ ಪಂಚಮಲ್​ ಜಿಲ್ಲೆಯ ಗೋದ್ರಾದಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ, ಸರ್ಕಾರದ ವತಿಯಿಂದ ಇಬ್ಬರು ಪತ್ನಿ ಇರುವವರಿಗೆ 2 ಲಕ್ಷ ರೂ. ನೆರವು: ಕಾಂಗ್ರೆಸ್​ ನಾಯಕ 

    ಸದ್ಯ ಶಾಲಾ ಶಿಕ್ಷಕನ ವಿರುದ್ಧ ಕ್ರಿಮಿನಲ್ ಕೇಸ್​ ದಾಖಲಿಸಿಕೊಂಡಿರುವ ಪೊಲೀಸರು, ನೀಟ್-ಯುಜಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಾಜರಾಗಿದ್ದ ಆರು ವಿದ್ಯಾರ್ಥಿಗಳಿಂದ 10 ಲಕ್ಷ ರೂ. ಪಡೆದ ಟೀಚರ್, ಇಂತಹ ಕ್ರಿಮಿನಲ್​ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಅಪರಾಧ ಹಾಗೂ ತೀವ್ರ ಖಂಡನೀಯ ಎಂದು ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರುಪಡಿಸಿದ್ದಾರೆ.

    ಭೌತಶಾಸ್ತ್ರ ಶಿಕ್ಷಕರಾದ ತುಷಾರ್​ ಭಟ್​ ಸೇರಿದಂತೆ ಪರಶುರಾಮ್​ ರಾಯ್​ ಮತ್ತು ಆರೀಫ್​ ವೋರಾ ಎಂಬುವವರ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನು ಮೆರೀಟ್​ನಲ್ಲಿ ಪಾಸ್​ ಮಾಡಿಕೊಡುವಂತೆ ತಿಳಿಸಿ, ಏಳು ಲಕ್ಷ ರೂ. ಹಣವನ್ನು ಮುಂಗಡ ಪಾವತಿಯಾಗಿ ಶಿಕ್ಷಕನಿಗೆ ನೀಡಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆದ ನಮಗೆ ತುಷಾರ್​ ಕಾರಿನಲ್ಲಿ 7 ಲಕ್ಷ ರೂ. ಹಣ ಸಿಕ್ಕಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

    ಸದ್ಯ ಎಫ್​ಐಆರ್​​ ದಾಖಲಿಸಿಕೊಂಡಿರುವ ಗೋದ್ರಾ ತಾಲೂಕು ಪೊಲೀಸರು, ಜಿಲ್ಲಾ ಶಿಕ್ಷಣ ಅಧಿಕಾರಿಯ ದೂರಿನ ಅನ್ವಯ ಈ ಕೇಸ್​ ರಿಜಿಸ್ಟರ್​ ಮಾಡಿರುವುದಾಗಿ ತಿಳಿಸಿದ್ದಾರೆ. ಜೈ ಜಲರಾಮ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ತುಷಾರ್​ ಭಟ್​ರನ್ನು ನೀಟ್​ ಪರೀಕ್ಷೆಯ ಸಲುವಾಗಿ ಕೇಂದ್ರದ ಅಧೀಕ್ಷಕರಾಗಿ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ,(ಏಜೆನ್ಸೀಸ್).

    ‘ಸಿಗರೇಟ್​ ಸೇದದವರು ಲೂಸರ್ಸ್’​! ವೈದ್ಯ ಕೊಟ್ಟ ಟಕ್ಕರ್​ಗೆ ಮಹಿಳೆ ಶಾಕ್, ಸಖತ್​ ಆಗಿ ಹೇಳಿದ್ರಿ ಬಿಡಿ ಸರ್ ಎಂದ್ರು ನೆಟ್ಟಿಗರು

    ಧೋನಿ ಸಹ ಪಾಠ ಕಲಿಸಲು ಸಾಧ್ಯವಿಲ್ಲ… ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್ ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts