More

    ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

    ಚಿತ್ರದುರ್ಗ:ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಶುಕ್ರವಾರ ಶ್ರೀ ಶಿವಶರಣ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಟು ಸ್ವೀಕಾರ ಸಮಾರಂಭ ಜರುಗಿತು.
    ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ನಾಲ್ಕನೇ ತರಗತಿ ವಿದ್ಯಾರ್ಥಿ ಲಖನ್‌ಗೆ ಶ್ರೀಗಳು, ಜಯಬಸವ ದೇವರು ಎಂದು ನಾಮ ಕರಣ ಮಾಡುವ ಮೂಲಕ,ಬಸವಾದಿ ಶರಣರ ಸಂಪ್ರದಾಯದಂತೆ ವಟುವನ್ನು ಶ್ರೀಮಠಕ್ಕೆ ಸ್ವೀಕರಿಸಿದರು. ವಟುವಟಿಕೆ ವಿಭೂತಿ,ಲಿಂಗಧಾರಣೆ,ದೀಕ್ಷೆ,ಇಷ್ಟ ಲಿಂಗಪೂಜೆ,ಪಾದ ಪೂಜೆ ಮೊದಲಾದ ಧಾರ್ಮಿಕ ವಿಧಿಗಳು ನೆರವೇರಿದವು.
    ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ,ಹೊಸದುರ್ಗ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ,ಕಾಗಿನಲೆ ಶಾಖಾ ಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ,ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸೇರಿದಂತೆ ನಾನಾ ಮಠಾಧೀಶರು,ಶರಣೆಯರು ಸಮಾರಂಭವನ್ನು ಸಾಕ್ಷೀಕರಿಸಿದರು. ವಟುವಿನ ಪೂರ್ವಾಶ್ರಮದ ತಂದೆ ಮಹಾಲಿಂಗಪ್ಪ ಹಾ ಗೂ ತಾಯಿ ಸವಿತಾ,ಸಹೋದರ,ಸಹೋದರಿಯರು ಇದ್ದರು.
    ಈ ವೇಳೆ ಮಾತನಾಡಿದ ಶ್ರೀ ಮಾದಾರ ಶ್ರೀಗಳು,ಲಖನ್‌ಗೆ ದೀಕ್ಷೆ ನೀಡುವ ಮೂಲಕ ಜಯಬಸವ ದೇವರು ಎಂದು ಮರು ನಾ ಮಕರಣ ಮಾಡಲಾಗಿದೆ. ಅವರ ಮುಂದಿನ ವಿದ್ಯಾಭ್ಯಾಸ ಶ್ರೀ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ಆದಿಚುಂಚನಗಿರಿಯಲ್ಲಿ ನಡೆಯಲಿದೆ.
    ವಿದ್ಯಾಭ್ಯಾಸ ಪೂರ್ಣ ಬಳಿಕ ಮಾದಾರ ಚನ್ನಯ್ಯ ಗುರುಪೀಠದ ಟ್ರಸ್ಟ್ ಸದಸ್ಯರು,ಗೋವಿಂದ ಎಂ.ಕಾರಜೋಳ,ಕೆ.ಎಚ್.ಮುನಿಯ ಪ್ಪ,ಚಂದ್ರಪ್ಪ,ನಾರಾಯಣಸ್ವಾಮಿ ಮೊದಲಾದ ಸಮಾಜದ ಹಿರಿಯರ ತೀರ್ಮಾದವನ್ನಾಧರಿಸಿ ಮುಂದಿನ ಕ್ರಮಗಳನ್ನು ಜರುಗಿಸಲಾಗು ವುದು ಎಂದರು.
    ಈ ವೇಳೆ ವಟುವಿನ ಪೂರ್ವಾಶ್ರಮದ ತಂದೆ ಮಹಾಲಿಂಗಪ್ಪ ಮಾತನಾಡಿ,ಶ್ರೀ ಮಠಕ್ಕೆ ತಾವು 2014ರಿಂದಲೂ ನಡೆದುಕೊಳ್ಳುತ್ತಿದ್ದೇವೆ ಎಂದರೆ, ತಾಯಿ ಸವಿತಾ ಬುದ್ಧಿಯವರ ಕಡೆಗೆ ಪುತ್ರನನ್ನು ಒಪ್ಪಿಸಿದ್ದೇವೆ ಎಂದರು. ಮಹಾಲಿಂಗಪ್ಪ ದಂಪತಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದು, ಈಗ ಈ ದಂಪತಿ ಒಬ್ಬ ಪುತ್ರ ಶ್ರೀ ಮಠದ ವಟುವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts